For Quick Alerts
  ALLOW NOTIFICATIONS  
  For Daily Alerts

  ಸತ್ಯ & ಸ್ನೇಹಾ: ಸ್ಚಾತಂತ್ರ್ಯ ಅಂದರೆ ಏನು ಅಂತ ಹೇಳ್ತಿದ್ದಾರೆ ಜೀ ಕನ್ನಡದ ಹೆಣ್ಣು ಹುಲಿಗಳು!

  By ಎಸ್ ಸುಮಂತ್
  |

  ಇವತ್ತು 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ. ಈ ಸಂಭ್ರಮದ ದಿನವನ್ನು ಅಮೃತ ಮಹೋತ್ಸವವಾಗಿ ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ. ಅದಕ್ಕಾಗಿ ಮಹನೀಯರ ತ್ಯಾಗ, ಬಲಿದಾನವಿದೆ. ಅದರ ಫಲವಾಗಿ ಇವತ್ತು ಎಲ್ಲಾ ಕಡೆಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

  ಜೀ ಕನ್ನಡ ವಾಹಿನಿಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಸ್ವಾತಂತ್ರ್ಯದ ಬಗ್ಗೆ ಜೀ ಕನ್ನಡದ ಹೆಣ್ಣುಲಿಗಳು ಹೇಳುವ ರೀತಿಯೇ ಬೇರೆ.

  ಮಹಿಳೆಯರೆಲ್ಲರೂ ಅರಿಶಿನ-ಕುಂಕುಮ ಹಿಡಿದು ಆಂಕರ್ ಶಾಲಿನಿಗೆ ಪೂಜೆ ಮಾಡಿದ್ಯಾಕೆ?ಮಹಿಳೆಯರೆಲ್ಲರೂ ಅರಿಶಿನ-ಕುಂಕುಮ ಹಿಡಿದು ಆಂಕರ್ ಶಾಲಿನಿಗೆ ಪೂಜೆ ಮಾಡಿದ್ಯಾಕೆ?

  ಜೀ ಕನ್ನಡದ ಹೆಣ್ಣುಲಿಗಳು ಎಂದರೆ ಈಗಾಗಲೇ ನಿಮಗೆ ಅರ್ಥವಾಗಿರಬೇಕು. ಒಬ್ಬರು ಸತ್ಯ, ಇನ್ನೊಬ್ಬರು ಸ್ನೇಹಾ. 'ಪುಟ್ಟಕ್ಕನ ಮಗಳು' ಸ್ನೇಹಾ ಮತ್ತು ಜಾನಕಿ ಮಗಳು ಸತ್ಯ ಇಬ್ಬರು ಒಂದೇ ರೀತಿಯ ಮನೋಭಾವದವರು. ಇಬ್ಬರು ಗಟ್ಟಿಗಿತ್ತಿಯರು. ಕಷ್ಟಕ್ಕೆ ತಲೆಬಾಗುವುದಿಲ್ಲ, ಆದರೆ ಕಷ್ಟ ಎಂದವರಿಗೆ ಸಹಾಯಕ್ಕೆ ನಿಲ್ಲುತ್ತಾರೆ. ಇದು ಅವರಿಬ್ಬರ ಗುಣ. ಇಂದು ಸ್ವಾತಂತ್ರ್ಯೋತ್ಸವದಂದು ಸ್ವಾತಂತ್ರ್ಯ ಬಗ್ಗೆ ಮಾತನಾಡಿದ್ದಾರೆ.

  ಸತ್ಯಾಳ ಪ್ರಕಾರ ಸ್ವಾತಂತ್ರ್ಯ ಯಾವುದು?

  ಸತ್ಯಾಳ ಪ್ರಕಾರ ಸ್ವಾತಂತ್ರ್ಯ ಯಾವುದು?

  ಸತ್ಯ ಗಟ್ಟಿಗಿತ್ತಿ. ತನ್ನ ಇಡೀ ಸಂಸಾರವನ್ನು ತಾನೇ ನಿಭಾಯಿಸುತ್ತಿದ್ದವಳು. ತನ್ನೆಲ್ಲಾ ಆಸೆಯನ್ನು ಬದಿಗಿಟ್ಟು ತನ್ನವರ ಸಂತೋಷಕ್ಕಾಗಿ ದುಡಿಯುತ್ತಿದ್ದವಳು. ಆದರೆ ಈಗ ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ. ಸಾಕಷ್ಟು ಸವಾಲಿನ ನಡುವೆ ಸಂಸಾರ ನಡೆಸುತ್ತಿದ್ದಾಳೆ. ಆದರೆ ಸತ್ಯಾಳ ಪ್ರಕಾರ ಸ್ವಾತಂತ್ರ್ಯ ಎಂದರೆ ಏನು ಗೊತ್ತಾ..? ಇವತ್ತು ನನ್ನ ಸ್ವಾತಂತ್ರ್ಯ ದಿನ. ಹೆಣ್ಣು ಮಾಡುವುದಕ್ಕೆ ಆಗದೆ ಇರುವಂಥದ್ದು ಏನು ಇಲ್ಲ ಎಂದು ಅರ್ಥ ಮಾಡಿಕೊಂಡ ದಿನ ಎನ್ನುತ್ತಿದ್ದಾಳೆ.

  ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ಇರ್ತೀನಿ: ದರ್ಶನ್ ಮಾತು ನೆನೆದು ಭಾವುಕರಾದ ರಕ್ಷಿತಾ!ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ಇರ್ತೀನಿ: ದರ್ಶನ್ ಮಾತು ನೆನೆದು ಭಾವುಕರಾದ ರಕ್ಷಿತಾ!

  ಸ್ನೇಹಾಳಿಗೆ ಸ್ವಾತಂತ್ರ್ಯ ಎಂದರೇನು?

  ಸ್ನೇಹಾಳಿಗೆ ಸ್ವಾತಂತ್ರ್ಯ ಎಂದರೇನು?

  ಇನ್ನು ಸ್ನೇಹಾ ಕೂಡ ಗಟ್ಟಿಗಿತ್ತಿ. ಅನ್ಯಾಯ ಕಂಡರೆ ಅದು ಯಾರೇ ಆಗಿರಲಿ ಬುದ್ದಿ ಹೇಳುತ್ತಾಳೆ‌. ತಿದ್ದುಕೊಳ್ಳದೆ ಹೋದರೆ ಅಲ್ಲಿ ಮಚ್ಚು, ಲಾಂಗು ಏನೇ ಇದ್ದರು ಅದರಲ್ಲಿಯೇ ಬುದ್ದಿ ಹೇಳಲು ಹೊರಡುತ್ತಾಳೆ. ತಮ್ಮ ಸಂಸಾರಕ್ಕಾಗಿ ಮೆಸ್ ಒಂದನ್ನು ನಡೆಸುತ್ತಿದ್ದಾರೆ. ನಾನು ನಮ್ಮ ಅಕ್ಕ ತಂಗಿಯರು ಸೇರಿಕೊಂಡು ಅವ್ವನ ಜೊತೆ ಮೆಸ್ ಶುರು ಮಾಡಿದೆವೋ ಅಂದೇ ನಮ್ಮ ಸ್ವಾತಂತ್ರ್ಯದ ದಿನ. ಈ ಮೆಸ್‌ನಿಂದ ಜೀವನವೂ ನಡಿತಿದೆ. ನಮ್ಮ ಕನಸು ಈಡೇರಿದೆ ಎಂದಿದ್ದಾರೆ.

  ಸ್ವಾತಂತ್ರ್ಯ ದಿನ ಜೀ ಧೈರ್ಯ

  ಸ್ವಾತಂತ್ರ್ಯ ದಿನ ಜೀ ಧೈರ್ಯ

  ಸ್ವಾತಂತ್ರ್ಯ ಎಂಬುದು ಕೆಲವೊಂದು ವಿಚಾರದಲ್ಲಿ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಕೆಲವೊಬ್ಬರು ಸ್ವಾತಂತ್ರ್ಯ ಪಡೆಯುವಲ್ಲಿ ಇನ್ನು ಹಿಂದುಳಿದಿದ್ದಾರೆ. ಕೆಲವೊಂದು ಹಳ್ಳಿಗಳು, ಊರುಗಳಲ್ಲಿ ಹೆಣ್ಣಿಗೆ ಇನ್ನು ಹೆಚ್ಚಿನ ಶಿಕ್ಷಣ ಕೊಡಿಸುವ ಉಸಾಬರಿಗೆ ಹೋಗಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಮನೆಯಲ್ಲಿಯೇ ಕುಳಿತು ಸಮಯ ಕಳೆಯುವಂತಾಗಿದೆ. ಜೀ ಕನ್ನಡ ಸಾರಿರುವ ಪದಗಳ ಬಂಧ ಎಂತಹವರಿಗೂ ಸ್ಪೂರ್ತಿ ನೀಡುತ್ತಿದೆ. ಯಾವತ್ತೂ ಅಡೆತಡೆಗಳನ್ನು ದಾಟಿಕೊಂಡು ಹೋಗುವೆಯೋ ಅಂದಿನಿಂದ ಪ್ರತಿದಿನ ಸ್ವಾತಂತ್ರ್ಯ ದಿನವಾಗಿರುತ್ತದೆ. ಸ್ವಾತಂತ್ರ್ಯ ಭಾರತದ ಸ್ಪೂರ್ತಿಗೆ ನಮನಗಳು ಎಂದು ಜೀ ಕನ್ನಡ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

  ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!

  ಬೆಸ್ಟ್ ಮೆಸೇಜ್ ಎಂದ ನೆಟ್ಟಿಗರು

  ಬೆಸ್ಟ್ ಮೆಸೇಜ್ ಎಂದ ನೆಟ್ಟಿಗರು

  ಜೀ ಕನ್ನಡ ವಾಹಿನಿ ಸ್ಪೆಷಲ್ ದಿನಗಳಿಗೆ ಉತ್ತಮ ಸಂದೇಶಗಳನ್ನು ನೀಡುವಂತ ವಿಡಿಯೋಗಳನ್ನು ಹಂಚುತ್ತಾ ಇರುತ್ತದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಗೂ ಒಳ್ಳೆ ಸಂದೇಶ ಇರುವಂಥಹ ವಿಡಿಯೋವನ್ನು ಹಂಚಿಕೊಂಡಿದೆ. ಉತ್ತಮವಾದ ಮೆಸೇಜ್‌ಗೆ ಎಲ್ಲರೂ ಭೇಷ್ ಎಂದಿದ್ದಾರೆ. ಜೊತೆಗೆ ಕಂಠಿಯ ವಿಡಿಯೋಗೂ ಡಿಮ್ಯಾಂಡ್ ಇಟ್ಟಿದ್ದಾರೆ. ಇದೇ ರೀತಿ ಕಂಠಿ ವಿಡಿಯೋ ಹಾಕಿ ಎಂದಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

  English summary
  Sathya And Puttakkana Makkalu Serial Cast And Crew Celebrated Independence Day. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X