»   » 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಸುನೀಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಲಕ್ಷಾಂತರ ಜನರ ಮತಗಳಿಂದ ಸುನೀಲ್ ಮೊದಲ ಸ್ಥಾನವನ್ನು ಪಡೆದಿದ್ದಾರೆ.

ಸಾಮಾನ್ಯ ಹುಡುಗನಾಗಿದ್ದ 'ಸುನೀಲ'ನ ಸ್ಫೂರ್ತಿದಾಯಕ 'ಸರಿಗಮಪ' ಜರ್ನಿ

ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆಯಲ್ಲಿ ಒಟ್ಟು ಆರು ಸ್ಪರ್ಧಿಗಳು ಆಯ್ಕೆ ಆಗಿದ್ದರು. ಈ ಪೈಕಿ ಎರಡನೇ ಸುತ್ತಿಗೆ ಆಯ್ಕೆ ಆದ ಸ್ಪರ್ಧಿಗಳಲ್ಲಿ ಯಾರು ಬೆಸ್ಟ್ ಎಂದು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ನೀಡಲಾಗಿತ್ತು. ಲಕ್ಷಾಂತರ ಜನರು ತಮ್ಮ ತಮ್ಮ ಮೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕಿದರು.

ಸರಿಗಮಪ ಸೀಸನ್-13 ಪ್ರಶಸ್ತಿ ಮುಡಿಗೇರಿಸಿಕೊಂಡ ಸುನಿಲ್

ಫೈನಲ್ ಸ್ಪರ್ಧಿಗಳ ಪೈಕಿ ಯಾರಿಗೆ ಎಷ್ಟು ವೋಟು ಬಂದಿದೆ ಎಂಬ ಕುತೂಹಲ ಎಲ್ಲರಿಗೆ ಇರುತ್ತದೆ. ಅದಕ್ಕೆ ಈಗ 'ಜೀ ಕನ್ನಡ' ವಾಹಿನಿ ಉತ್ತರ ನೀಡಿದೆ. ಮುಂದೆ ಓದಿ...

ಸುನೀಲ್

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಸುನೀಲ್ ಒಟ್ಟು 1,25,383 ಮತಗಳನ್ನು ಪಡೆದಿದ್ದರು. ಅದ್ಭುತವಾಗಿ ಹಾಡಿ ಜೊತೆಗೆ ಅತಿ ಹೆಚ್ಚು ಮತ ಪಡೆದ ಸುನೀಲ್ ಪ್ರಶಸ್ತಿ ಹಾಗೂ 5 ಲಕ್ಷ ರೂಪಾಯಿಯನ್ನು ಗೆದ್ದರು.

ಮೆಹಬೂಬ್ ಸಾಬ್

ಎರಡನೇ ಸ್ಥಾನ ಪಡೆದುಕೊಂಡದ್ದ ಮೆಹಬೂಬ್ ಸಾಬ್ ಅವರು 85,498 ಮತಗಳನ್ನು ಪಡೆದಿದ್ದರು. ಇವರಿಗೆ 'ಮುಗುಳುನಗೆ' ಚಿತ್ರತಂಡದಿಂದ 3 ಲಕ್ಷ ಹಾಗೂ ಜನರಿಂದ 1.5 ಲಕ್ಷ ಬಹುಮಾನ ನೀಡಲಾಯಿತು

ಶ್ರೀಹರ್ಷ

ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ ಶ್ರೀಹರ್ಷ ಅವರಿಗೆ 60,375 ಮತಗಳು ಲಭಿಸಿತ್ತು. ಮೂರನೇ ಸ್ಥಾನದೊಂದಿಗೆ 1 ಲಕ್ಷ ಬಹುಮಾನವನ್ನು ಹರ್ಷ ಪಡೆದುಕೊಂಡಿದ್ದರು.

Sa Re Ga Ma Pa season 13 Grand Finale has 6 lucky singers | Filmibeat Kannada

ಧನು‍ಷ್

ಅದ್ಧೂರಿಯಾಗಿ ನಡೆದ ಫಿನಾಲೆಯಲ್ಲಿ ಧನು‍ಷ್ ನಾಲ್ಕನೇ ಸ್ಥಾನ ಗಳಿಸಿದ್ದರು. ಜನರಿಂದ ಧನುಷ್ 17,800 ವೋಟುಗಳನ್ನು ಪಡೆದಿದ್ದರು.

English summary
Revealed: Zee Kannada channel's 'Sarigamapa Season 13' participants votes in Finale round.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada