ಇಂಗ್ಲಿಷ್ ಶೈಲಿಯಲ್ಲಿ ಕನ್ನಡ ಹಾಡು ಹಾಡಿದ್ದ ಸರಿಗಮಪ ಸೀಸನ್ 20ರ ವಿಶೇಷ ಸ್ಪರ್ಧಿ; ಯುಎಸ್‌ನಲ್ಲಿ ಭರ್ಜರಿ ಸ್ವಾಗತ

By ಅನಿತಾ ಬನಾರಿ

ಸರಿಗಮಪ ಸೀಸನ್ 20 ಬಹಳ ಅದ್ಧೂರಿಯಾಗಿ ನಡೆಯಿತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ರಿಯಾಲಿಟಿ ಸಿಂಗಿಂಗ್ ಶೋ, ಈ ಭಾರಿಯಂತೂ ಬಹಳಷ್ಟು ವಿಶೇಷತೆಗಳನ್ನಿಟ್ಟುಕೊಂಡಿತ್ತು. ಹೌದು! ಈ ಬಾರಿ ಸರಿಗಮಪ ವಿಶ್ವಾದಾದ್ಯಂತ ಕಲಾವಿದರಿಗೆ ಕರೆ ನೀಡಿತ್ತು.

ಅಮೆರಿಕಾದಲ್ಲಿ ನೆಲೆಸಿರುವ ಪುಟಾಣಿ ಹುಡುಗ ವಿರಾಟ್ ಸರಿಗಮಪ ಸೀಸನ್ 20ರಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದ. ಆಡಿಶನ್‌ನಲ್ಲೇ ಜಡ್ಜ್‌ಗಳ ಮನಗೆದ್ದಿದ್ದ ಈ ಪುಟಾಣಿ ಪೋರ, ನನ್ನ ಕನ್ನಡ ಅಭಿಮಾನವನ್ನು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಿದ್ದ.

Saregamapa Season 10 Special Contestant Virat Returns to USA

ಸರಿಗಮಪ ಸೀಸನ್ 20ರ ಶೋ ಉದ್ದಕ್ಕೂ ಹಲವಾರು ಹಾಡುಗಳನ್ನು ತನ್ನದೇ ಶೈಲಿಯಲ್ಲಿ ಹಾಡಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಈತ ಇದೀಗ ಅಮೆರಿಕಾಗೆ ತೆರಳಿದ್ದಾನೆ. ಮೂಲತಃ ಕರ್ನಾಟಕದವನಾದ ಈತ ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕಾದಲ್ಲಿ. ಅಮೆರಿಕನ್ ಇಂಗ್ಲಿಷ್ ಶೈಲಿಯಲ್ಲಿಯೇ ಎಲ್ಲಾ ಹಾಡುಗಳನ್ನು ಹಾಡಿ ಸರಿಗಮಪ ಸೀಸನ್ ಜಡ್ಜಸ್, ಜ್ಯೂರಿ ಮೆಂಬರ್ಸ್, ಅಭಿಮಾನಿಗಳು ಹಾಗೂ ಪ್ರೇಕ್ಷಕರು ಎಲ್ಲರ ಮನವನ್ನು ಗೆದ್ದ ಈತನಿಗೆ ಮತ್ತೆ ತನ್ನ ಶಾಲೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ಬರೋಬ್ಬರಿ ನಾಲ್ಕು ತಿಂಗಳ ಕಾಲ ತನ್ನ ವಿದ್ಯಾಭ್ಯಾಸವನ್ನು ಬದಿಗಿಟ್ಟು ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿ ಬೇರೆ ಬೇರೆ ಕನ್ನಡ ಹಾಡುಗಳನ್ನು ಹಾಡಿ, ತನ್ನ ಸಂಗೀತ ಕಲೆ ಹಾಗೂ ಕನ್ನಡ ಅಭಿಮಾನವನ್ನು ಮೆರೆದಿದ್ದ ಈ ಪೋರ ಇದೀಗ ತನ್ನ ಶಾಲೆಗೆ ತೆರಳಿದ್ದು, ಅವನ ಶಾಲೆಯಲ್ಲಿ ಅವನ ಸಹಪಾಠಿಗಳು ಹಾಗೂ ಶಿಕ್ಷಕರು ಅದ್ಧೂರಿಯಾಗಿ ಅವನನ್ನು ಸ್ವಾಗತಿಸಿದ್ದಾರೆ.

ವಿರಾಟ್‌ನ ಅಮೆರಿಕಾದ ಶಾಲೆಯ ಪ್ರಿನ್ಸಿಪಾಲ್ ಹಾಗೂ ಕ್ಲಾಸ್ ಟೀಚರ್ ಅವನಿಗೆ ಅದ್ಧೂರಿ ಹಾಗೂ ಆಪ್ತತೆಯ ಅಪ್ಪುಗೆ ನೀಡಿ ಸ್ವಾಗತವನ್ನು ಕೋರಿದ್ದು ಅದರ ಫೋಟೋಗಳನ್ನು ವಿರಾಟ್ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಇದೀಗ ಈ ಫೋಟೋಗಳು ಬಹಳಷ್ಟು ವೈರಲ್ ಆಗಿದ್ದು, ಇದಕ್ಕೆ ಕನ್ನಡ ಅಭಿಮಾನಿಗಳು ಹಾಗೂ ವಿರಾಟ್ ಫ್ಯಾನ್ ಫಾಲೋವರ್ಸ್ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಫೋಟೋಗಳಿಗೆ ಕ್ಯಾಪ್ಶನ್ ಆಗಿ "ನನ್ನ ಶಾಲೆಯ ಪ್ರಿನ್ಸಿಪಾಲ್ ಆದ ಮಿಸೆಸ್ ಲಾರೆನ್ಸ್ ಹಾಗೂ ನನ್ನ ಕ್ಲಾಸ್ ಟೀಚರ್ ಆದ ಮಿಸ್ ನಾಕ್ಸ್ ನನಗೆ ಬಹಳಷ್ಟು ರೀತಿಯಲ್ಲಿ ಸಪೋರ್ಟ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಸರಿಗಮಪ ಟ್ರೋಫಿಯನ್ನು ಅವರಿಗೆ ತೋರಿಸಿ ನನ್ನ ಸಂಭ್ರಮವನ್ನು ಹಂಚಿಕೊಂಡಿದ್ದೇನೆ. ಅವರ ಸಹಕಾರವಿಲ್ಲದೆ ಇವೆಲ್ಲವೂ ಸಾಧ್ಯವಾಗುತ್ತಿರಲಿಲ್ಲ" ಎಂದು ಬರೆದುಕೊಂಡಿದ್ದಾನೆ ಪುಟಾಣಿ ವಿರಾಟ್.

ಈ ಬಗ್ಗೆ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಫಾಲೋವರ್ಸ್, ಪುಟಾಣಿ ನಿನಗೆ ಒಳ್ಳೆಯದಾಗಲಿ ನಿನ್ನ ಕನ್ನಡ ಅಭಿಮಾನಕ್ಕೆ ನಾವೆಲ್ಲ ಮನಸ್ಸು ಇದ್ದೇವೆ ಎಂದು ಹರಸಿ ಹಾರೈಸಿದ್ದಾರೆ. ವಿಶೇಷವೆಂದರೆ ಈ ಪುಟಾಣಿ ಗಾಯಕ ವಿರಾಟ್ ಅಮೆರಿಕಾಗೆ ತೆರಳುವ ಮೊದಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದಾನೆ. ಇದು ಕೂಡ ವಿರಾಟ್‌ನ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಅಪ್ಪು ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ.

More from Filmibeat

English summary
Saregamapa Season 10 Special Contestant Virat got a grand welcome when he returned to USA:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X