Sathya: ಸತ್ಯ ಮೇಲೆ ಕಾರ್ತಿಕ್ ಗರಂ; ನಕಲಿ ಮಾತ್ರೆಯ ಜಾಲತಾಣವನ್ನು ಬೇದಿಸುತ್ತಾಳ ಸತ್ಯ?
ಸತ್ಯ ತೆಗೆದುಕೊಂಡ ನಿರ್ಧಾರದಿಂದಾಗಿ ಕಾರ್ತಿಕ್ ಮನಸ್ಸು ಮುರಿದು ಹೋಗಿದೆ. ಹಾಗೆಯೇ ಕೋಟೆ ಮನೆಯ ಘನತೆ ನೆಲಕ್ಕುರುಳಿದೆ. ಸತ್ಯ ಎಂದರೆ ಸತ್ಯಕ್ಕೆ ತಕ್ಕ ಹಾಗೆ ನಡೆದುಕೊಳ್ಳುವವಳು. ಆದರೆ ಸತ್ಯಗೆ ತನ್ನ ಪೊಲೀಸ್ ಆಫೀಸರ್ ಒತ್ತಡದಿಂದ ಹಾಗೆಯೇ ಕಾರ್ತಿಕ್ ಅರೆಸ್ಟ್ ಮಾಡಲು ಸಾಕಷ್ಟು ಪುರಾವೆಗಳು ಸಿಕ್ಕಿರುವುದರಿಂದ ಸತ್ಯಗೆ ಇದು ಅನಿವಾರ್ಯ ಪರಿಸ್ಥಿತಿ.
ಅಂದು ಕಾರ್ತಿಕ್‌ಗೆ ಒಂದು ಸ್ಪೆಷಲ್ ಡೇ. ಕಾರ್ತಿಕ್ ಯಾವತ್ತೂ ಸತ್ಯ ಮಾಡುತ್ತಿರುವ ಕೆಲಸದ ಬಗ್ಗೆಯಾಗಲೀ ಅಥವಾ ಆಕೆ ಎಷ್ಟೇ ಸಮಯದಲ್ಲಿ ಕೂಡ ಕರ್ತವ್ಯ ಮಾಡಲು ಹೋಗಲು ಕೂಡ ಬಿಡುತ್ತಿದ್ದ. ಆತನಿಗೆ ಸತ್ಯ ಮೇಲೆ ಬಹಳ ಪ್ರೀತಿ. ಸತ್ಯ ಎಂದರೆ ಬಹಳ ಅಚ್ಚುಮೆಚ್ಚು ಕೂಡ. ಇನ್ನೂ ಸತ್ಯ ಗೆ ತನ್ನ ಗಂಡನನ್ನು ಅರೆಸ್ಟ್ ಮಾಡಿದಾಗ ಮನೆ ಮಂದಿಯೆಲ್ಲ ಅಡ್ಡ ಬಂದರೂ ಯಾರನ್ನು ಲೆಕ್ಕಿಸುವುದು ಇಲ್ಲ.

ಸತ್ಯಗೆ ತನ್ನ ಮನೆಯವರಿಗಿಂತ ಆಗ ಕರ್ತವ್ಯವೇ ಹೆಚ್ಚಾಗಿ ಬಿಡುತ್ತದೆ. ಯಾರೇ ಬಂದರೂ ಅವರನ್ನು ದೂರಕ್ಕೆ ತಳ್ಳಿ ಕಾರ್ತಿಕ್ ನನ್ನು ಅರೆಸ್ಟ್ ಮಾಡುತ್ತಾಳೆ. ಸೀತಾ ಜೋರಾಗಿ ಅಳುತ್ತಾಳೆ. ಹಾಗೆಯೇ ಸಮಾಧಾನ ಮಾಡಲು ಬಂದ ಸತ್ಯ ಮನೆಯವರ ಮೇಲೆ ಕೂಗಡುತ್ತಾಳೆ. ದಯವಿಟ್ಟು ನೀವು ಈ ಮನೆಯಿಂದ ಹೊರಟು ಹೋಗಿ ಎಂದು ಗಿರಿಜಾ ಮಾತನ್ನು ಕೇಳದೇ ಕೊಂಚ ಕಠೋರವಾಗಿ ಮಾತನಾಡುತ್ತಾಳೆ. ಜಾನಕಿಗೆ ಬಹಳ ನೋವಾಗುತ್ತದೆ.
ಸತ್ಯ ತನ್ನ ಜೀವನವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾಕೆ ಹೀಗೆಲ್ಲ ಮಾಡಿ ನನ್ನ ಹೊಟ್ಟೆ ಉರಿಸುತ್ತಾ ಇರುತ್ತಾಳೆ ಎಂದು ಬಹಳ ಜೋರಾಗಿ ಅಳುತ್ತಾರೆ. ಇತ್ತ ಕಾರ್ತಿಕ್ ಏನೇ ಹೇಳಿದರೂ ಸತ್ಯ ಕೇಳುವುದಿಲ್ಲ. ಕೊನೆಗೆ ಒಂದೇ ಒಂದು ಮಾತು ಹೇಳುತ್ತಾಳೆ. ಕಾರ್ತಿಕ್ ನಿಮ್ಮ ಮೇಲೆ ಬಹಳ ದೊಡ್ಡ ಅಪಾವಾದವೇ ಇದೆ. ಹಾಗೆಯೇ ನಕಲಿ ಮಾತ್ರೆಯ ಜಾಲತಾಣದಲ್ಲಿ ನಿನ್ನ ಹೆಸರು ದೊಡ್ಡದಾಗಿ ಕೇಳಿ ಬರುತ್ತಿದೆ.
ನಿಮ್ಮ ಮೇಲಿನ ಆರೋಪಕ್ಕೆ ಅದಕ್ಕೆ ಬೇಕಾದ ಸಾಕ್ಷಿಗಳು ಕೂಡ ಸಿಕ್ಕಿದೆ ಎನ್ನುತ್ತಾಳೆ. ಇದನ್ನು ಕೇಳಿದ ಕಾರ್ತಿಕ್, ನಾನು ಅಂತಹ ಕೆಲಸ ಮಾಡಲು ಸಾಧ್ಯವಿಲ್ಲ. ನಿಮಗೆ ಯಾರೋ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದಾಗ ಆತನಿಗೆ ಶಾಕ್ ಆಗುತ್ತದೆ. ಕೊನೆಗೆ ನಾನು ಆ ರೀತಿ ಮಾಡಿಲ್ಲ ಎಂದು ಹೇಳಿ ಸುಮ್ಮನಾಗುತ್ತಾನೆ.
ಸತ್ಯ ವಿರುದ್ದ ತಿರುಗಿಬಿದ್ದ ಮನೆಮಂದಿ
ಇನ್ನೂ ಸತ್ಯ ಡ್ಯೂಟಿ ಮುಗಿಸಿ ಕೋಟೆ ಮನೆಗೆ ಬಂದಾಗ ಯಾರು ಮಲಗಿರುವುದಿಲ್ಲ. ಸತ್ಯಳ ಮೇಲೆ ಎಲ್ಲರೂ ತಿರುಗಿ ಬೀಳುತ್ತಾರೆ. ಸತ್ಯ ನೀನು ಈ ರೀತಿ ಮಾಡಿ ಬಿಟ್ಟೆಯಲ್ಲ ಎಂದು ಬಹಳ ನೋವಿನಿಂದ ಹೇಳುತ್ತಾರೆ. ಸತ್ಯ ಗೆ ಏನು ಹೇಳದೇ ಅಲ್ಲಿಂದ ರಾಮಚಂದ್ರ ರಾಯರು ಹೊರಟು ಹೋದರೆ ಇತ್ತ ಸೀತಾ ಮಾತ್ರ ಬಹಳ ಕೋಪದಿಂದ ಆಕೆಯ ಮಾತನ್ನು ಕೇಳದೇ ಅಲ್ಲಿಂದ ಹೊರಟು ಹೋಗುತ್ತಾಳೆ.

ನಿಜ ಹೇಳಿದರೂ ಕಾರ್ತಿಕ್ ಕೇಳಲ್ಲ
ಮರುದಿನ ಸತ್ಯ, ಕಾರ್ತಿಕ್‌ಗಾಗಿ ಊಟ ತೆಗೆದುಕೊಂಡು ಬಂದಿರುತ್ತಾಳೆ. ಆಕೆ ಪೊಲೀಸ್ ಯೂನಿಫಾರಂನಲ್ಲಿ ಇರುವುದಿಲ್ಲ. ಕಾರ್ತಿಕ್‌ಗೆ ಸತ್ಯ ಎಂದರೆ ಬಹಳ ಕೋಪ. ತನ್ನ ಮಾತನ್ನು ಕೇಳದೇ ಸ್ಟೇಷನ್‌ಗೆ ಹಾಕಿ ಬಿಟ್ಟಳು, ಆಕೆಗೆ ಅವಳು ಹೇಳಿದ್ದೆ ಆಗಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಇನ್ನೂ ಸತ್ಯ ಇದ್ದ ನಿಜ ವಿಚಾರವನ್ನು ಕಾರ್ತಿಕ್ ಬಳಿ ಹೇಳಿದರು, ಆತ ಸತ್ಯನ ಒಂದು ಮಾತು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ.
ಸತ್ಯಳನ್ನು ಮನಸ್ಸಿನಿಂದ ದೂರ ಮಾಡಿದ ಕಾರ್ತಿಕ್
ಕೊನೆಗೆ ನೀನು ನನ್ನ ಹೆಂಡತಿಯೇ ಅಲ್ಲ ಎಂದು ಹೇಳುತ್ತಾನೆ . ಸತ್ಯಗೆ ಇದೆಲ್ಲ ಬಹಳ ನೋವು ಹಿಂಸೆ ಕೊಡುತ್ತಿರುತ್ತದೆ. ಆದರೆ ಮುಂದೇನು ಹೇಳಬೇಕು ಎಂದು ತಿಳಿಯದೇ ಆಗುತ್ತದೆ. ಕಾರ್ತಿಕ್‌ಗೆ ಅದೆಷ್ಟೇ ತಿಳಿ ಹೇಳಿದರು ಆತ ಮಾತ್ರ ಸತ್ಯ ನೀನು ಮಾಡುತ್ತಿರುವುದು ತಪ್ಪು ಆತ ಒತ್ತಿ ಒತ್ತಿ ಹೇಳುತ್ತಾನೆ. ಆದರೂ ಏನು ಮರು ಮಾತನಾಡಲು ಆಗದೇ ಸತ್ಯ ಮನೆಯತ್ತ ಹೆಜ್ಜೆ ಹಾಕುತ್ತಾಳೆ.
ಸತ್ಯಗೆ ಕಾಡುತ್ತಿದೆ ಪ್ರಶ್ನೆಗಳ ಸುರಿಮಳೆ
ಸತ್ಯಗೆ ಪ್ರಶ್ನೆಗಳ ಸುರಿಮಳೆ ಕಾಡುತ್ತಿದೆ. ಯಾಕೆ ಅಮೂಲ್ ಬೇಬಿಯ ಹೆಸರು ನಕಲಿ ಮಾತ್ರೆಯ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಕಾರ್ತಿಕ್ ಕಂಪನಿಯಲ್ಲಿ ನಕಲಿ ಮಾತ್ರೆಗಳ ಮಾಫಿಯಾ ಇದೆಯಾ? ಇದೆಲ್ಲ ವಿಚಾರ ಕಾರ್ತಿಕ್‌ಗೆ ತಿಳಿಯದೇ ಇರಲು ಹೇಗೆ ಸಾಧ್ಯ.ಚಅಥವಾ ಕಾರ್ತಿಕ್ ಕಣ್ಣು ತಪ್ಪಿಸಿ ಬೇರೆ ಯಾರಾದರೂ ಈ ದಂಧೆಯನ್ನು ಶುರು ಮಾಡಿದ್ದಾರಾ? ಎನ್ನುವ ಸಂಶಯ ಮೂಡುತ್ತದೆ.


Click it and Unblock the Notifications











