ಸರಿಗಮಪದಲ್ಲಿಯೇ ಮೊದಲು : ಡೈರೆಕ್ಟ್ ಆಗಿ ಫೈನಲ್ ಮೆಟ್ಟಿಲು ಹತ್ತಿದ ತೇಜಸ್!

By Naveen

'ಸರಿಗಮಪ ಸೀಸನ್ 14' ಕಾರ್ಯಕ್ರಮ ಕೊನೆಯ ಹಂತಕ್ಕೆ ಬರುತ್ತಿದೆ. ಕಳೆದ ವಾರ ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ಹಂತ ಮುಗಿದಿದ್ದು ಫೈನಲ್ ಗೆ ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಮುಂದಿನ ವಾರ ಸೆಮಿ ಫೈನಲ್ ನಡೆಯಲಿದೆ.

ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಚನ್ನಗಿರಿ ಹುಡುಗ ತೇಜಸ್ ಶಾಸ್ತಿ ನೇರವಾಗಿ ಫೈನಲ್ ಹಂತ ತಲುಪಿದ್ದಾನೆ. ಕಾರ್ಯಕ್ರಮದ ಅಷ್ಟು ಸ್ಪರ್ಧಿಗಳ ಪೈಕಿ ಫೈನಲ್ ಹಂತ ತಲುಪಿದ ಮೊದಲ ಮತ್ತು ಏಕೈಕ ಸ್ಪರ್ಧಿ ಇವರಾಗಿದ್ದಾರೆ. ದೊಡ್ಡ ವಿಶೇಷ ಅಂದರೆ ಇಡೀ ಸರಿಗಮಪ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ರೀತಿ ಒಬ್ಬ ಸ್ಪರ್ಧಿಯನ್ನು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದ ಫೈನಲ್ ಗೆ ಕಳುಹಿಸಲಾಗುತ್ತಿದೆ.

ಕಾರ್ಯಕ್ರಮದ ಪ್ರಾರಂಭದಿಂದ ಪ್ರತಿ ಸಂಚಿಕೆಯಲ್ಲಿಯೂ ತನ್ನ ಹಾಡಿನ ಮೂಲಕ ಕೇಳುಗರ ಮೆಚ್ಚಿಗೆ ಪಡೆಯುತ್ತಿದ್ದ ತೇಜಸ್ ತನ್ನ ಪ್ರತಿಭೆಯನ್ನು ಪ್ರತಿ ವಾರ ಪ್ರದರ್ಶಿಸುತ್ತಿದ್ದ. ಇನ್ನು ಕ್ವಾರ್ಟರ್ ಫೈನಲ್ ನಲ್ಲಿ ಮೈ ಹುಷಾರಿರಲಿಲ್ಲದ್ದಿದ್ದರೂ 'ಭಜರಂಗಿ' ಸಿನಿಮಾದ ಹಾಡನ್ನು ಅಮೋಘವಾಗಿ ಹಾಡಿದ ತೇಜಸ್ ಗೋಲ್ಡನ್ ಬಜರ್ ಪಡೆದ.

Sarigamapa Season 14 contestant Tejas Shastri enters final

ಅಂದಹಾಗೆ, ಪ್ರತಿ ಸಂಚಿಕೆಯಲ್ಲಿ ತೇಜಸ್ ಹಾಡು ಕೇಳುತ್ತಿದ್ದ ತೀರ್ಪುಗಾರರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಈ ತೀರ್ಮಾನ ಕೈಗೊಂಡಿದ್ದಾರೆ. ತೇಜಸ್ ಅವರ ಈ ಸಾಧನೆ ಕಂಡ ಅವರ ತಂದೆ ತಾಯಿ ಕೂಡ ತುಂಬ ಖುಷಿ ಪಟ್ಟರು.

More from Filmibeat

English summary
Zee Kannada channel's popular reality show Sarigamapa Season 14 contestant Tejas Shastri enters final.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X