»   » 'ಸರಿಗಮಪ' ವೇದಿಕೆಯಲ್ಲಿ ಮೊದಲ ಚಲನಚಿತ್ರ ಗೀತೆ ಹಾಡಿದ ಲಕ್ಷ್ಮಿ

'ಸರಿಗಮಪ' ವೇದಿಕೆಯಲ್ಲಿ ಮೊದಲ ಚಲನಚಿತ್ರ ಗೀತೆ ಹಾಡಿದ ಲಕ್ಷ್ಮಿ

Posted By:
Subscribe to Filmibeat Kannada

ಜೀ-ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ 14ನೇ ಆವೃತ್ತಿ ಹೊಸ ಹೊಸ ಪ್ರತಿಭೆಗಳಿಂದ ಗಮನ ಸೆಳೆಯುತ್ತಿದೆ. ಪುಟ್ಟ ಪುಟ್ಟ ಮಕ್ಕಳು ತಮ್ಮ ಟ್ಯಾಲೆಂಟ್ ಮೂಲಕ ಪ್ರೇಕ್ಷಕರ ಮನಮುಟ್ಟುತ್ತಿದ್ದಾರೆ. ಅದರಲ್ಲೂ, 14 ವರ್ಷ ಲಕ್ಷ್ಮಿ ಎಂಬ ಬಾಲಕಿ ಸ್ವಲ್ಪ ವಿಶೇಷ.

'ಸರಿಗಮಪ' ಆಡಿಷನ್ ಸುತ್ತಿನಲ್ಲಿ ತಮ್ಮ ಗಾಯನದ ಮೂಲಕ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದ್ದ ಲಕ್ಷ್ಮಿ ಈ ವಾರ ಮೊದಲ ಚಲನಚಿತ್ರ ಗೀತೆಯನ್ನ ವೇದಿಕೆ ಮೇಲೆ ಹಾಡುವ ಮೂಲಕ ಮತ್ತಷ್ಟು ಮೆಚ್ಚಿಸಿದ್ದಾರೆ. ಅಂದ್ರೆ, ಇಲ್ಲಿಯವರೆಗೂ ಲಕ್ಷ್ಮಿ ಜಾನಪದ ಗೀತೆಯ ಮೂಲಕ ಈ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರು.

sarigamapa contestants lakshmi sings 1st movie song

ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುಧರಾಣಿ ಅಭಿನಯಿಸಿದ್ದ ರಣರಂಗ ಚಿತ್ರದ ''ಇವ ಯಾವ ಸೀಮೆಯ ಗಂಡು'' ಹಾಡನ್ನ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಲಕ್ಷ್ಮಿ ಹಾಡಿರುವ ಈ ಹಾಡು ಈಗ ಯ್ಯೂಟ್ಯೂಬ್ ಹಾಗೂ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿಯವರು. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಲಕ್ಷ್ಮಿಗೊಬ್ಬರು ಅಣ್ಣ ಇದ್ದಾರೆ. ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.

English summary
Sa re ga ma pa season 14 contestant lakshmi sung a 1st movie song in stage from shivarajkumar 'ranaranga' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X