ವಶೀಕರಣ ಅಂದ್ರು.. ಅವತ್ತು ಬೇರೆ ದಾರಿ ಇರ್ಲಿಲ್ಲ.. ಬೇಗ ನಮ್ಮನ್ನು ಒಪ್ಪಿಕೊಳ್ಳಿ ಅಪ್ಪ; ಪೃಥ್ವಿ ಭಟ್

ಮೂರು ತಿಂಗಳ ಹಿಂದೆ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್‌ ಪ್ರೇಮ ವಿವಾಹ ಭಾರೀ ಸದ್ದು ಮಾಡಿತ್ತು. ಪೃಥ್ವಿ ಭಟ್ ಪೋಷಕರ ವಿರೋಧದ ನಡುವೆಯೂ ಇಬ್ಬರೂ ಮಾ.27ರಂದು ಮದುವೆ ಆಗಿದ್ದರು. ಮಗಳ ಮದುವೆ ಬಗ್ಗೆ ತಂದೆ ಶಿವಪ್ರಸಾದ್‌ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಕ್ಕಿತ್ತು.

ಜೀ ಕನ್ನಡ ವಾಹಿನಿಯಲ್ಲಿ ಅಭಿಷೇಕ್ ಕೆಲಸ ಮಾಡುತ್ತಿದ್ದಾರೆ. ಮಗಳಿಗೆ ವಶೀಕರಣ ಮಾಡಿ ಮದುವೆ ಮಾಡಿಸಲಾಗಿದೆ ಎಂದು ಪೃಥ್ವಿಭಟ್ ತಂಡೆ ಆರೋಪಿಸಿದ್ದರು. ಜೀ ಕನ್ನಡ ಸರಿಗಮಪ ಶೋ ಜ್ಯೂರಿ ನರಹರಿ ದೀಕ್ಷಿತ್ ಅವರ ಸಹಾಯದಿಂದ ಇಬ್ಬರೂ ಮದುವೆ ಆಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದಕ್ಕೆ ಪೃಥ್ವಿ ಭಟ್, ಅಭಿ ಹಾಗೂ ನರಹರಿ ದೀಕ್ಷಿತ್ ಸ್ಪಷ್ಟನೆ ನೀಡಿದ್ದರು.

SaReGaMaPa Singer Prithvi Bhat and Abhishek Break Silence on Love Marriage Controversy

ಮದುವೆ ಬಳಿಕ ಎಲ್ಲಾ ಆರೋಪಗಳಿಗೆ ಪೃಥ್ವಿ ಭಟ್ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ಸಂಬಂಧಿಸಿ ಆಡಿಯೋ ಕೂಡ ವೈರಲ್ ಆಗಿತ್ತು. ಇವರಿಬ್ಬರ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು. ಯೂಟ್ಯೂಬ್ ಚಾನಲ್‌ಗಳಲ್ಲಿ ತರಹೇವಾರಿ ಸುದ್ದಿ ಪ್ರಸಾರವಾಗಿತ್ತು. ಆದರೆ ಯಾರು ಕೂಡ ಅದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ. ಅಭಿ-ಪೃಥ್ವಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು.

ಇದೇ ಮೊದಲ ಬಾರಿಗೆ ಅಭಿ ಹಾಗೂ ಪೃಥ್ವಿ ಜೋಡಿ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದಾರೆ. ಕೀರ್ತಿ ENT ಕ್ಲಿನಿಕ್ ಸಂದರ್ಶನದಲ್ಲಿ ತಮ್ಮ ಮದುವೆ, ಪ್ರೀತಿ ಎಲ್ಲದರ ಬಗ್ಗೆ ದಂಪತಿ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಕಂಪ್ಲೀಟ್ ಸಂದರ್ಶನ ಪ್ರಸಾರವಾಗಲಿದೆ. ಸದ್ಯ ಪ್ರೋಮೊದಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಜೋಡಿ ಹಂಚಿಕೊಂಡಿರುವುದು ಗೊತ್ತಾಗುತ್ತಿದೆ.

SaReGaMaPa Singer Prithvi Bhat and Abhishek Break Silence on Love Marriage Controversy

ಮೊದಲಿಗೆ ತಮ್ಮಿಬ್ಬರ ಮದುವ ಬಗ್ಗೆ ಯೂಟ್ಯೂಬ್‌ ಚಾನಲ್‌ಗಳಲ್ಲಿ ಪ್ರಸಾರ ಆಗಿದ್ದ ವೀಡಿಯೋಗಳ ಬಗ್ಗೆ ಅಭಿ-ಪೃಥ್ವಿ ಮಾತನಾಡಿದ್ದಾರೆ. ಕೆಲ ಹೆಡ್‌ಲೈನ್‌ಗಳು ಬಹಳ ನೋವುಂಟು ಮಾಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ಪೃಥ್ವಿ ಅವರ ತಂದೆ ಜೊತೆ ಅಭಿ ಫೋನ್ ಮಾಡಿ ತಾವು ಮಾಡಿದ್ದು ತಪ್ಪು ಎಂದು ಹೇಳಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಪೋಷಕರ ಒಪ್ಪಿಗೆ ಇಲ್ಲದೇ ಯಾಕೆ ಮದುವೆಯಾದೆ ಎನ್ನುವ ಬಗ್ಗೆಯೂ ಪೃಥ್ವಿ ಭಟ್ ಪ್ರತಿಕ್ರಿಯಿಸಿದ್ದಾರೆ. "ಆ ಕ್ಷಣಕ್ಕೆ ನಮಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಮದುವೆ ಆಗಬೇಕಾಯಿತು. ಅಪ್ಪ ಮೆಸೇಜ್ ಮಾಡ್ತಾರೆ" ಎಂದು ತಿಳಿಸಿದ್ದಾರೆ. ಜೊತೆ ಹಾಡಿನಲ್ಲೇ ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟಿದ್ದಾರೆ.

ಮದುವೆ ದಿನ ಏನೆಲ್ಲಾ ಆಯ್ತು ಎಂದು ಕೇಳಿದಾಗ 'ಹುಡುಗರು' ಚಿತ್ರದ 'ಶಂಭೋ ಶಿವ ಶಂಭೋ' ಹಾಡನ್ನು ಪೃಥ್ವಿ ಭಟ್ ಹಾಕಿದ್ದಾರೆ. ಆ ದಿನ ಸನ್ನಿವೇಶ ಅದೇ ರೀತಿ ಇತ್ತು ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಮದುವೆ ಬಳಿಕ ನಂದಿನಿ ಲೇಔಟ್ ಸ್ಟೇಷನ್‌ಗೆ ಹೋಗಿ ಇಬ್ಬರೂ ಇಷ್ಟಪಟ್ಟು ಮದುವೆ ಆಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದೆವು ಎಂದಿದ್ದಾರೆ.

ಸರಿಗಮಪ ಶೋನದಲ್ಲಿ ಪೃಥ್ವಿ ಭಟ್ ಸ್ಪರ್ಧಿಸಿದ್ದರು. ಅಭಿ 10 ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು ಸರಿಗಮಪ ಶೋ ಹಲವು ಸೀಸನ್‌ಗಳಿಗೆ ಕೆಲಸ ಮಾಡಿದ್ದಾರೆ. 15ನೇ ಸೀಸನ್‌ನಲ್ಲಿ ಪೃಥ್ವಿ ಭಟ್ ಸ್ಪರ್ಧಿಸಿದ್ದರು. ಅದೇ ವೇಳೆ ಇಬ್ಬರು ನಡುವೆ ಪರಿಚಯವಾಗಿ ಬಳಿಕ ಸ್ನೇಹಿತರಾಗಿದ್ದರು. ಆ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು/ ಶೋನಲ್ಲಿ ಹಾಡು ಹಾಡಿ ಗೋಲ್ಡನ್ ಬಝರ್ ಸಿಗದೇ ಇದ್ದಾಗ ಅಭಿ ಬಳಿಕ ಹೇಳುತ್ತಿದ್ದರಂತೆ.

ಪ್ರೀತಿ ಮಾಡಿ ಮದುವೆ ಆಗುವುದು ತಪ್ಪು ಎನಿಸುತ್ತಿಲ್ಲ ಎಂದು ಅಭಿ- ಪೃಥ್ವಿ ಹೇಳಿದ್ದಾರೆ. ಪೋಷಕರು ಖುಷಿಯಾಗಿ ಇರಬೇಕು, ಆದಷ್ಟು ಬೇಗ ನಮ್ಮನ್ನು ಒಪ್ಪಿ ಮನೆಗೆ ಕರೆದರೆ ಸಾಕು ಎಂದು ಪೃಥ್ವಿ ಭಟ್ ಪೋಷಕರಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ. ಅಭಿ ಪೋಷಕರು ಮದುವೆ ಒಪ್ಪಿ ದಂಪತಿ ಅವರ ಮನೆಯಲ್ಲೇ ನೆಲೆಸಿದ್ದಾರೆ.

More from Filmibeat

English summary
Singer Prithvi Bhatt and Abhishek open up for the first time about their love marriage
Read more about: reality show singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X