ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ

By Bharath Kumar

Recommended Video

ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ | Oneindia Kannada

ಜೀ-ಕನ್ನಡದಲ್ಲಿ ಆರಂಭವಾಗಿರುವ 'ಸರಿಗಮಪ' 14ನೇ ಆವೃತ್ತಿ ಮೊದಲ ವಾರವೇ ಗಮನ ಸೆಳೆದಿದೆ. ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಅದರಲ್ಲೂ, ಲಕ್ಷ್ಮಿ ರಾಮಪ್ಪ ಎಂಬ 14 ವರ್ಷದ ಬಾಲಕಿ ಈ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಜನಪದ ಗೀತೆಯ ಮೂಲಕ ಆಡಿಷನ್ ಕೊಟ್ಟ ಲಕ್ಷ್ಮಿ, ತ್ರಿವಳಿ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದರು. ಈಕೆಯ ಹಾಡು ಕೇಳಿ ಸ್ವತಃ ಹಂಸಲೇಖ ಅವರೇ ಹಾಡಿ ಕುಣಿದಿದ್ದಾರೆ.

ಅಂದ್ಹಾಗೆ, ಲಕ್ಷ್ಮಿ ಸಣ್ಣ ಹಳ್ಳಿಯಿಂದ ಬಂದ ಬಾಲಕಿ. ಯಾವುದೇ ಸಂಗೀತ ಕಲಿತಿಲ್ಲ. ಆದ್ರೆ, ಹಾಡು ಮಾತ್ರ ಅದ್ಭುತವಾಗಿ ಹಾಡಬಲ್ಲರು. 'ಸರಿಗಮಪ' ವೇದಿಕೆಗೆ ಲಕ್ಷ್ಮಿ ಬರಲು ಒಂದು ರೋಚಕ ಕಥೆ ಇದೆ. ಏನದು? ಮುಂದೆ ಓದಿ....

ಸಣ್ಣ ಕುಟುಂಬದ ಕುಡಿ

ಸಣ್ಣ ಕುಟುಂಬದ ಕುಡಿ

9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿ. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಲಕ್ಷ್ಮಿಗೊಬ್ಬರು ಅಣ್ಣ ಇದ್ದಾರೆ.

ಸಂಗೀತ ಅಭ್ಯಾಸವಿಲ್ಲ

ಸಂಗೀತ ಅಭ್ಯಾಸವಿಲ್ಲ

ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.

'ಸರಿಗಮಪ'ಗೆ ಬರಲು ಸ್ಪೂರ್ತಿ ಯಾರು?

'ಸರಿಗಮಪ'ಗೆ ಬರಲು ಸ್ಪೂರ್ತಿ ಯಾರು?

'ಸರಿಗಮಪ' ಕಾರ್ಯಕ್ರಮವನ್ನ ನೋಡುತ್ತಿದ್ದ ಲಕ್ಷ್ಮಿ ಅವರ ಅಪ್ಪ-ಅಮ್ಮ ''ನಮ್ಮ ಮಗಳು ಅಲ್ಲಿ ಹಾಡಿದ್ರೆ ಚೆನ್ನಾಗಿರುತ್ತೆ'' ಎಂದುಕೊಳ್ಳುತ್ತಿದ್ದರಂತೆ. ಅದನ್ನ ಕೇಳಿದ ಲಕ್ಷ್ಮಿಗೆ 'ಸರಿಗಮಪ' ವೇದಿಕೆಗೆ ಬರಲು ಛಲ ಹುಟ್ಟಿತು. ಈಗ ಸಾಧಿಸಲು ಸಿದ್ದವಾಗಿ ನಿಂತಿದ್ದಾರೆ.

ಆಡಿಷನ್ ಗೆ ಅಪ್ಪ-ಅಮ್ಮ ಬರಲಿಲ್ಲ

ಆಡಿಷನ್ ಗೆ ಅಪ್ಪ-ಅಮ್ಮ ಬರಲಿಲ್ಲ

ಲಕ್ಷ್ಮಿ ಅವರು ಸರಿಗಮಪ ಆಡಿಷನ್ ಗೆ ಅವರ ಅಪ್ಪ ಮತ್ತ ಅಮ್ಮ ಬರಬೇಕಿತ್ತು. ಆದ್ರೆ, ಬೆಳಗಾವಿಯಿಂದ ಯಶವಂತಪುರವರೆಗೂ ಬಂದಿದ್ದರು. ಆದ್ರೆ, ಸ್ಟುಡಿಯೋಗೆ ಬರಲು ದಾರಿ ಗೊತ್ತಾಗದೇ ವಾಪಸ್ಸು ಹೋಗಿದ್ದಾರೆ. ಮುಂದಿನ ಸಲ ಅವರನ್ನ ಕರೆಯಿಸುವ ಮಾತು ನೀಡಿದೆ ಜೀ-ವಾಹಿನಿ.

More from Filmibeat

English summary
All about 'Sarigamapa Season 14' contestant lakshmi ramappa, Zee Kannada channel's popular show started from last Saturday. (December 9).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X