ಮತ್ತೆ ಶುರುವಾಯ್ತು ಸರಿಗಮಪ ಲಿಟಲ್ ಚಾಂಪ್ಸ್
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಸೀಸನ್ 15 ಕಳೆದ ವಾರ ಮುಗಿದ್ದಿದ್ದು, ಈ ವಾರದಿಂದ ಸೀಸನ್ 16 ಶುರುವಾಗಿದೆ. ನಿನ್ನೆಯಿಂದ ಕಾರ್ಯಕ್ರಮದ ಪ್ರಸಾರ ಪ್ರಾರಂಭವಾಗಿದೆ.
ಈ ಬಾರಿಯೂ ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ನಾದಬ್ರಹ್ಮ ಹಂಸಲೇಖ ಮಹಾಗುರುಗಳಾಗಿದ್ದಾರೆ. ಅನುಶ್ರೀ ನಿರೂಪಣೆ ಈ ಸೀಸನ್ ನಲ್ಲಿಯೂ ಮುಂದುವರೆಯಲಿದೆ.
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆದಿದ್ದು, ಉತ್ತಮ ಗಾಯಕ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. 5 ರಿಂದ 14 ವಯಸ್ಸಿನ ಮಕ್ಕಳು ಈ ಬಾರಿ ಹಾಡಲಿದ್ದಾರೆ.

ಈ ಬಾರಿಯೂ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನಲೆಯ ಮಕ್ಕಳು ಭಾಗಿಯಾಗಿದ್ದಾರೆ. ಮೆಗಾ ಆಡಿಷನ್ ನಲ್ಲಿಯೇ ಮಕ್ಕಳು ಸೊಗಸಾಗಿ ಹಾಡುತ್ತಿದ್ದಾರೆ.

ಅಂದಹಾಗೆ, ಕಳೆದ ಬಾರಿಯ ಸರಿಗಮಪ ಸೀಸನ್ 15ರಲ್ಲಿ ಕೀರ್ತನ್ ಹೊಳ್ಳ ಹಾಗೂ ಹನುಮಂತಣ್ಣ ವಿಜೇತರಾಗಿದ್ದಾರೆ.
English summary
Zee Kannada channel's popular show 'Sarigamapa Season 16' started from yesterday.


Click it and Unblock the Notifications