Sathya serial: ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದ ಅಗ್ರೀಮೆಂಟ್ ಹುಳ
ಸತ್ಯ ಧಾರಾವಾಹಿಯಲ್ಲಿ ರಾಯರಿಗೆ ತಮ್ಮ ಲಕ್ಷ್ಮಣನ ಬಂಡವಾಳ ಬಯಲಾಗಿದೆ. ಸಮಸ್ಯೆಯನ್ನು ಹೇಗಾದರೂ ಮಾಡಿ ಬಗೆ ಹರಿಸು, ಕೋಟೆ ಮನೆ ಮರ್ಯಾದೆ ಕಾಪಾಡು ಎಂದು ರಾಯರು ಸತ್ಯಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ.
ಸತ್ಯಳೆಗೆ ರಾಯರ ಬಳಿ ಮನದ ಆತಂಕವನ್ನು ಹೇಳಿಕೊಂಡ ಮೇಲೆ ಕೊಂಚ ನಿರಾಳವಾಗಿದೆ. ಹೇಗಾದರೂ ಮಾಡಿ ಸಮಸ್ಯೆ ಅನ್ನು ಬಗೆಹರಿಸಿದರೆ ಆಯ್ತು ಎಂದು ಕೊಂಡಿದ್ದಾಳೆ. ಸದಾ ಲಕ್ಷ್ಮಣನ ಬಗ್ಗೆಯೇ ಯೋಚಿಸುತ್ತಿದ್ದ ಸತ್ಯ ಈಗ ಆರಾಮಾಗಿದ್ದಾಳೆ. ಮನೆಯಲ್ಲಿ ಅತ್ತೆ ಜೊತೆಗೆ ಸತ್ಯ ಹಾಯಾಗಿ ಕಾಲ ಕಳೆಯುತ್ತಿದ್ದಾಳೆ.

ಆರಾಮಾಗಿರುವ ಸತ್ಯಳಿಗೆ ಸಮಸ್ಯೆ ಕೊಡಬೇಕೆಂದೇ ಕೀರ್ತನಾ ಪ್ಲಾನ್ ಮಾಡುತ್ತಿರುತ್ತಾಲೆ. ಅತ್ತೆ ಮತ್ತು ಸೊಸೆ ಚೆನ್ನಾಗಿರುವುದನ್ನು ಕಂಡು ಕೀರ್ತನಾ ಹೊಟ್ಟೆಯಲ್ಲಿ ಬೆಂಕಿ ಕೊತ ಕೊತ ಎಂದು ಕುದಿಯುತ್ತಿದೆ.
ಸತ್ಯ ಖುಷಿಗೆ ಬೆಂಕಿ ಗೀರಿದ ಕೀರ್ತನಾ
ಸತ್ಯಳ ಮುಖದಲ್ಲಿರುವ ನಗುವಿಗೆ ಕೊನೆಗಾಣಿಸಬೇಕು ಎಂದು ಪಣ ತೊಟ್ಟಿರುವ ಕೀರ್ತನಾ ಅತ್ತೆ ಸೊಸೆ ನಡುವೆಯಾದ ಒಪ್ಪಂದ ಪತ್ರವನ್ನು ಹುಡುಕಿ ತೆಗೆದುಕೊಂಡಿದ್ದಾಳೆ. ಅಗ್ರೀಮೆಂಟ್ ಪ್ರಕಾರ ಸತ್ಯಳ ಸಮಯ ಮುಗಿಯುತ್ತಾ ಬಂದಿದೆ. ಸತ್ಯಳ ಬಳಿ ಹೋಗಿ ಕೀರ್ತನಾ ಅಗ್ರೀಮೆಂಟ್ ವಿಚಾರ ನೆನಪಿಸಿದ್ದಾಳೆ. ಆದರೆ, ಸತ್ಯಳಿಗೆ ತಾನು ಈಗಾಗಲೇ ಕಾರ್ತಿಕ್ ಹಾಗೂ ಅತ್ತೆ ಸೀತಮ್ಮನ ಮನಸ್ಸನ್ನು ಗೆದ್ದಿರುವ ಖುಷಿ ಇರುತ್ತದೆ.
ಅಗ್ರಿಮೆಂಟ್ ಹುಳ ಬಿಟ್ಟ ಕೀರ್ತನಾ
ಸತ್ಯ ಖುಷಿ ನೋಡಿ ಸುಮ್ಮನಾದ ಕೀರ್ತನಾ, ಮನೆಯ ಎಲ್ಲಾ ಸದಸ್ಯರೂ ನಿನ್ನನ್ನು ಒಪ್ಪಿಕೊಳ್ಳಬೇಕು. ಕೇವಲ ಕಾರ್ತಿಕ್ ಮತ್ತು ಅಮ್ಮ ಒಪ್ಪಿಕೊಂಡರೆ ಸಾಲದು. ಮನೆಯಲ್ಲಿ ನಾವೂ ಇದ್ದೀವಿ ಎಂದು ಹೇಳುತ್ತಾಳೆ. ಕೀರ್ತನಾ ಬಿಟ್ಟ ಅಗ್ರೀಮೆಂಟ್ ಹುಳ ಸತ್ಯಳನ್ನು ಮತ್ತೆ ಚಿಂತೆಗೆ ಜಾರುವಂತೆ ಮಾಡಿದೆ. ಅದರಲ್ಲೂ ಅಗ್ರೀಮೆಂಟ್‌ಗೆ ಇವತ್ತು ಒಂದೇ ದಿನ ಬಾಕಿ ಎಂದು ಹೇಳಿದ್ದಾಳೆ. ಇದು ಸತ್ಯಳ ಮನಸ್ಸನ್ನು ಇನ್ನಷ್ಟು ಕದಡಿದೆ. ಅತ್ತೆ ಬೇರೆ, ಪಾನಿಪೂರಿ ತಿನ್ನುವ ಆಸೆಯಿಂದ ಹೊರಗೆ ಹೋಗೋಣ ಎಂದಿದ್ದಾರೆ. ಆದರೆ, ಸತ್ಯಳ ಮನಸ್ಸಲ್ಲಿ ಅಗ್ರೀಮೆಂಟ್ ಹುಳ ಬುಳ ಬುಳನೇ ಓಡಾಡುತ್ತಿದೆ.

ಸೊಸೆ ಜೊತೆ ಪಾನಿಪೂರಿ ತಿಂದ ಅತ್ತೆ
ಅತ್ತೆಗೆ ಇಷ್ಟ ಎಂಬ ಕಾರಣಕ್ಕೆ ಸತ್ಯ, ಕಾರ್ತಿಕ್‌ನನ್ನು ಕರೆದುಕೊಂಡು ಹೋಗಿ ಆಚೆ ಬೀದಿ ಬದಿಯಲ್ಲಿ ಪಾನಿಪೂರಿ ಕೊಡಿಸುತ್ತಾಳೆ. ಪಕ್ಕದಲ್ಲೇ ಗಂಡ ಇದ್ದರೂ ಮರೆತು, ಅತ್ತೆಗೆ ಪಾನಿಪೂರಿ ತಿನ್ನುವುದನ್ನು ಕಲಿಸಿಕೊಟ್ಟಿದ್ದಾಳೆ. ಅತ್ತೆಗೆ ಸತ್ಯ ಕೊಡಿಸಿದ ಪಾನಿಪೂರಿ, ಐಸ್ ಕ್ರೀಂ ಎಲ್ಲವೂ ಇಷ್ಟವಾಗಿದೆ. ಇತ್ತ ಕೀರ್ತನಾ, ದಿವ್ಯಾಳಿಗೆ ಫೋನ್ ಮಾಡಿ ಅಗ್ರಿಮೆಂಟ್ ವಿಚಾರವನ್ನು ಹೇಳುತ್ತಾಳೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಸತ್ಯ ನಿಮ್ಮ ಮನೆಗೆ ಬರುತ್ತಾಳೆ, ಅವಳನ್ನು ಹೇಗೆ ಬೇಕೋ ಹಾಗೆ ಸ್ವಾಗತ ಮಾಡಿಕೋ ಎಂದು ಹೇಳುತ್ತಾಳೆ.
ತಂಗಿಯ ಆಗಮನಕ್ಕೆ ಕಾಯುತ್ತಿರುವ ದಿವ್ಯಾ
ಕೀರ್ತನಾ ಮಾತು ಕೇಳಿ ಫುಲ್ ಹ್ಯಾಪಿಯಾದ ದಿವ್ಯಾ, ತಾನೇ ಖುದ್ದು ಪಾಯಸ ಮಾಡಿದ್ದಾಳೆ. ಮನೆಯವರಿಗೆ ಇನ್ನೇನು ನಿಮ್ಮ ಮುದ್ದಿನ ಮಗಳು ಶಾಶ್ವತವಾಗಿ ಇಲ್ಲೇ ಉಳಿದುಕೊಳ್ಳಲು ಬರುತ್ತಾಳೆ. ನನಗಂತೂ ಖುಷಿಯಾಗಿ, ನಿಮಗೆ ಲೈವ್ ಪ್ರೋಗ್ರಾಂ ತೋರಿಸುತ್ತೀನಿ. ಅತ್ತೆ ಜೊತೆಗೆ ಅಗ್ರಿಮೆಂಟ್ ಮಾಡಿಕೊಂಎ ಸತ್ಯ ಆಟ ಅಲ್ಲಿ ಮುಗಿದಿದೆ ಎಂದು ಹೇಳುತ್ತಾಳೆ. ದಿವ್ಯಾ ಮಾತುಗಳನ್ನು ಕೇಳಿದ ಗಿರಿಜಮ್ಮ ಹಾಗೂ ಜಾನಕಿಗೆ ಶಾಕ್ ಆಗಿದೆ.
ಯಾರಿಗೆ ಗೇಟ್‌ಪಾಸ್?
ಹಬ್ಬದಲ್ಲಿ ಅತ್ತೆ-ಸೊಸೆ ಅಷ್ಟು ಖುಷಿಯಾಗಿದ್ದರು. ದಿವ್ಯಾ ಏನು ಹೀಗೆ ಹೇಳುತ್ತಿದ್ದಾಳೆ ಎಂದು ಗಾಬರಿಯಾಗಿದ್ದಾರೆ. ಸೀತಮ್ಮ ಅಗ್ರಿಮೆಂಟ್ ಪ್ರಕಾರ ಸೊಸೆಯನ್ನು ಮನೆಯಿಂದ ಹೊರಗೆ ಕಳಿಸುತ್ತಾಳಾ ಇಲ್ಲ, ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಎಂದು ಕೀರ್ತನಾಳಿಗೆ ಗೇಟ್ ಪಾಸ್ ಕೊಡುತ್ತಾಳಾ? ಅನ್ನೋ ಕೂತೂಹಲ ಶುರುವಾಗಿದೆ.


Click it and Unblock the Notifications











