SaReGaMaPa: ನಾಗಮಣಿ ಜೊತೆ ಸೇರಿ ಯೌವನಕ್ಕೆ ಜಾರಿದ ರಾಜು: ವೇದಿಕೆ ಮೇಲೆ ಎಮೋಷನಲ್ ಸೀನ್!
ಸರಿಗಮಪ ಶೋನಲ್ಲಿ ಈ ಬಾರಿ ಪ್ರತಿಭೆಗಳ ಜೊತೆಗೆ ಮಾನವೀಯತೆಯೂ ಜೊತೆಯಾಗಿದೆ. ಸಾಮಾನ್ಯವಾಗಿ ಮನುಷ್ಯ ಎಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸೆ ಆಕಾಂಕ್ಷೆಗಳಿರುತ್ತವೆ. ಆದರೆ ಆ ಎಲ್ಲವೂ ಎಲ್ಲರ ಜೀವನದಲ್ಲೂ ಈಡೇರಲ್ಲ. ಸಿಂಗರ್ ಆಗಬೇಕು ಎಂಬುದು ಕೂಡ.
ಹಾಡುವುದೆಂದರೆ ಆಲ್ಮೋಸ್ಟ್ ಎಲ್ಲರಿಗೂ ಇಷ್ಟ. ಅದರಲ್ಲಿ ಬಾತ್ ರೂಮ್ ಸಿಂಗರ್ಸ್ ಇರ್ತಾರೆ, ತನ್ನಿಷ್ಟಕ್ಕೆ ತಾನೂ ಹಾಡಿಕೊಳ್ಳುವವರು ಇರುತ್ತಾರೆ, ಸಂಗೀತ ಕಲಿಯದೆ ಇದ್ದರೂ ಆ ಒಂದಿ ಶೃತಿ, ಪಲ್ಲವಿಯನ್ನು ಸರಿಯಾಗಿ ಹಿಡಿದು ಹಾಡುವವರು ಇರುತ್ತಾರೆ. ಅಂಥ ಸಾಲಿಗೆ ಸೇರಿದವರು ಜೆ.ಕೆ.ರಾಜು.

ಇದಕ್ಕೆ ಹೇಳಿದ್ದು ಪ್ರತಿಭೆಯ ಜೊತೆಗೆ ಮಾನವೀಯತೆಯ ಎಪಿಸೋಡ್ ಎಂದರೂ ತಪ್ಪಾಗಲಾರದು. ರಾಜು ಅವರಿಗೆ ಈಗ 60ರ ಮೇಲಾಗಿದೆ. ಒಂಟಿ ಜೀವ. ಹಾಡುವುದೇ ಕಾಯಕ, ದುಡಿಮೆ. ಆದರೆ ಸಂಗೀತ ಕಲಿತಿಲ್ಲ. ಆ ಜೀವ ಜೀ ಕನ್ನಡದ ಕಣ್ಣಿಗೆ ಬಿದ್ದ ಮೇಲೆ ಒಂದೊಳ್ಳೆ ಸ್ಥಾನಮಾನ ನೀಡಿದೆ. ರಾಜು ಅವರು ಸ್ಪರ್ಧೆಗೆ ಇಳಿದಿಲ್ಲ. ಜೀವನದ ಮೌಲ್ಯ ತಿಳಿಸಿಕೊಡುತ್ತಿದ್ದಾರೆ.
ನಾಗಮಣಿ ಜೊತೆ ಡ್ಯುಯೆಟ್
ಈ ವಾರ ಜೋಡಿ ಸ್ಪರ್ಧೆ ನಡೆಯುತ್ತಿದೆ. ಈ ಜೋಡಿ ಹಾಡಿನಲ್ಲಿ ರಾಜು ಹಾಗೂ ನಾಗಮಣಿ ಒಂದಾಗಿ ಹಾಡಿದ್ದಾರೆ. ತಂ ನಂ ತಂ ನಂ ಮನಸ್ಸು ಮಿಡಿಯುತ್ತಿದೆ.. ಓ ಸೋತಿದೆ.. ಎಂಬ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಬ್ಬರು ಪ್ರೊಫೆಷನಲ್ ಸಿಂಗರ್ಸ್ ಅಲ್ಲದೆ ಹೋದರು ಮೆಂಟರ್ ಗಳ ಸಹಾಯದಿಂದ ಚೆನ್ನಾಗಿ ಹಾಡಿದ್ದಾರೆ.
ರಾಜು ಮಾತು ಕೇಳಿ ವಿಪಿ ಖುಷ್
ರಾಜು ಈ ಹಾಡನ್ನ ಎಂಜಾಯ್ ಮಾಡಿದ್ದಾರೆ. ಅನುಶ್ರೀ ವೇದಿಕೆ ಮೇಲೆ ಬಂದು ದೃಷ್ಟಿ ತೆಗೆದಿದ್ದಾರೆ. ಎಲ್ಲರೂ ರಾಜು ಯೌವ್ವನಾವಸ್ಥೆಯನ್ನ ಹಿಡಿದು ರೇಗಿಸುತ್ತಾ ಇದ್ದರು. ಆಗ ರಾಜು ಅವರು ಈಗ ನಂಗೆ ಯೌವ್ವನ ಬಂದಿದೆ ಎನ್ನುತ್ತಿದ್ದರು. ಅಂದ್ರೆ ಯೌವ್ವನದಲ್ಲಿದ್ದಾಗ ಕಂಡಿದ್ದು ಬರೀ ನೋವೇ. ಈಗ ಯೌವ್ವನದ ಫೀಲ್ ಮಾಡ್ತಾ ಇದ್ದೇನೆ ಎಂದರು. ಸರಿಗಮಪ ಶೋ ರಾಜು ಅವರ ಜೀವನದ ಮೌಲ್ಯಗಳ ಮಾತಿಗೆನೆ ಎಲ್ಲರೂ ಫಿದಾ ಆಗಿದ್ದಾರೆ.

ರಾಜು ಅವರಿಂದ ಸ್ಪೆಷಲ್ ಗಿಫ್ಟ್
ಇಂದು ಗಾಯಕ ವಿಜಯ್ ಪ್ರಕಾಶ್ ಅವರ ಹುಟ್ಟುಹಬ್ಬ. ರಾಜು ಎಂದರೆ ವಿಜಯ್ ಪ್ರಕಾಶ್ ಅವರಿಗೆ ತುಂಬಾ ಇಷ್ಟ. ಅವರ ಮಾತುಗಳೆಂದರೆ ಇನ್ನು ಇಷ್ಟ. ಇದೀಗ ವಿಪಿ ಅವರಿಗೆ ರಾಜು ಅವರು ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಸ್ಪೆಷಲ್ ಗಿಫ್ಟ್ ಕೂಡ ನೀಡಿದ್ದಾರೆ. ಈ ಗಿಫ್ಟ್ ಕಂಡು ಇಡೀ ವೇದಿಕೆಯಲ್ಲಿ ಖುಷಿಯಾಗಿದ್ದಾರೆ.
ವಾಚ್ ಕಂಡು ಏನಂದ್ರು ವಿಪಿ
ವಿಜಯ್ ಪ್ರಕಾಶ್ ಅವರಿಗೆ ಸಾಕಷ್ಟು ದುಬಾರಿ ಬೆಲೆಯ ಗಿಫ್ಟ್ ಸಿಗಬಹುದು. ಆದರೆ ರಾಜು ಅವರ ಕೊಟ್ಟ ಉಡುಗೊರೆಗೆ ವಿಶೇಷವಾದ ಸ್ಥಾನಮಾನವಿದೆ. ಯಾಕಂದ್ರೆ ಬರುವ ಸಂಭಾವನೆಯನ್ನ ಉಳಿಸಿ ತಂದುಕೊಟ್ಟ ಗಿಫ್ಟ್ ಅದು. ರಾಜು ಅವರು ತಂದ ವಾಚ್ ಅನ್ನ ಅವರಿಂದಾನೇ ಕಟ್ಟಿಸಿಕೊಂಡ ವಿಪಿ, ನಾನು ವಾಚ್ ಕಟ್ಟಿಕೊಳ್ತಾ ಇದ್ದೆ. ಆದ್ರೆ ಅದು ಕೇವಲ ಸಮಯ ಮಾತ್ರ ತೋರಿಸ್ತಾ ಇತ್ತು. ಇನ್ಮೇಲೆ ಈ ವಾಚು ನನ್ನ ಸಮಯವನ್ನ ತೋರಿಸುತ್ತದೆ ಎಂದಿದ್ದಾರೆ. ರಾಜು ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











