ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರ ಪಡೆದ ಸರಿಗಮಪ ಸ್ಪರ್ಧಿ
Recommended Video

ಸರಿಗಮಪ ಸೀಸನ್ 14 ಕಾರ್ಯಕ್ರಮದ ಕೃಷ್ಣ ಸುಂದರಿ ನೇಹಾ ಈಗ ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಪಡೆದಿದ್ದಾಳೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ನೇಹಾಳ ಪುಟ್ಟ ಬೆರಳಿಗೆ ಉಂಗುರ ತೊಡಿಸಿ ಸಿಹಿ ಮುತ್ತು ನೀಡಿದರು.
ಬೇಲೂರಿನಿಂದ ಬಂದ ನೇಹಾ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಆಗಿದ್ದರು. ವಿಶೇಷ ಅಂದರೆ, ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಇವರಾಗಿದ್ದಾರೆ. ಇನ್ನು ಸೆಮಿ ಫೈನಲ್ ಹಂತದಲ್ಲಿ 'ದೇವರೇ ನೀವು ನಿಜವಪ್ಪ..' ಹಾಡನ್ನು ಹಾಡಿದ ನೇಹಾ ತೀರ್ಪುಗಾರರ ಹೃದಯ ಗೆದ್ದರು.
ಪ್ರತಿ ವಾರ ನೇಹಾ ಹಾಡು ಕೇಳಿ ಇಷ್ಟ ಪಟ್ಟಿದ್ದ ಹಂಸಲೇಖ ಪತ್ನಿ ಲತಾ ಹಂಸಲೇಖ ಸೆಮಿ ಫೈನಲ್ ನಲ್ಲಿ ಚಿನ್ನದ ಉಂಗುರ ನೀಡಿದ್ದಾರೆ. ನೇಹಾ ಹುಟ್ಟುಹಬ್ಬ ಏಪ್ರಿಲ್ 27 ರಂದು ಇದ್ದರೂ ಕಾರ್ಯಕ್ರಮದಲ್ಲಿ ನಿನ್ನೆ ಅದನ್ನು ಆಚರಿಸಲಾಗಿತು.

ಅಂದಹಾಗೆ, ಸರಿಗಮಪ ಸೀಸನ್ 14ರ ಫೈನಲ್ ಗೆ ಐದು ಸ್ಪರ್ಧಿಗಳ ಜೊತೆಗೆ ಮೈಲ್ಡ್ ಎಂಟ್ರಿ ಎಂದು ಪರಿಗಣಿಸಿ ನೇಹಾಗಳನ್ನು ಸಹ ಆಯ್ಕೆ ಮಾಡಲಾಗಿದೆ. ನೇಹಾ ಕಾರ್ಯಕ್ರಮದ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಆಗಿದ್ದು, ಫೈನಲ್ ನಲ್ಲಿ ಹಾಡುವ ಅವಕಾಶ ನೀಡಲಾಗಿದೆ.


Click it and Unblock the Notifications











