ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ
ನಾದಬ್ರಹ್ಮ ಹಂಸಲೇಖ ಅವರ ಹುಟ್ಟುಹಬ್ಬ ಇದೇ ತಿಂಗಳ 23 ರಂದು ನಡೆಯಲಿದೆ. ಈ ವಿಶೇಷವಾಗಿ ಸರಿಗಮಪ ತಂಡ ಮಹಾ ಗುರುಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದೆ.
'ಸಂಗೀತವೇ ನನ್ನ ದೇವರು.. ಚಪ್ಪಾಳೆಯೇ ನನ್ನ ಉಸಿರು..' ಎನ್ನುವ ಹಂಸಲೇಖರಿಗೆ ಸಂಗೀತ ಮೂಲಕವೇ ಉಡುಗೊರೆ ನೀಡಿದ್ದಾರೆ. ಸರಿಗಪಮ ಕಾರ್ಯಕ್ರಮದ ಹಳೆಯ ಸ್ಪರ್ಧಿಗಳನ್ನು ಕರೆಸಿ ಹಂಸಲೇಖರಿಗೆ ಅಚ್ಚರಿ ನೀಡಲಾಗಿದೆ.
ಹಂಸಲೇಖ ಅವರು 68 ವರ್ಷ ಪೂರೈಸಿದ್ದಾರೆ. 68 ವರ್ಷಕ್ಕೆ 68 ಸ್ಪರ್ಧಿಗಳನ್ನು ಕರೆಸಿ, ಅವರ ಕಡೆಯಿಂದ ಹಾಡು ಹಾಡಿಸಿ, ಹುಟ್ಟುಹಬ್ಬಕ್ಕೆ ಮರೆಯಲಾದ ಉಡುಗೊರೆಯನ್ನು ಸರಿಗಮಪ ತಂಡ ನೀಡಿದೆ.

ಇಂತಹ ಅದ್ಬುತ ಉಡುಗೊರೆ ನೋಡಿ ಹಂಸಲೇಖ ಕೂಡ ತುಂಬ ಖುಷಿ ಪಟ್ಟರು. ಗೋಲ್ಡನ್ ಬಜಾರ್ ನೀಡಿ ಆ ಕ್ಷಣವನ್ನು ಸಂಭ್ರಮ ಪಟ್ಟರು.

ಅಂದಹಾಗೆ, ಸದ್ಯಕ್ಕೆ ಈ ಸಂಚಿಕೆಯ ಪ್ರೊಮೋ ಹೊರಬಂದಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
English summary
Zee Kannada channel's Saregamapa team gave special gift to legendary music director Hamsalekha birthday.


Click it and Unblock the Notifications