SAREGAMAPA Lil Champ 19: ದಿಯಾ ಹೆಗ್ಡೆ ನೀತಿ ಕಥೆಗೆ ಜಡ್ಜ್‌ಗಳೇ ಸುಸ್ತು.. ನೆಟ್ಟಿಗರು ಕೊಟ್ರಿ ಸರಿಯಾದ ಉತ್ತರ!

By ಎಸ್ ಸುಮಂತ್

ಜ್ಹೀ ಕನ್ನಡದಲ್ಲಿ ವಾರಪೂರ್ತಿ ಧಾರಾವಾಹಿಗಳ ಆಡಂಬರವಾದರೆ ವಾರದ ಕೊನೆಯಲ್ಲಿ ಅಂದ್ರೆ ಶನಿವಾರ ಮತ್ತು ಭಾನುವಾರ ರಿಯಾಲಿಟಿ ಶೋಗಳ ಅನಾವರಣ. ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರತಿಭೆಗಳ ಅನಾವರಣವಾಗುತ್ತೆ. ಅದರಲ್ಲೂ ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಸದ್ಯ ಎಲ್ಲರ ಅಚ್ಚುಮೆಚ್ಚಾಗಿದೆ. ದಣಿದವರ ಪಾಲಿನ ಮನರಂಜನೆಯ ವರವಾಗಿದೆ ಎಂದರೂ ತಪ್ಪಾಗುವುದಿಲ್ಲ. ಅಷ್ಟು ಅದ್ಭುತ ಕಾರ್ಯಕ್ರಮವದು.

ಪ್ರತಿ ಸೀಸನ್‌ನಲ್ಲೂ ಸ್ಪೆಷಲ್ ಸಿಂಗರ್ ಅಂತ ಒಬ್ಬರು ಇರ್ತಾರೆ. ಎಂಟರ್ಟೈನ್ಮೆಂಟ್ ಮಾಡೋದಕ್ಕೆ ಅವರೇ ಮುಂದೆ ಇರ್ತಾರೆ. ಈ ಬಾರಿಯ ಸರಿಗಮಪ ಲಿಟರ್ ಚಾಂಪ್‌ನಲ್ಲಿ ಮನರಂಜನೆಯನ್ನು ನೀಡುತ್ತಾ ಇರುವುದು ದಿಯಾ ಹೆಗ್ಡೆ. ಬರೀ ಮನರಂಜನೆ ಮಾತ್ರ ಅಲ್ಲ, ಒಳ್ಳೊಳ್ಳೆ ಮೆಸೇಜ್‌ಗಳನ್ನು ದಿಯಾ ನೀಡುತ್ತಾ ಇರುತ್ತಾಳೆ. ಒಳ್ಳೊಳ್ಳೆ ಕಥೆಗಳನ್ನು ಹೇಳುವ ದಿಯಾಳಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದಾರೆ.

ಬುದ್ದಿವಂತ, ದಡ್ಡರ ಕಥೆ ಹೇಳಿದ ದಿಯಾ

ದಿಯಾ ಪುಟ್ಟಿ ಬತ್ತಳಿಕೆಯಲ್ಲಿ ಸಿಕ್ಕಾಪಟ್ಟೆ ಕಥೆಗಳೇನೋ ಇರುತ್ತವೆ. ವೀಕೆಂಡ್‌ನಲ್ಲಿ ದಿಯಾಳಿಂದ ಒಂದೊಂದೇ ಕಥೆಗಳು ಹೊರಗೆ ಬರುತ್ತಾ ಇರುತ್ತೆ. ಇಂದು ದಡ್ಡರು ಮತ್ತು ವಿದ್ಯಾವಂತರ ನಡುವಿನ ಕಥೆ ಹೇಳಿದ್ದಾಳೆ. "ಒಂದು ಹಳ್ಳಿ. ಆ ಹಳ್ಳಿಯಲ್ಲಿ ರಾಮ, ಶ್ಯಾಮ, ಭೀಮ ಮತ್ತು ಸೋಮ. ಇದರಲ್ಲಿ ಸೋಮ ದಡ್ಡ. ಒಂದಿನ ಎಲ್ಲರು ಹೋಗ್ತಾ ಇರುವಾಗ ಎದುರುಗಡೆ ಒಂದು ಪ್ರಾಣಿ ಸತ್ತಿರುತ್ತೆ. ವಿದ್ಯಾವಂತರಾದ ಮೂವರು ಒಂದೊಂದು ಹೆಸರೇಳಿ ನಾವು ಪ್ರಾಣ ಉಳಿಸೋಣಾ ಅಂತ ಹೋಗ್ತಾರೆ. ಆದರೆ, ಸೋಮ ಬೇಡ ಎಂದರು ಕೇಳದೆ, ಪ್ರಾಣ ಕೊಡುತ್ತಾರೆ. ಅದು ಹುಲಿಯಾಗಿರುತ್ತೆ. ಪ್ರಾಣ ಕೊಟ್ಟವರನ್ನೇ ತಿಂದು ಬಿಡುತ್ತೆ. ಮರವೇರಿ ಕುಳಿತಿದ್ದ ಸೋಮ ಉಳಿಯುತ್ತಾನೆ" ಇದು ದಿಯಾ ಹೇಳಿದ ಕಥೆ.

SAREGAMAPA Lil season 19 Reality show Written Update on March 26th episode.

ಕಥೆ ಹೇಳಿದ ದಿಯಾ ಮೊದಲು ಹೇಮಂತ್ ಬಳಿ ಈ ಕಥೆಯ ನೀತಿ ಪಾಠವೇನು ಎಂದು ಕೇಳುತ್ತಾಳೆ. ಹೇಮಂತ್ ಬಳಿ ಸರಿಯಾದ ಉತ್ತರವಿಲ್ಲ. ವಿಜಯ್ ಪ್ರಕಾಶ್ "ಮರವೇರಿ ಕುಳಿತುಕೊಳ್ಳೋದು ಉತ್ತಮ" ಎಂದಿದ್ದಾರೆ. ಅನುರಾಧ ಅವರ ಉತ್ತರ " ಮರ ಹತ್ತಿದ್ರೆ ಅಮರ". ಯಾವುದು ಉತ್ತರವಾಗಿರಲಿಲ್ಲ.

ನೆಟ್ಟಿಗರಿಂದ ಸಿಕ್ತು ಪರ್ಫೆಕ್ಟ್ ಉತ್ತರ

ಆದರೆ, ದಿಯಾಳ ಪ್ರಶ್ನೆಗೆ ಉತ್ತರ ನೀಡಿದ್ದು ಮಾತ್ರ ನೆಟ್ಟಿಗರು. ಜಡ್ಜ್‌ಗಳು ಉತ್ತರಿಸಲು ಸುಸ್ತಾಗಿ ಹೋದ್ರು. ನೆಟ್ಟಿಗರೆಲ್ಲ ಒಬ್ಬೊಬ್ಬರಾಗಿ ದಿಯಾಳ ಪ್ರಶ್ನೆಗೆ ಉತ್ತರ ನೀಡಿದ್ದರು. "ವಿದ್ಯೆಯಲ್ಲ ವಿವೇಕ ಮುಖ್ಯ. ಶಕ್ತಿಗಿಂತ ಯುಕ್ತಿ ಮೇಲು. ಅವಶ್ಯಕತೆ ಇಲ್ಲದ ವಿಚಾರಕ್ಕೆ ತಲೆ ಹಾಕಬಾರದು" ಹೀಗೆ ಹಲವು ರೀತಿಯಲ್ಲಿ ಉತ್ತರಗಳನ್ನು ಕಮೆಂಟ್‌ಗಳ ರೂಪದಲ್ಲಿ ಉತ್ತರಿಸಿದ್ದಾರೆ.

SAREGAMAPA Lil season 19 Reality show Written Update on March 26th episode.

ಜೀ ಕನ್ನಡದ ವೀಕೆಂಡ್ ಪ್ರೋಗ್ರಾಂನಲ್ಲಿ ಸರಿಗಮಪ ಲಿಲ್ ಚಾಂಪ್ ಸೀಸನ್ 19 ಎಲ್ಲರನ್ನು ಸೆಳೆದಿರುವ ಕಾರ್ಯಕ್ರಮ. ಈ ಪ್ರೋಗ್ರಾಂ ದಿಯಾ ಹೆಗ್ಡೆ ಎಂಬ ಪುಟಾಣಿ ಸಿಂಗರ್ ಇದ್ದಾಳೆ. ದಿಯಾಗೆ ಜಾನಪದ ಶೈಲಿ ಅಂದ್ರೆ, ನೀರು ಕುಡಿದಷ್ಟೇ ಸುಲಭ. ಆಕೆಯ ಉತ್ತರ ಕರ್ನಾಟಕದ ಭಾಷೆಗಂತೂ ಎಲ್ಲರೂ ಮಾರು ಹೋಗಿದ್ದಾರೆ. ಜಡ್ಜ್‌ಗಳಿಗೂ ದಿಯಾ ಪುಟ್ಟಿ ಎಂದರೆ ತುಂಬಾ ಇಷ್ಟ. ಈಗ ದಿಯಾ ಹೇಳಿರುವ ಮಾತು ಎಲ್ಲರನ್ನೂ ಯೋಚನಾ ಲಹರಿಗೆ ತಿರುಗಿಸಿದೆ.

More from Filmibeat

English summary
Zee Kannada Reality Show SAREGAMAPA Lil Champ season 19 Written Update on March 26th episode. Here is the details about Diya Hegde Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X