ಸರಿಗಮಪ ಲಕ್ಷ್ಮಿಗೆ ದೊಡ್ಡ ಆಫರ್ ನೀಡಿದ ಹಂಸಲೇಖ
'ಸರಿಗಮಪ ಸೀಸನ್ 14' ಕಾರ್ಯಕ್ರಮ ನೋಡಿದ ವೀಕ್ಷಕರಿಗೆ ಮರೆಯಲಾಗದ ಸ್ಪರ್ಧಿಯಾಗಿದ್ದು ಲಕ್ಷ್ಮಿ. ಬೆಳಗಾವಿಯ ಲಕ್ಷ್ಮಿ ತಮ್ಮ ಹಾಡಿನ ಮೂಲಕ ಮೋಡಿ ಮಾಡಿದ್ದರು. ಈಗ ಲಕ್ಷ್ಮಿ ಮತ್ತೆ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಈ ಬಾರಿಯ ಸರಿಗಮಪ ಸಂಚಿಕೆಗೆ ಹಳೆಯ ಸ್ಪರ್ಧಿಗಳ ಆಗಮನ ಆಗಿದೆ. ಈ ಸೀಸನ್ ಸ್ಪರ್ಧಿಗಳ ಜೊತೆಗೆ ಹಳೆಯ ಸೀಸನ್ ಸ್ಪರ್ಧಿಗಳು ಹಾಡು ಹಾಡಿದ್ದಾರೆ. ಮೊನ್ನಮ್ಮನ ಹಾಗೂ ಲಕ್ಷ್ಮಿ ಜುಗಲ್ ಬಂದಿ ಇಲ್ಲಿ ನಡೆಯಿತು.
ಸರಿಗಮಪ ಕಾರ್ಯಕ್ರಮದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದ ಲಕ್ಷ್ಮಿ, ಆ ಶೋ ನಿಂದ ಹೊರ ಹೋದ ಬಳಿಕ ತಮ್ಮ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸಿದರು. ಜೊತೆಗೆ ಹಂಸಲೇಖ ಅವರ ಕಡೆಯಿಂದ ಲಕ್ಷ್ಮಿ ಭವಿಷ್ಯಕ್ಕೆ ದೊಡ್ಡ ಬೆಂಬಲ ಸಿಕ್ಕಿತು.

250ಕ್ಕೂ ಹೆಚ್ಚಿನ ಕಾರ್ಯಕ್ರಮ ನೀಡಿದ ಲಕ್ಷ್ಮಿ
ಸರಿಗಮಪ ಕಾರ್ಯಕ್ರಮದಲ್ಲಿ ಲಕ್ಷ್ಮಿ ಫೈನಲ್ ಹಂತಕ್ಕೆ ಆಯ್ಕೆ ಆಗಲಿಲ್ಲ. ಆದರೆ, ತನ್ನ ಗಾಯಕನ ಮೂಲಕ ಈಕೆ ಸಾಕಷ್ಟು ಫೇಮಸ್ ಆಗಿದ್ದಳು. ಈ ಜನಪ್ರಿಯತೆಯಿಂದ ಲಕ್ಷ್ಮಿಗೆ ಒಳ್ಳೆಯ ಅವಕಾಶಗಳು ಸಿಕ್ಕವು. ಸರಿಗಮಪ ದಿಂದ ಹೊರ ಬಂದ ಮೇಲೆ ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದರು. ಈಗ ಅವರ ಶೋಗಳ ಸಂಖ್ಯೆ 250ರ ಗಡಿ ದಾಟಿದೆ.

ಕಾರ್ಯಕ್ರಮಗಳ ಜೊತೆಗೆ ಸಂಗೀತ ಕಲಿಕೆ
ಲಕ್ಷ್ಮಿ ಸರಿಗಮಪ ಕಾರ್ಯಕ್ರಮಕ್ಕೆ ಬಂದಾಗ ಸಂಗೀತ ಕಲಿತಿರಲಿಲ್ಲ. ಆದರೂ, ಪ್ರಯತ್ನ ಮಾಡಿ ಒಂದು ಹಂತದವರೆಗೆ ಮುನ್ನಡೆದರು. ಕಾರ್ಯಕ್ರಮದ ಬಳಿಕ ಸಂಗೀತದ ಕಲಿತೆ ಶುರು ಮಾಡಿದ್ದಾರೆ. ತಮ್ಮ ಕಾರ್ಯಕ್ರಮಗಳ ಜೊತೆಗೆ ಸಂಗೀತ ಅಭ್ಯಾಸವನ್ನು ಮುಂದುವರೆಸಿದ್ದಾರೆ.

ಓದು, ಕೆಲಸ ಎರಡನ್ನೂ ನೀಡುತ್ತೇವೆ ಎಂದ ಹಂಸಲೇಖ
ಲಕ್ಷ್ಮಿ ಬೆಳವಣಿಗೆ ಗಮನಿಸಿದ ಹಂಸಲೇಖ ಆಕೆಗೆ ಸಂಗೀತದಲ್ಲಿಯೇ ಮುಂದುವರೆಯುವ ಸಲಹೆ ನೀಡಿದರು. ಆಕೆಗೆ ಬ್ಯಾಚುಲರ್ ಆಫ್ ಮ್ಯೂಸಿಕ್ ಮತ್ತು ಮಾಸ್ಟರ್ ಆಫ್ ಮ್ಯೂಸಿಕ್ ಕೋರ್ಸ್ ಅನ್ನು ಉಚಿತವಾಗಿ ಹೇಳಿಕೊಡುವುದಾಗಿ ತಿಳಿಸಿದರು. ಕೋರ್ಸ್ ಮುಗಿದ ಬಳಿಕ ಒಂದು ಕೆಲಸ ನೀಡುತ್ತೇನೆ, ಆ ಕೆಲಸಕ್ಕೆ ಪ್ರಾರಂಭದ ಸಂಬಳ 25 ಸಾವಿರ ಇರುತ್ತದೆ ಎಂಬ ಭರವಸೆ ನೀಡಿದರು.

ಮೊನ್ನಮ್ಮ ಹಾಗೂ ಸಂಗೀತ ಜೊತೆಗೆ ಹಾಡು
''ಯಾವ ದೇಶದ ಗಂಡು ಇವನು...'' ಹಾಡು ಲಕ್ಷ್ಮಿಗೆ ದೊಡ್ಡ ಜನಪ್ರಿಯತೆ ನೀಡಿತ್ತು. ಅದೇ ಹಾಡನ್ನು ಈಗ ಮೊನ್ನಮ್ಮ ಹಾಗೂ ಸಂಗೀತ ಜೊತೆಗೆ ಲಕ್ಷ್ಮಿ ಹಾಡಿದ್ದಾರೆ. ಲಕ್ಷ್ಮಿಯ ಸಂಗೀತ ಪಯಣ ಮೂರು ಜನ ತೀರ್ಪುಗಾರರಿಗೆ ಬಹಳ ಖುಷಿ ನೀಡಿದೆ. ಲಕ್ಷ್ಮಿ ಹಾಡಿಗೆ ಹಂಸಲೇಖ ಗೋಲ್ಟನ್ ಬಜಾರ್ ನೀಡಿದ್ದಾರೆ. ಲಕ್ಷ್ಮಿಗೆ ಈ ಬಾರಿ ಸ್ಪರ್ಧಿ ಗಳ ಪೈಕಿ ಸಂಗೀತ ಅಂದ್ರೆ ಬಹಳ ಇಷ್ಟವಂತೆ.


Click it and Unblock the Notifications











