Sathya: ಸತ್ಯ ಬದಲು ಪರೀಕ್ಷೆ ಬರೆದ ಸೀತಾ, ಅತ್ತೆಯ ನಡವಳಿಕೆ ಕಂಡು ಖುಷಿ ಪಟ್ಟ ಜನ
ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಅತ್ತೆ- ಸೊಸೆ ಸಂಬಂಧ ನೋಡಿ ಜನರಿಗೆ ಬಹಳ ಖುಷಿಯಾಗುತ್ತಿದೆ. ಇದೀಗ ಸತ್ಯಗೆ ಪರೀಕ್ಷೆ ಬರೆಯಲು ಆಗುವುದಿಲ್ಲ. ಆಕೆಯ ಕೈಯ ಮೇಲೆ ಕಾರ್ತಿಕ್ ಅಕ್ಕ ಕೀರ್ತನಾ ಕಲ್ಲು ಹಾಕಿದ್ದಾಳೆ. ದಿನದಿಂದ ದಿನಕ್ಕೆ ಕೀರ್ತನಾ ಆಟ ಜಾಸ್ತಿಯಾಗುತ್ತಿದೆ. ಇದೀಗ ಸತ್ಯ ಕೂಡ ಕೀರ್ತನಾಳಿಂದ ಬಹಳ ಕಷ್ಟವನ್ನ ಅನುಭವಿಸಿದ್ದಾಳೆ.
ಪರೀಕ್ಷೆಗೂ ಹೋಗದ ಸ್ಥಿತಿಯನ್ನು ಕೀರ್ತನಾ ಸತ್ಯಗೆ ಸಂಕಷ್ಟ ತಂದಿಟ್ಟಿದ್ದಾಳೆ. ಏನು ಮಾಡಬೇಕೆಂದು ತಿಳಿಯದೆ ಸತ್ಯ ಬಹಳ ಬೇಸರ ಮಾಡಿಕೊಂಡಿದ್ದಾಳೆ. ಕಾರ್ತಿಕ್ ಸತ್ಯ ಚಡಪಡಿಸುವುದನ್ನು ನೋಡಿ ಬಹಳ ಬೇಸರಪಟ್ಟುಕೊಂಡಿರುತ್ತಾನೆ. ಸತ್ಯ ಹೇಗಾದರೂ ಮಾಡಿ ಪರೀಕ್ಷೆ ಬರೆಯಲೇಬೇಕು ಆಕೆ ಆಸೆ ಪಟ್ಟಿರುವುದು ನೆರವೇರಬೇಕು ಎಂದು ಸತ್ಯನೀಗಾಗಿ ಎಲ್ಲಾ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾನೆ.

ಇನ್ನೂ ಪರೀಕ್ಷೆಯ ಹಾಲಿಗೆ ಹೋಗಿ ಕಾರ್ತಿಕ್ ಹಾಗೂ ಸತ್ಯ ಇಬ್ಬರು ಕುಳಿತುಕೊಳ್ಳುತ್ತಾರೆ. ಸತ್ಯ ಹೇಳಿದ ಉತ್ತರವನ್ನು ಕಾರ್ತಿಕ್ ಬರೆಯುವ ನಿರ್ಧಾರ ಮಾಡಿರುತ್ತಾರೆ. ಆದರೆ ಅದು ಕಾನೂನು ಬಾಹಿರ ಆಗಿರುವುದರಿಂದ ಏನು ಮಾಡಲಾಗದ ಸ್ಥಿತಿಯಲ್ಲಿ ಕಾರ್ತಿಕ್ ಹಾಗೂ ಸತ್ಯ ಪರೀಕ್ಷೆಯ ಹಾಲಿನಿಂದ ಹೊರ ಬರುತ್ತಾರೆ. ಕಾರ್ತಿಕ್ ಬಹಳ ಬೇಸರ ಮಾಡಿಕೊಂಡು ಸಪ್ಪೆ ಮುಖ ಮಾಡಿಕೊಂಡು ಸತ್ಯ ಮುಂದೆ ನಿಂತು ಕ್ಷಮೆಯಾಚಿಸುತ್ತಾನೆ.
ಸೊಸೆ ಸತ್ಯ ಸಹಾಯಕ್ಕೆ ಬಂದ ಅತ್ತೆ ಸೀತಾ
ಕಾರ್ತಿಕ್ ಗೆಳೆಯ ಸೀತಾಳನ್ನು ಕರೆದುಕೊಂಡು ಬರುತ್ತಾರೆ. ತನ್ನ ತಾಯಿ ಬರುತ್ತಿರುವುದನ್ನು ನೋಡಿದ ಕಾರ್ತಿಕ್ ಗೆ ಬಹಳ ಶಾಕ್ ಆಗುತ್ತದೆ. ಸತ್ಯ ಪರೀಕ್ಷೆಯನ್ನು ತನ್ನ ತಾಯಿ ಬರೆಯಬಹುದಲ್ಲ ಎಂದು ಆಲೋಚನೆ ಕೂಡ ಬರುತ್ತದೆ. ಆ ಬಳಿಕ ಸತ್ಯ ಪರೀಕ್ಷೆಯನ್ನು ಸೀತಾ ಬರೆಯುತ್ತಾರೆ. ಇದನ್ನೆಲ್ಲ ನೋಡಿದ ಜನರು ಬಹಳ ಖುಷಿ ಪಡುತ್ತಿದ್ದಾರೆ.
ಸೀತಾಳನ್ನು ಗುಣಗಾನ ಮಾಡಿದ ಧಾರಾವಾಹಿ ನೋಡುಗರು
ಅತ್ತೆಯೆಂದರೆ ಹೀಗಿರಬೇಕು ಎಂದು ಸೀತಾಳನ ಹಾಡಿ ಹೊಗಳುತ್ತಿರುತ್ತಾರೆ. ಇತ್ತ ದಿವ್ಯ ಯಾವುದೇ ಲಂಗು ಲಗಾಮಿ ಇಲ್ಲದೆ ಓಡಾಡುತ್ತಿರುತ್ತಾಳೆ. ಆಕೆ ಕೆಲಸಕ್ಕೆ ಸೇರಿರುವುದೇ ಇಷ್ಟು ದೊಡ್ಡ ರಂಪಾಟಕ್ಕೆ ಕಾರಣ. ಕೆಲಸಕ್ಕೆ ಹೋಗುವ ವೇಳೆ ಕತ್ತಲ್ಲಿದ್ದ ತಾಳಿಯನ್ನು ತೆಗೆದು ಕೆಲಸಕ್ಕೆ ಹೋಗುತ್ತಾಳೆ ದಿವ್ಯ. ದಿವ್ಯ ಕೆಲಸ ಮಾಡುತ್ತಿರುವಲ್ಲಿ ಇರುವ ಓನರ್ ಕೂಡ ಅಷ್ಟು ಸರಿ ಇರುವುದಿಲ್ಲ. ಆದರೆ ದಿನೇ ದಿನೇ ದಿವ್ಯ ಹಾಳಾಗುತ್ತ ಇರುವುದನ್ನು ನೋಡಿದ ಬಾಲ ಕೆಂಡಾಮಂಡಲ ಆಗಿದ್ದಾನೆ.

ದಿವ್ಯಾಗೆ ವಾರ್ನಿಂಗ್ ಮಾಡಿದ ಬಾಲ
ನಮ್ಮ ವಠಾರದಲ್ಲಿ ಅತ್ತೆಗೆ ಹಾಗೂ ಅಜ್ಜಿಗೆ ಬಹಳ ಹೆಸರಿದೆ. ಅವರ ಹೆಸರನ್ನು ಹಾಳು ಮಾಡಲು ಹೊರಟರೆ ನಾನು ಸುಮ್ಮನೆ ಇರುವವನಲ್ಲ. ಕುಡಿದು ತುರಾಡಿಕೊಂಡು ಮನೆಗೆ ಬಂದರೆ ನಾನು ಮಾತ್ರ ಸುಮ್ಮನೆ ಇರುವುದು ಇಲ್ಲ ಎಂದು ಜೋರಾಗಿ ಹೇಳುತ್ತಾನೆ . ಇದನ್ನು ಕೇಳಿದ ದಿವ್ಯ ಮಾತ್ರ ಕ್ಯಾರೆ ಇಲ್ಲದೆ ಇರುತ್ತಾಳೆ. ಆಕೆಗೆ ಅದೆಷ್ಟೇ ಬುದ್ದಿ ಮಾತುಗಳನ್ನು ಹೇಳಿದರು ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ಇರುತ್ತಾಳೆ.


Click it and Unblock the Notifications











