For Quick Alerts
  ALLOW NOTIFICATIONS  
  For Daily Alerts

  ಶೋ ಮುಗಿಯುವ ಮೊದಲೇ ಸಿನಿಮಾದಲ್ಲಿ ಹಾಡಿದ ಸರಿಗಮಪ ಸ್ಪರ್ಧಿಗಳು

  |

  ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಸಾಕಷ್ಟು ಸ್ಪರ್ಧಿಗಳು ಈಗಾಗಲೇ ಸಿನಿಮಾದಲ್ಲಿ ಹಾಡಿದ್ದಾರೆ. ಈಗ ಈ ಸೀಸನ್ ನ (ಸೀಸನ್ 15) ಇಬ್ಬರು ಸ್ಪರ್ಧಿಗಳು ಸಿನಿಮಾದಲ್ಲಿ ಹಾಡಿದ್ದಾರೆ.

  ಹೌದು, ಈ ಬಾರಿಯ ಸರಿಗಮಪ ಕಾರ್ಯಕ್ರಮ ಇನ್ನೂ ಮುಗಿದಿಲ್ಲ. ಆಗಲೇ, ಈ ಸೀಸನ್ ಸ್ಪರ್ಧಿಗಳಾದ ಪೃಥ್ವಿ ಹಾಗೂ ನಿಹಾಲ್ ವಿಜೇತ್ ಸಿನಿಮಾದಲ್ಲಿ ಹಾಡಿ ಬಂದಿದ್ದಾರೆ. ಈ ಸಂಗತಿಗಳನ್ನ ನಿಹಾಲ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

  'ತುಂಗಭದ್ರಾ' ಎಂಬ ಕನ್ನಡ ಸಿನಿಮಾದ ಒಂದು ಹಾಡನ್ನ ಪೃಥ್ವಿ ಹಾಗೂ ನಿಹಾಲ್ ಹಾಡಿದ್ದಾರೆ. ಸದ್ಯದಲ್ಲೇ ಈ ಹಾಡು ಬಿಡುಗಡೆಯಾಗಲಿದೆಯಂತೆ.

  ಪೃಥ್ವಿ ಹಾಗೂ ನಿಹಾಲ್ ಈ ಬಾರಿಯ ಕಾರ್ಯಕ್ರಮದ ಹೈಲೆಟ್ ಆಗಿದ್ದರು. ಪ್ರತಿ ಸಂಚಿಕೆಯಲ್ಲಿ ಸೊಗಸಾಗಿ ಹಾಡುತ್ತಿದ್ದರು. ಇವರ ಪ್ರತಿಭೆಗೆ ಈಗ ಸಿನಿಮಾ ಅವಕಾಶ ಸಿಕ್ಕಿದೆ. ಅದರಲ್ಲಿಯೂ ಕಾರ್ಯಕ್ರಮದ ಈ ಸೀಸನ್ ಮುಗಿಯುವ ಮೊದಲೇ ಇವರು ಸಿನಿಮಾದಲ್ಲಿ ಹಾಡಿರುವುದು ಅಚ್ಚರಿಯ ವಿಷಯ.

  English summary
  Zee Kannada channel's 'Sarigamapa Season 15' contestants Nihal Vijeth and Pruthvi got the chance to sing in 'Thungabadra' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X