»   » 'ಸರಿಗಮಪ' ಗೆದ್ದ ಸುನೀಲ್ ಅದೃಷ್ಟ ಹೇಗೆ ಬದಲಾಯಿತು ನೋಡಿ...

'ಸರಿಗಮಪ' ಗೆದ್ದ ಸುನೀಲ್ ಅದೃಷ್ಟ ಹೇಗೆ ಬದಲಾಯಿತು ನೋಡಿ...

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಹುಡುಗ ಸುನೀಲ್ ವಿಜೇತರಾಗಿದ್ದರು. 'ಸರಿಗಮಪ' ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಸುನೀಲ್ ಈಗ 'ಜೀ ಕನ್ನಡ' ವಾಹಿನಿಯ ಮತ್ತೊಂದು ಕಾರ್ಯಕ್ರಮದಲ್ಲಿ ಮಿಂಚಲಿದ್ದಾರೆ.

ಸಾಮಾನ್ಯ ಹುಡುಗನಾಗಿದ್ದ 'ಸುನೀಲ'ನ ಸ್ಫೂರ್ತಿದಾಯಕ 'ಸರಿಗಮಪ' ಜರ್ನಿ

'ಜೀ ಕನ್ನಡ' ವಾಹಿನಿಯಲ್ಲಿ ಬರುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಸುನೀಲ್ ಕೂಡ ಒಬ್ಬರಾಗಿದ್ದಾರೆ. ಇಷ್ಟು ದಿನ ತಮ್ಮ ಗಾಯನದ ಮೂಲಕ ಸದ್ದು ಮಾಡಿದ್ದ ಸುನೀಲ್ ಈಗ ಡ್ಯಾನ್ಸ್ ಮಾಡಿ ಎಲ್ಲರಿಗೂ ಸವಾಲು ಹಾಕುವುದಕ್ಕೆ ರೆಡಿ ಆಗಿದ್ದಾರೆ. ಮುಂದೆ ಓದಿ...

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'

'ಜೀ ಕನ್ನಡ' ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹೊಸ ಸೀಸನ್ ಶುರುವಾಗುತ್ತಿದ್ದು ಇದರಲ್ಲಿ 'ಸರಿಗಮಪ ಸೀಸನ್ 13' ವಿಜೇತ ಸುನೀಲ್ ಕೂಡ ಭಾಗವಹಿಸಿದ್ದಾರೆ.

ಸುನೀಲ್ ಜೋಡಿ

ಈ ಕಾರ್ಯಕ್ರಮದಲ್ಲಿ ಸುನೀಲ್ ಅವರಿಗೆ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಮತ್ತೊಬ್ಬ ಸ್ಪರ್ಧಿ ಇಂಪನಾ ಸಾಥ್ ನೀಡಲಿದ್ದಾರೆ.

ಉತ್ತರ ಕರ್ನಾಟಕದ ಕಲಿ ಸುನೀಲ್ ಗೆಲುವಿಗೆ ಕಾರಣ ಕೊಟ್ಟ ಅರ್ಜುನ್ ಜನ್ಯ

ಡ್ಯಾನ್ಸ್ ಕಾರ್ಯಕ್ರಮ

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಒಂದು ಪಕ್ಕಾ ಡ್ಯಾನ್ಸ್ ಶೋ ಆಗಿದೆ. 'ಜೀ ಕನ್ನಡ' ವಾಹಿನಿಯ ಪ್ರಮುಖ ಧಾರಾವಾಹಿಗಳ ನಾಯಕ ನಾಯಕಿಯರು, 'ಡ್ರಾಮಾ ಜೂನಿಯರ್ಸ್' ಮತ್ತು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಗಳ ಸ್ಪರ್ಧಿಗಳ ನಡುವೆ ಇಲ್ಲಿ ಪೈಪೋಟಿ ನಡೆಯಲಿದೆ.

ಮೂರು ಜನ ತೀರ್ಪುಗಾರರು

ನಟಿ ರಕ್ಷಿತಾ ಪ್ರೇಮ್, ನಟ ವಿಜಯ್ ರಾಘವೇಂದ್ರ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯಕ್ರಮ ತೀರ್ಪುಗಾರರಾಗಿದ್ದಾರೆ. ಉಳಿದಂತೆ ಅನುಶ್ರೀ ನಿರೂಪಣೆ ಕಾರ್ಯಕ್ರಮದಲ್ಲಿ ಇರಲಿದೆ.

ಸ್ಟೈಲಿಶ್ ಲುಕ್ ನಲ್ಲಿ ಮಿಂಚಿರುವ 'ಸರಿಗಮಪ' ಸ್ಪರ್ಧಿ ಸುಹಾನಾ ಸೈಯದ್

ಇದೇ ಶನಿವಾರದಿಂದ ಶುರು

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಇದೇ ಶನಿವಾರದಿಂದ ಪ್ರಾರಂಭ ಆಗುತ್ತಿದೆ. 'ಜೀ ಕನ್ನಡ' ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ.

ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?

English summary
Zee Kannada channel's Sarigamapa season 13 Winner Sunil is one of the contestant in 'Dance Karnataka Dance'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada