ಸರಿಗಮಪ ಸೆಮಿ ಫೈನಲ್ ಪರೀಕ್ಷೆಯಲ್ಲಿ ಪಾಸ್ ಆಗೋ ಮಕ್ಕಳು ಯಾರು?
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಈಗ ಕೊನೆಯ ಹಂತ ತಲುಪಿದೆ. ಕಾರ್ಯಕ್ರಮದ ಸೆಮಿ ಫೈನಲ್ ಇದೇ ವಾರ ನಡೆಯಲಿದ್ದು, ಫೈನಲ್ ಹಂತಕ್ಕೆ ಹೋಗುವ ಮಕ್ಕಳು ಯಾರು ಎಂಬ ನಿರೀಕ್ಷೆ ಹೆಚ್ಚಿದೆ.
ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಚನ್ನಗಿರಿ ಹುಡುಗ ತೇಜಸ್ ಶಾಸ್ತಿ ಈಗಾಗಲೇ ನೇರವಾಗಿ ಫೈನಲ್ ಹಂತ ತಲುಪಿದ್ದಾನೆ. ಕಾರ್ಯಕ್ರಮದ ಅಷ್ಟು ಸ್ಪರ್ಧಿಗಳ ಪೈಕಿ ಫೈನಲ್ ಹಂತ ತಲುಪಿದ ಮೊದಲ ಮತ್ತು ಏಕೈಕ ಸ್ಪರ್ಧಿ ಇವರಾಗಿದ್ದಾರೆ. ತೇಜಸ್ ಶಾಸ್ತಿ ಹೊರತಾಗಿ ಎಲ್ಲ ಮಕ್ಕಳ ನಡುವೆ ಈ ವಾರ ಸ್ಪರ್ಧೆ ನಡೆಯುತ್ತದೆ.
ಇನ್ನು ಸರಿಗಮಪ ಕಾರ್ಯಕ್ರಮದಲ್ಲಿ ಪ್ರತಿ ವಾರ ಎಲಿಮಿನೇಷನ್ ಇರುವುದಿಲ್ಲ. ಆದರೆ ಈ ಸಂಚಿಕೆಯಲ್ಲಿ ಟಾಪ್ ಐದು ಮಕ್ಕಳನ್ನು ಆಯ್ಕೆ ಮಾಡಲೇ ಬೇಕಾಗಿದೆ. ಇನ್ನೊಂದು ಈ ಕಾರ್ಯಕ್ರಮ ನೋಡುವ ವೀಕ್ಷಕರಿಗೆ ಸಹ ದೊಡ್ಡ ನಿರೀಕ್ಷೆ ಇದೆ.

ಪ್ರತಿ ಮಕ್ಕಳು ಇಷ್ಟು ದಿನ ತಮ್ಮ ಅಮೋಘ ಕಂಠಸಿರಿ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಒಬ್ಬರಿಗೆ ಇನ್ನೊಬ್ಬರು ಪೈಪೋಟಿ ನೀಡುವಂತೆ ಹಾಡುತ್ತಿದ್ದಾರೆ. ಎಷ್ಟೋ ಬಾರಿ ತೀರ್ಪುಗಾರರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಅವರೇ ಮಕ್ಕಳು ಹಾಡು ಕೇಳಿ ಯಾರನ್ನು ಆಯ್ಕೆ ಮಾಡುವುದು ಎಂದು ಚಿಂತೆ ಮಾಡುತ್ತಾರೆ. ಆದರೆ ಈ ವಾರ ಸಂಚಿಕೆಯಲ್ಲಿ ಐದು ಮಕ್ಕಳು ಫೈನಲ್ ಮೆಟ್ಟಿಲು ಹತ್ತುತ್ತಾರೆ.


Click it and Unblock the Notifications











