ಸರಿಗಮಪ ಫೈನಲ್ ಗೆ ಆಯ್ಕೆ ಆದ ಏಕೈಕ ಹುಡುಗಿ ಕೀರ್ತನ
Recommended Video

ಸರಿಗಮಪ ಸೀಸನ್ 14 ಕಾರ್ಯಕ್ರಮದಲ್ಲಿ ಎಕ್ಸ್ ಪ್ರೆಶನ್ ಕ್ವೀನ್ ಎಂದು ಕರೆಸಿಕೊಂಡಿದ್ದ ಕೀರ್ತನ ಫೈನಲ್ ವೇದಿಕೆ ಏರಿದ್ದಾರೆ. ಎಲ್ಲ ನಿರೀಕ್ಷೆಯಂತೆ ತನ್ನ ಹಾಡಿನ ಮೂಲಕ ಈ ಹುಡುಗಿ ಫೈನಲ್ ಹಂತ ತಲುಪಿದ್ದಾಳೆ.
ಸದ್ಯ ಸರಿಗಮಪ ಫೈನಲ್ ಗೆ ಐದು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಅಂದರೆ ಈ ಪೈಕಿ ಆಯ್ಕೆ ಆದ ಏಕೈಕ ಹುಡುಗಿ ಕೀರ್ತನ ಆಗಿದ್ದಾರೆ. ಸೆಮಿ ಫೈನಲ್ ನಲ್ಲಿ ಅಮೋಘವಾಗಿ ಹಾಡಿದ ಕೀರ್ತನ ಅವರನ್ನು ಮಹಾಗುರು ಹಂಸಲೇಖ ನೇರವಾಗಿ ಫೈನಲ್ ಗೆ ಕಳುಹಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಧಾರಣವಾಗಿ ಹಾಡು ಹೇಳುತ್ತಿದ್ದ ಕೀರ್ತನ ಪ್ರತಿ ವಾರದಿಂದ ವಾರಕ್ಕೆ ಪಳಗುತ್ತಾ ಬಂದರು. ತನ್ನ ಸಿಹಿಯಾದ ಧ್ವನಿಯ ಮೂಲಕ ಒಂದು ಹಾಡಿನ ಅಂದವನ್ನು ಈಕೆ ಇನ್ನಷ್ಟು ಹೆಚ್ಚಿಸುತ್ತಿದ್ದರು. ಇನ್ನು ಕೀರ್ತನ ಹಂಸಲೇಖರಿಂದ ಅದೆಷ್ಟೋ ಬಾರಿ ಗೋಲ್ಡನ್ ಬಝರ್ ಪಡೆದಿದ್ದಾರೆ.
ಕೀರ್ತನ ಧ್ವನಿ ಎಲ್ಲರಿಗೂ ಅಚ್ಚುಮೆಚ್ಚು. ಈಕೆ ಹಾಡಿದರೆ ವಿಜಯ ಪ್ರಕಾಶ್ ಮತ್ತೆ ಮತ್ತೆ ಹಾಡು ಎಂದು ಕೇಳುತ್ತಿದ್ದರು. ಅರ್ಜುನ್ ಜನ್ಯ ನಾನು ನಿನ್ನ ಫ್ಯಾನ್ ಅಂತ ಹೇಳಿದ್ದರು. ಅಂದಹಾಗೆ, ಕೀರ್ತನ ಬೆಂಗಳೂರಿನ ಹುಡುಗಿ ಆಗಿದ್ದು, ಫೈನಲ್ ಗೆ ಆಯ್ಕೆ ಆದ ಮೂರನೇ ಸ್ಪರ್ಧಿ ಆಗಿದ್ದಾರೆ.

ಇನ್ನು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಸರಿಗಮಪ ಸೀಸನ್ 14 ಕಾರ್ಯಕ್ರಮದ ಫೈನಲ್ ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದೆ. ವಿಶೇಷ ಅಂದರೆ ಕಳೆದ ಬಾರಿಯಂತೆ ಈ ಬಾರಿಯೂ ಲೈವ್ ಆಗಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.


Click it and Unblock the Notifications











