ಸರಿಗಮಪ ಲಿಟ್ಲ್ ಚಾಂಪ್ ಫೈನಲ್ ಗೆ ಉಷಾ ಉತುಪ್!

ಈ ಬಾರಿಯ ಗ್ರ್ಯಾಂಡ್ ಫಿನಾಲೆಗೆ ಖ್ಯಾತ ಗಾಯಕಿ ಉಷಾ ಉತುಪ್ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ ಜೊತೆಯಾಗಿ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಇರುತ್ತಾರೆ. ಈ ಸರಣಿಗಾಗಿ ಜೀ ಕನ್ನಡ ಸಾಕಷ್ಟು ಸಿದ್ಧತೆಗಳನ್ನು ನಡೆಸಿ ರಾಜ್ಯದಾದ್ಯಂತ ಬಾಲ ಪ್ರತಿಭೆಗಳಿಗಾಗಿ ಆಡಿಷನ್ ನಡೆಸಿತ್ತು.
ಈ ಸರಣಿಯಲ್ಲಿ ವಿವಿಧ ಹಂತಗಳ ಎಲಿಮಿನೇಷನ್ ಇದ್ದು ಅಂತಿಮ ವಿಜೇತರು ಭಾರಿ ಬಹುಮಾನವನ್ನು ತನ್ನದಾಗಿಸಿಕೊಳ್ಳಲಾಗಿದ್ದಾರೆ. ಮಕ್ಕಳ ಮನಸ್ಸಿಗೆ ನೋವುಂಟಾಗದಂತೆ ಸ್ಪರ್ಧೆ ನಡೆಸಿರುವುದಾಗಿ ವಾಹಿನಿ ತಿಳಿಸಿದೆ.
'ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 9' ಅಂತಿಮ ಹಣಾಹಣಿ ಅತ್ಯದ್ಭುತವಾಗಿ ಮೂಡಿಬರಲಿದೆ ಎಂದು ಚಾನಲ್ ಹೇಳಿದೆ. ಈ ಬಾರಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಹಲವು ಆಕರ್ಷಣೆಗಳೂ ಇರುತ್ತವಂತೆ. ಹಲವಾರು ಕಲಾವಿದರು ಈ ಬಾರಿಯ ಶೋನಲ್ಲಿ ಪಾಲ್ಗೊಳ್ಳಲಿದ್ದು ಮತ್ತಷ್ಟು ಹುರುಪು ತರಲಿದ್ದಾರೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Zee Kannada's reality musical show for children 'Sa Re Ga Ma Pa Little Champs' season 9 grand finale being aired on Zee at 9 pm on 28th October.


Click it and Unblock the Notifications











