twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿದ 'ಸರಿಗಮಪ' ತಂಡ

    |

    Recommended Video

    Sa Re Ga Ma Pa L'il Champs Season16 Kannada:ಡಾ ರಾಜ್ ಹುಟ್ಟುಹಬ್ಬಕ್ಕೆ ಸರಿಗಮಪ ಸೀಸನ್ 16 ತಂಡ ಮಾಡಿದ್ದು ಹೀಗೆ

    ಐದು ನಿಮಿಷ ಕಣ್ಣು ಮುಚ್ಚಿಕೊಳ್ಳಿ.. ಸಾಧ್ಯವಾದರೆ ನಿಮ್ಮ ಮನೆಯಲ್ಲಿ ಒಂದು ಸುತ್ತು ಸುತ್ತಿ.. ಎಷ್ಟು ಕಷ್ಟ ಆಗುತ್ತೆ ಅಲ್ವಾ. ದೃಷ್ಟಿ ಎಷ್ಟೊಂದು ಮುಖ್ಯ ಅಂತ ತಿಳಿಯುವುದು ಕಣ್ಣು ಮುಚ್ಚಿಕೊಂಡಾಗಲೇ.

    ಎಷ್ಟೋ ಜನ ಅಂಧರು ಇಂದಿಗೂ ಕಣ್ಣೀಲ್ಲದೆ ಕತ್ತಲಿನಲ್ಲಿ ಇದ್ದಾರೆ. ಆದರೆ, ಅವರಿಗೆ ಬೆಳಕು ಸಿಗುವುದು ಇನ್ನೊಬ್ಬರ ಕಣ್ಣಿಗಳಿಂದ ಮಾತ್ರ. ಸತ್ತ ನಂತರ ಮಣ್ಣಿಗೆ ಹೋಗುವ ಬದಲು ಇನ್ನೊಬ್ಬರಿಗೆ ಬೆಳಕು ನೀಡುವುದು ಮಹತ್ವದ ಕೆಲಸ. ಈ ರೀತಿ ಕಣ್ಣು ದಾನ ಮಾಡಲು ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಸ್ಫೂರ್ತಿ ನೀಡಿದವರು ಡಾ ರಾಜ್ ಕುಮಾರ್.

    ಮಗಳಿಗೆ ಕಣ್ಣಿಲ್ಲವೆಂದು ಅಪ್ಪ ಆತ್ಮಹತ್ಯೆ: ಛಲ ಬಿಡದೆ ಸಾಧಿಸಿ ತೋರಿಸಿದ ಮಗಳು ಮಗಳಿಗೆ ಕಣ್ಣಿಲ್ಲವೆಂದು ಅಪ್ಪ ಆತ್ಮಹತ್ಯೆ: ಛಲ ಬಿಡದೆ ಸಾಧಿಸಿ ತೋರಿಸಿದ ಮಗಳು

    ಡಾ ರಾಜ್ ಕುಮಾರ್ ಕಣ್ಣು ದಾನ ಮಾಡಿದ ಮೇಲೆ ಅವರ ಅಭಿಮಾನಿಗಳು ಸೇರಿದಂತೆ ರಾಜ್ಯದ ಸಾಕಷ್ಟು ಜನ ಕಣ್ಣು ದಾನ ಮಾಡುತ್ತಿದ್ದಾರೆ. ಈಗಲೂ ಆ ಕೆಲಸ ಮುಂದುವರೆಯುತ್ತದೆ. ಇದೀಗ ಸರಿಗಮಪ ಕಾರ್ಯಕ್ರಮ ಕೂಡ ಅಂಧರ ಬಾಳಿನಲ್ಲಿ ಬೆಳಕು ನೀಡುವ ಕೆಲಸ ಮಾಡಿದೆ. 'ನೇತ್ರದಾನ ಮಹಾದಾನ' ಎಂದ ಅಣ್ಣಾವ್ರರ ಮಾತನ್ನು ಪಾಲಿಸಿದೆ. ಮುಂದೆ ಓದಿ...

    ಕಣ್ಣು ದಾನ ಮಾಡಿದ 'ಸರಿಗಮಪ' ತಂಡ

    ಕಣ್ಣು ದಾನ ಮಾಡಿದ 'ಸರಿಗಮಪ' ತಂಡ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ' ಕಾರ್ಯಕ್ರಮದ ತಂಡ ಒಂದು ಒಳ್ಳೆಯ ಕೆಲಸ ಮಾಡಿದೆ. ಇಡೀ ಸರಿಗಮಪ ತಂಡ ನೇತ್ರದಾನ ಮಾಡಿದೆ. ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಈ ಕಾರ್ಯವನ್ನು ತಂಡ ಮಾಡಿದೆ. ಈ ವಿಶೇಷ ಸಂಚಿಕೆಯ ಚಿತ್ರೀಕರಣವಾಗಿದ್ದು, ಕಾರ್ಯಕ್ರಮ ಈ ವಾರಾಂತ್ಯ ಪ್ರಸಾರ ಆಗಬಹುದು.

    ಸಂತಸ ಹಂಚಿಕೊಂಡ ಗಾಯಕಿ ಸಂಗೀತಾ

    ಕಾರ್ಯಕ್ರಮ ಜ್ಯೂರಿಯಾಗಿರುವ ಗಾಯಕಿ ಸಂಗೀತಾ ಎಸ್ ರಾಜೀವ್ ಈ ವಿಷಯವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾವು ಕೂಡ ತಮ್ಮ ಸರಿಗಮಪ ತಂಡದ ಜೊತೆ ಸೇರಿ ನೇತ್ರದಾನ ಮಾಡಿದ್ದಾರೆ. ಇಂತಹ ಮಹತ್ವದ ಕೆಲಸ ಮಾಡಿಸಿದ ಜೀ ಕನ್ನಡ ವಾಹಿನಿಗೆ ಧನ್ಯವಾದ ತಿಳಿಸಿರುವ ಅವರು, ಇತರರಿಗೂ ನೇತ್ರದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

    ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್ ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್

    ವೀಕ್ಷಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ

    ವೀಕ್ಷಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ

    'ಸರಿಗಮಪ' ಕಾರ್ಯಕ್ರಮದ ತಂಡ ಮಾತ್ರವಲ್ಲ, ಈ ಸಂಚಿಕೆಯನ್ನು ನೋಡಲು ಬಂದಿದ್ದ ಅನೇಕ ವೀಕ್ಷಕರು ಸಹ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ತಾವು ಕೂಡ ನೇತ್ರದಾನ ಮಾಡಿ ಅನೇಕರಿಗೆ ಸ್ಫೂರ್ತಿ ನೀಡುವ ಕೆಲಸ ಮಾಡಿದ್ದಾರೆ. ಈ ವಿಶೇಷ ಸಂಚಿಕೆಯಲ್ಲಿ ನಾರಾಯಣ ನೇತ್ರಾಲಯದ ತಂಡ ಕೂಡ ಭಾಗಿಯಾಗಿದೆ.

    ಅಂಧರಿಗೆ ಅವಕಾಶ ನೀಡುತ್ತಿರುವ ಜೀ ವಾಹಿನಿ

    ಅಂಧರಿಗೆ ಅವಕಾಶ ನೀಡುತ್ತಿರುವ ಜೀ ವಾಹಿನಿ

    'ಸರಿಗಮಪ' ಕಾರ್ಯಕ್ರಮವನ್ನು ಗಮನಸಿದರೆ, ಪ್ರತಿ ಸೀಸನ್ ನಲ್ಲಿ ಒಬ್ಬ ಅಂಧರಿಗೆ ಅವಕಾಶ ನೀಡಲಾಗುತ್ತಿದೆ. ಸೀಸನ್ 13ರ ಸ್ಪರ್ಧಿ ಮೆಹಬೂಬ್ ಸಾಬ್ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದರು. ಸೀಸನ್ 15ರಲ್ಲಿ ರಿತ್ವಿಕ್ ಫೈನಲ್ ಹಂತದ ವರೆಗೆ ಬಂದಿದ್ದರು. ಈ ಬಾರಿಯ ಸೀಸನ್ 16 ರಲ್ಲಿ ಸಂಗೀತಾ ಎಂಬ ಅಂಧ ಹುಡುಗಿ ಅವಕಾಶ ಪಡೆದಿದ್ದಾರೆ.

    ರಾಜ್ ಹುಟ್ಟುಹಬ್ಬದ ಖುಷಿ ಹೆಚ್ಚಿಸಿದ ಚಿನ್ನಸ್ವಾಮಿ ಕ್ರೀಡಾಂಗಣ ರಾಜ್ ಹುಟ್ಟುಹಬ್ಬದ ಖುಷಿ ಹೆಚ್ಚಿಸಿದ ಚಿನ್ನಸ್ವಾಮಿ ಕ್ರೀಡಾಂಗಣ

    English summary
    Zee kannada channel's Saregamapa team did eye donation on the occasion of DR Rajkumar birthday.
    Thursday, April 25, 2019, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X