ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರ ಆಡಿಷನ್‌ ಶುರು

By ಪ್ರಿಯಾ ದೊರೆ

ಕಾಮಿಡಿ ಕಿಲಾಡಿಗಳು ಸೀಸನ್‌- 4 ರಿಯಾಲಿಟಿ ಶೋ ಜೀ ಕನ್ನಡ ವಾಹಿನಿಯಲ್ಲಿ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಇನ್ನು ಡಿಕೆಡಿ ಕಾರ್ಯಕ್ರಮ ಕೂಡ ಮುಗಿಯುವ ಹಂತ ತಲುಪಿದ್ದು, ಇದು ಮುಗಿದ ಬಳಿಕ ಸರಿಗಮಪ ಆರಂಭವಾಗುವುದು ಪಕ್ಕಾ ಆಗಿದೆ.

ಕಳೆದ ತಿಂಗಳೇ ಸರಿಗಮಪ ಲಿಟಲ್‌ ಚಾಂಪ್ಸ್‌ ರಿಯಾಲಿಟಿ ಶೋಗಾಗಿ ಮಕ್ಕಳ ಹುಡುಕಾಟ ನಡೆದಿತ್ತು. ಇದಕ್ಕಾಗಿ ಜೀ ಕನ್ನಡ ವಾಹಿನಿ ಮುದ್ದಾಗಿ ಹಾಡುವ ಮಕ್ಕಳ ಆಡಿಷನ್‌ಗೆ ಸಿದ್ಧತೆಯನ್ನೂ ಮಾಡಿಕೊಂಡಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಮಕ್ಕಳು ಆಡಿಷನ್‌ ಕರೆಯಲಾಗಿದೆ.

ಜೀ ಕನ್ನಡ ವಾಹಿನಿಯ ಹಲವು ಕಾರ್ಯಕ್ರಮಗಳಲ್ಲಿ ಪ್ರೇಕ್ಷರ ಮನ ಗೆದ್ದ ಮತ್ತೊಂದು ಕಾರ್ಯಕ್ರಮವೆಂದರೆ ಅದು ಸರಿಗಮಪ ಲಿಟಲ್ ಚಾಂಪ್ಸ್. ಕರ್ನಾಟಕದ ಮೂಲೆ ಮೂಲೆಯಿಂದ ತೊದಲು ನುಡಿವ ಮಕ್ಕಳನ್ನು ಒಂದು ಕಡೆ ಸೇರಿಸಿ, ಮಕ್ಕಳಲ್ಲಿ ಹಾಡಿನ ಕಲೆ ಬಗ್ಗೆ ಮೊಳಕೆಯಲ್ಲಿ ಪಾಠ ಮಾಡುವ ಶಾಲೆಯೇ ಸರಿಗಮಪ ಲಿಟಲ್ ಚಾಂಪ್ಸ್.

 ಹಿಟ್‌ ಶೋ ಸರಿಗಮಪ ಲಿಟಲ್‌ ಚಾಂಪ್ಸ್‌

ಹಿಟ್‌ ಶೋ ಸರಿಗಮಪ ಲಿಟಲ್‌ ಚಾಂಪ್ಸ್‌

ಸರಿಗಮಪ ಲಿಟಲ್‌ ಚಾಂಪ್ಸ್‌ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಹಿಟ್‌ ಆಗಿರುವ ಶೋ. ಈಗಾಗಲೇ ಬರೋಬ್ಬರಿ 18 ಸೀಸನ್‌ಗಳು ಪ್ರಸಾರಗೊಂಡಿವೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ, ಪುಟಾಣಿಗಳ ಕಂಠದಿಂದ ಸುಮಧುರ ಹಾಡುಗಳನ್ನು ಹಾಡಿಸಿ ವೀಕ್ಷಕರ ಕಿವಿ ತಂಪಾಗಿಸುವ ಈ ಶೋ ಎಲ್ಲರ ನೆಚ್ಚಿನ ಕಾರ್ಕ್ರಮ ಉತ್ತಮ ಗಾಯಕ ಪ್ರತಿಭೆಗಳನ್ನು ವಾಹಿನಿ ಆಯ್ಕೆ ಮಾಡಿ, ಸರಿಗಮಪ ಲಿಟಲ್‌ ಚಾಂಪ್ಸ್‌ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಇದರಲ್ಲಿ ಗೆದ್ದ ಪುಟಾಣಿಗಳಿಗೆ ಬಹುಮಾನ ಸಿಕ್ಕರೆ, ಇವರ ಜೊತೆಗೆ ಉತ್ತಮವಾಗಿ ಹಾಡಿದ ಮಕ್ಕಳಿಗೆ ಹಿನ್ನೆಲೆ ಗಾಯಕರಾಗುವ ಅವಕಾಶವೂ ಒದಗಿ ಬರುತ್ತದೆ.

 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19

ಈ ಶೋನಲ್ಲಿ ಭಾಗವಹಿಸಿದ ಕೆಲ ಮಕ್ಕಳು ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪುಟಾಣಿಗಳ ಕಂಠಕ್ಕೆ, ಅವರ ಮುಗ್ಧತೆಗೆ ಪ್ರೇಕ್ಷಕರು ಕಂಬನಿಯನ್ನೂ ಮಿಡಿದಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಪುಟಾಣಿ ಪ್ರತಿಭೆಗಳು ವೇದಿಕೆ ಮೇಲೆ ಮಿಂಚಿ, ಹಿನ್ನೆಲೆ ಗಾಯಕರೂ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ಸಕ್ಸಸ್‌ ಕಂಡ ಪುಟಾಣಿಗಳು ಮತ್ತಷ್ಟು ಕಂದಮ್ಮಗಳಿಗೆ ಸ್ಪೂರ್ತಿಯಾಗಿದ್ದಾರೆ. ಇದೀಗ ಮತ್ತೆ ಸರಗಮಪ ಲಿಟಲ್‌ ಚಾಂಪ್ಸ್‌ ಆರಂಭವಾಗಲಿದ್ದು, ಜೀ ಕನ್ನಡ ವಾಹಿನಿ ಪುಟಾಣಿಗಳಿಗೆ ಸ್ವಾಗತ ಕೋರಿದೆ.

 6 ಜಿಲ್ಲೆಗಳಲ್ಲಿ ನಡೆದ ಆಡಿಷನ್

6 ಜಿಲ್ಲೆಗಳಲ್ಲಿ ನಡೆದ ಆಡಿಷನ್

'ಸರಿಗಮಪ ಲಿಟಲ್ ಚಾಂಪ್ಸ್' ಸೀಸನ್ 19ಕ್ಕೆ ಆಡಿಷನ್‌ಗೆ ಕಳೆದ ತಿಂಗಳೇ ವೆಲ್ಕಂ ಮಾಡಲಾಗಿತ್ತು. ಆಸಕ್ತ ಪೋಷಕರು ಮಕ್ಕಳು ಹಾಡಿದ ವೀಡಿಯೋಗಳನ್ನು ವಾಹಿನಿಗೆ ತಲುಪಿಸುವಂತೆ ಫೋನ್‌ ನಂಬರ್‌ ಅನ್ನು ನೀಡಿತ್ತು. ಇನ್ನು ನಿನ್ನೆ ಮತ್ತು ಮೊನ್ನೆ ಇದರ ಆಡಿಷನ್‌ ಸಹ ನಡೆದಿದೆ. ಸದ್ಯ 6 ಜಿಲ್ಲೆಗಳಲ್ಲಿ ಆಡಿಷನ್‌ ನಡೆದಿದ್ದು, ಕೆಲವರನ್ನು ವಾಹಿನಿ ಆಯ್ಕೆ ಮಾಡಿದೆ. 4 ರಿಂದ 15 ವಯಸ್ಸಿನ ಮಕ್ಕಳು ಈ ಬಾರಿ ವೇದಿಕೆಯಲ್ಲಿ ಹಾಡಲಿದ್ದಾರೆ. ಈ ಬಾರಿಯೂ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನೆಲೆಯ ಮಕ್ಕಳು ಭಾಗಿಯಾಗಿದ್ದಾರೆ. ಮೈಸೂರು, ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ಮೊನ್ನೆ ಶನಿವಾರ ಆಡಿಷನ್‌ ನಡೆದಿದ್ದು, ಬೆಂಗಳೂರು, ಉಡುಪಿ, ಹುಬ್ಬಳ್ಳಿಯಲ್ಲಿ ನಿನ್ನೆ ಆಡಿಷನ್‌ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಆಡಿಷನ್‌ ನಡೆಯಲಿದೆ.

 ವೀಕೆಂಡ್‌ನಲ್ಲಿ ಹಾಡಿನ ಹಬ್ಬ

ವೀಕೆಂಡ್‌ನಲ್ಲಿ ಹಾಡಿನ ಹಬ್ಬ

ಇನ್ನು ಈ ತಿಂಗಳು ಆಡಿಷನ್‌ನಲ್ಲಿ ಆಯ್ಕೆ ಆಗುವ ಮಕ್ಕಳು 'ಸರಿಗಮಪ ಲಿಟಲ್‌ ಚಾಂಪ್ಸ್‌' ಸೀಸನ್‌ 19ರಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ತಿಂಗಳು ಈ ರಿಯಾಲಿಟಿ ಶೋ ಪ್ರಾರಂಭವಾಗುವ ಸಾಧ್ಯತೆಗಳಿವೆ. ಆದರೆ ಇನ್ನೂ ವಾಹಿನಿ ಈ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಕಾಮಿಡಿ, ಡ್ರಾಮಾ, ಡ್ಯಾನ್ಸ್‌ ನೋಡಿ ಸಾಕೆಂದ ಪ್ರೇಕ್ಷಕರಿಗೆ ಮುಂದಿನ ತಿಂಗಳಿನಿಂದ ವೀಕೆಂಡ್‌ ನಲ್ಲಿ ಹಾಡಿನ ಹಬ್ಬ ಜೋರಾಗಿರಲಿದೆ. ಈ ಬಾರಿಯೂ ಅನುಶ್ರೀ ಅವರು ಆಂಕರಿಂಗ್‌ ಮಾಡಲಿದ್ದಾರೆ. ಆದರೆ, ತೀರ್ಪುಗಾರರ ಸ್ಥಾನದಲ್ಲಿ ಯಾರೆಲ್ಲಾ ಕೂರಬಹುದು ಎಂಬ ಕುತೂಹಲವಿದೆ.

More from Filmibeat

English summary
Saregamapa Little Champs Season 19 Audition Have Already started. Yesterday and day before yesterday audition done and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X