ಸರಿಗಮಪ ಗ್ರಾಂಡ್ ಫಿನಾಲೆಯನ್ನು ನೇರವಾಗಿ ನೀವು ನೋಡಬಹುದು
ಸರಿಗಮಪ ಕಾರ್ಯಕ್ರಮ ಈಗ ಅಂತಿಮ ಹಂತಕ್ಕೆ ಬಂದಿದೆ. ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಇದೇ ಶನಿವಾರ ನಡೆಯಲಿದೆ. ಅಂದಹಾಗೆ, ಇಷ್ಟು ದಿನ ಟಿವಿ ಮುಂದೆ ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರು ಫೈನಲ್ ಅನ್ನು ನೇರವಾಗಿ ನೋಡಬಹುದಾಗಿದೆ.
ಜೀ ಕನ್ನಡ ವಾಹಿನಿ ಫೈನಲ್ ನೋಡಲು ಎಲ್ಲ ವೀಕ್ಷಕರಿಗೆ ಅವಕಾಶವನ್ನು ಕಲ್ಪಿಸಿದೆ. ಇಂದು ಕಾರ್ಯಕ್ರಮದ ಉಚಿತ ಪಾಸ್ ಗಳನ್ನು ನೀಡಲಾಗುತ್ತಿದೆ. ಕಾರ್ಯಕ್ರಮ ನೋಡಲು ಬಯಸುವವರು ಎಂ ಜಿ ರಸ್ತೆಯಲ್ಲಿರುವ ಜೀ ಕನ್ನಡ ವಾಹಿನಿಯ ಕಚೇರಿಯಲ್ಲಿ ಉಚಿತ ಪಾಸ್ ಪಡೆಯಬಹುದಾಗಿದೆ.
ಸರಿಗಮಪ ಗ್ರಾಂಡ್ ಫಿನಾಲೆ ಮೇ 26ಕ್ಕೆ ನಡೆಯಲಿದೆ. ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ವೈಟ್ ಆರ್ಕಿಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಲಿದೆ. ಇನ್ನು ಕಾರ್ಯಕ್ರಮದಲ್ಲಿ ಯಾವುದೇ ವಿಶೇಷ ಅತಿಥಿಗಳು ಇರುವುದಿಲ್ಲ. ಎಂದಿನಂತೆ ಹಂಸಲೇಖ, ವಿಜಯ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಫೈನಲ್ ನಲ್ಲಿ ಇರುತ್ತಾರೆ.

ವಿಶೇಷ ಅಂದರೆ, ಫೈನಲ್ ಸಂಚಿಕೆ ಲೈವ್ ಆಗಿ ಪ್ರಸಾರ ಆಗುತ್ತಿದೆ. ಕಳೆದ ಬಾರಿ ಕೂಡ ಇದೇ ರೀತಿಯಲ್ಲಿ ಗ್ರಾಂಡ್ ಫಿನಾಲೆ ಕಾರ್ಯಕ್ರಮವನ್ನು ಜೀ ವಾಹಿನಿ ಪ್ರಸಾರ ಮಾಡಿತ್ತು.


Click it and Unblock the Notifications











