Sathya: ಪರೀಕ್ಷೆಯಿಂದ ದೂರ ಉಳಿದ ಸತ್ಯ: ಇದೆಲ್ಲಾ ಕೀರ್ತನಾ ಲೆಕ್ಕಾಚಾರ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾ, ಬಾಲನ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾಳೆ. ಇದು ಬಾಲನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಹೀಗಾಗಿ ಬಾಲ ಕೆಲಸ ಮಾಡುವಾಗಲೂ ಇದನ್ನೇ ಯೋಚಿಸುತ್ತಿರುತ್ತಾನೆ.

ಅಮಾಟೆ ಬಂದು ಬಾಲನಿಗೆ ದಿವ್ಯಾ ಅಕ್ಕನ ಬಗ್ಗೆ ಹೆಚ್ಚು ಯೋಚಿಸಬೇಡಿ. ಅವರ ಬುದ್ಧಿ ಎಲ್ಲರಿಗೂ ಗೊತ್ತಿರುವುದೇ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ ಎಂದು ಸಮಾಧಾನ ಮಾಡುತ್ತಾನೆ.

Sathya Kannada Serial 04th December episode written update

ಇತ್ತ ದಿವ್ಯಾ ಆಫೀಸಿನಲ್ಲಿ ಸುಪ್ರೀತ್‌ ಜೊತೆಗೆ ಪಾರ್ಟಿ ಮಾಡುತ್ತಿರುತ್ತಾಳೆ. ಇವನ ಜೊತೆಗೆ ಇದ್ದರೆ, ತಾನು ರಾಣಿಯಂತೆ ಜೀವಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾಳೆ.

ಕೈ ಮೇಲೆ ಬಿತ್ತು ಕಲ್ಲು

ಇನ್ನು ಸತ್ಯಳ ಪರೀಕ್ಷೆ ಹತ್ತಿರವಿದ್ದು, ಹಗಲು-ರಾತ್ರಿ ಎನ್ನದೇ ಓದಿಕೊಳ್ಳುತ್ತಿದ್ದಾಳೆ. ಸ್ವಲ್ಪ ರಿಲ್ಯಾಕ್ಸ್‌ ಮಾಡಿಕೊಳ್ಳಲೆಂದು ಅಡುಗೆ ಮನೆಗೆ ಬರುತ್ತಾಳೆ. ಈ ಸಂದರ್ಭದಲ್ಲಿ ಕೀರ್ತನಾ ಪಾತ್ರೆ ತೊಳೆಯುತ್ತಿರುವುದಕ್ಕೆ ಕಿಂಡಲ್‌ ಮಾಡುತ್ತಿರುತ್ತಾಳೆ. ಕೀರ್ತನಾಳಿಗೆ ಮೊದಲೇ ಸತ್ಯ ಮೇಲೆ ಕೋಪ ಅದೂ ಅಲ್ಲದೇ, ಈಗ ಅವಳು ಪರೀಕ್ಷೆ ಬರೆಯುತ್ತಿರುವುದು ಇಷ್ಟವಿರುವುದಿಲ್ಲ. ಹಾಗಾಗಿ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳುವ ಕೀರ್ತನಾ ಸತ್ಯ ಕೈ ಮೇಲೆ ಗುಂಡುಕಲ್ಲು ಬೀಳುವಂತೆ ಮಾಡುತ್ತಾಳೆ. ಇದರಿಂದ ಸತ್ಯ ಕೈಗೆ ಭಾರೀ ಪೆಟ್ಟು ಬೀಳುತ್ತದೆ. ಮನೆಯವರೆಲ್ಲರನ್ನೂ ಗಾಬರಿಯಾಗುವಂತೆ ಸತ್ಯ ಕಿರುಚಿಕೊಳ್ಳುತ್ತಾಳೆ.

ಸತ್ಯ ಬಗ್ಗೆ ಸೀತಾ ಕಾಳಜಿ

ತಕ್ಷಣವೇ ಓಡಿ ಬರುವ ಊರ್ಮಿಳಾ ಮತ್ತು ಸೀತಾ ಕಾರ್ತಿಕ್‌ ಕರೆದು ಸತ್ಯಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಇತ್ತ ಮನೆಯಲ್ಲಿ ಸೀತಾ ಮತ್ತು ಊರ್ಮಿಳಾ, ಸತ್ಯ ಬಗ್ಗೆ ಯೋಚಿಸುತ್ತಿರುತ್ತಾರೆ. ಸತ್ಯ ಪರೀಕ್ಷೆ ಬರೆಯಬೇಕು ಎಂದು ಆಸೆಯಿಂದ ಇದ್ದಾಳೆ. ಇದಕ್ಕೋಸ್ಕರ ಬಹಳ ಕಷ್ಟಪಟ್ಟು ಓದುತ್ತಿದ್ದಳು. ಈಗ ಕೈ ಮೇಲೆ ಏಟು ಮಾಡಿಕೊಂಡಿದ್ದಾಳೆ. ನಾಳೆಯೇ ಪರೀಕ್ಷೆಯನ್ನು ಬರೆಯಬೇಕು. ಅವಳ ಕೈಗೆ ಏನಾಗಿದೆಯೋ ವೈದ್ಯರು ಏನು ಹೇಳುತ್ತಾರೋ ಗೊತ್ತಿಲ್ಲ ಎಂದು ಚಿಂತೆಗೀಡಾಗಿರುತ್ತಾರೆ. ಆದರೆ, ಇವರ್ಯಾರಿಗೂ ಗುಂಡು ಕಲ್ಲನ್ನು ಕೀರ್ತನಾ ಬೇಕಂತಲೇ ಸತ್ಯ ಕೈ ಮೇಲೆ ಹಾಕಿದಳು ಎಂಬುದು ಗೊತ್ತಿಲ್ಲ.

Sathya Kannada Serial 04th December episode written update

ಈ ವರ್ಷ ಸತ್ಯ ಪರೀಕ್ಷೆ ಬರೆಯೋಕೆ ಆಗಲ್ಲ

ಆಸ್ಪತ್ರೆಯಿಂದ ಬರುವ ಸತ್ಯ ಬಲಗೈಗೆ ವೈದ್ಯರು ಬ್ಯಾಂಡೇಜ್‌ ಹಾಕಿರುತ್ತಾರೆ. ಇದನ್ನು ನೋಡಿದ ಮನೆಯವರು ಗಾಬರಿಯಾಗುತ್ತಾರೆ. ಆಗ ಕಾರ್ತಿಕ್‌ ಸತ್ಯ ಈ ವರ್ಷ ಪರೀಕ್ಷೆ ಬರೆಯುವಂತಿಲ್ಲ. ಕೈ ಬೆರಳುಗಳು ಮತ್ತು ಮಣಿಕಟ್ಟಿಗೆ ಏಟು ಬಿದ್ದಿದೆ. ಈ ವರ್ಷ ಸತ್ಯ ರೆಸ್ಟ್‌ ಮಾಡಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಮನೆಯವರಿಗೆ ಬೇಸರವಾಗುತ್ತದೆ. ಸತ್ಯಳಿಗೆ ತನ್ನ ಕನಸು ಈಡೇರುವುದಿಲ್ಲವೇನೋ ಎಂದು ನೆನೆದು ಅಳುತ್ತಿರುತ್ತಾಳೆ. ತನ್ನ ತಂದೆಯನ್ನು ಸ್ಮರಿಸುತ್ತಾ ಕಣ್ಣೀರು ಹಾಕುವಾಗ ಮನೆಯವರು ಸತ್ಯಳಿಗೆ ಸಮಾಧಾನ ಹೇಳುತ್ತಾರೆ.

ಕೀರ್ತನಾಳಿಗೆ ಈಗ ಖುಷಿಯೋ ಖುಷಿ

ಇನ್ನು ಸತ್ಯಳ ಕೈ ಡ್ಯಾಮೇಜ್‌ ಆಗಿರುವುದನ್ನು ನೋಡಿದ ಸುಹಾಸ್‌ಗೆ ಖುಷಿಯಾಗುತ್ತದೆ. ಈ ವಿಚಾರವನ್ನು ಮೊದಲು ಕೀರ್ತನಾಳಿಗೆ ಹೇಳಬೇಕು. ಆಗ ಕೀರ್ತನಾಳಿಗೆ ಖುಷಿಯಾಗುತ್ತದೆ ಎಂದು ಹೋಗಿ ಹೇಳುತ್ತಾನೆ. ಆಗ ಕೀರ್ತನಾ ಅದರ ಹಿಂದಿನ ಮಾಸ್ಟರ್‌ ಪ್ಲಾನ್‌ ನನ್ನದೇ. ನಾನೇ ಬೇಕಂತಲೇ ಅವಳ ಕೈ ಡ್ಯಾಮೇಜ್‌ ಮಾಡಿದ್ದು. ಅವಳು ಪರೀಕ್ಷೆ ಹೇಗೆ ಬರೆಯುತ್ತಾಳೋ ನಾನೂ ನೋಡುತ್ತೀನಿ. ಸತ್ಯ ನನ್ನ ಎದುರು ಹಾಕಿಕೊಂಡಿರುವುದು. ನಾನು ಸುಮ್ಮನೆ ಬಿಡುತ್ತೀನಾ? ಎನ್ನುತ್ತಾಳೆ. ಸದ್ಯ ಕೀರ್ತನಾ ಪ್ಲಾನ್‌ನಂತೆಯೇ ಸತ್ಯ ಪರೀಕ್ಷೆಯನ್ನು ಬರೆಯದಂತೆ ಆಗಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ.

More from Filmibeat

English summary
Sathya Kannada Serial today Episode Update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X