Sathya serial: ಅತ್ತೆಗೋಸ್ಕರ ತನ್ನ ಕನಸನ್ನೇ ತ್ಯಾಗ ಮಾಡಿದ ಸತ್ಯ
ಸತ್ಯ ಧಾರಾವಾಹಿಯಲ್ಲಿ ಬಾಲನ ಬೋಂಡ ವ್ಯಾಪಾರ ಲಾಭದಲ್ಲಿ ನಡೆಯುತ್ತಿದೆ. ಉಳಿದ ಸಮಯವನ್ನು ವ್ಯರ್ಥ ಮಾಡದೇ ದುಡಿಯುವ ಹಂಬಲವಿರುವ ಬಾಲ ತರಕಾರಿ ವ್ಯಾಪಾರಕ್ಕೆ ಕೈ ಹಾಕಿದ್ದಾನೆ.
ಬಾಲನ ಶ್ರಮಕ್ಕೆ ಮನೆಯವರು, ಸ್ನೇಹಿತರು, ಕಾರ್ತಿಕ್ ಎಲ್ಲರೂ ಕೈ ಜೋಡಿಸಿದ್ದಾರೆ. ಆದರೆ, ದಿವ್ಯಾ ಮಾತ್ರ ಬಾಲನ ಏಳಿಗೆಗೆ ಮುಳ್ಳಾಗಿ ನಿಂತಿದ್ದಾಳೆ.

ಸತ್ಯ ಹಾಗೂ ಹುಡುಗರ ಸಹಾಯದಿಂದ ಬಾಲ ಮಾರುಕಟ್ಟೆಗೆ ಹೋಗಿ ಗುಡ್ಡೆ ತರಕಾರಿ ವ್ಯಾಪಾರ ಮಾಡಲು ಮುಂದಾಗಿದ್ದಾನೆ. ಕಾರ್ತಿಕ್ ಕೂಡ ಬಾಲನಿಗೆ ಕೈ ಜೋಡಿಸಿದ್ದಾನೆ.
ತರಕಾರಿ ವ್ಯಾಪಾರ ಶುರು
ಮಾರ್ಕೆಟ್‌ನಿಂದ ತರಕಾರಿಯನ್ನು ತಂದ ಬಾಲ, ದಿವ್ಯಾಳಿಗೆ ಕಾಫಿ ಕೊಡು ಎಂದು ಕೇಳುತ್ತಾನೆ. ಆದರೆ ದಿವ್ಯಾಳಿಗೆ ಬಾಲ ಬೋಂಡಾ ಅಂಗಡಿಯನ್ನು ಇಟ್ಟಿರುವುದು ಮತ್ತು ತರಕಾರಿ ವ್ಯಾಪಾರವನ್ನು ಶುರು ಮಾಡುತ್ತಿರುವುದು ಸ್ವಲ್ಪವೂ ಇಷ್ಟವಿರುವುದಿಲ್ಲ. ಹೀಗಾಗಿ ಬೈಯುತ್ತಲೇ ಇರುತ್ತಾಳೆ. ಆದರೆ, ಬಾಲನಿಗೆ ದಿವ್ಯಾಳನ್ನು ಬಗ್ಗಿಸುವುದು ಹೇಗೆ ಎಂಬುದು ಬಹಳ ಚೆನ್ನಾಗಿ ಗೊತ್ತಿದೆ. ಅದೂ ಅಲ್ಲದೇ, ಈಗ ದಿವ್ಯಾ ಗೂಂಡಾಗಳನ್ನು ಕರೆಸಿದ್ದನ್ನು ಬಾಲ ಗಾಳವಾಗಿಟ್ಟುಕೊಂಡಿದ್ದಾನೆ. ದಿವ್ಯಾಳನ್ನು ಮಾತಿನಲ್ಲೇ ಹೆದರಿಸುತ್ತಿದ್ದಾನೆ.
ದಿವ್ಯಾಳನ್ನು ಬಗ್ಗಿಸುವ ಬಾಲ
ತಿಂಡಿ ಮನೆಯಲ್ಲಿ ಮಾಡದೇ, ಆನ್ ಲೈನ್‌ನಲ್ಲಿ ಆರ್ಡರ್ ಮಾಡಿಕೊಳ್ಳುತ್ತೇನೆ ಎಂದು ದಿವ್ಯಾ ಹೇಳಿದ್ದಕ್ಕೆ, ಬಾಲ ಬೋಂಡಾ ಅಂಗಡಿಯೇ ಲ್ಯಾಂಡ್ ಮಾರ್ಕ್ ಮಾಡು. ನನ್ನ ಬೋಂಡಾ ಅಂಗಡಿಗೂ ಪಬ್ಲಿಸಿಟಿ ಸಿಗುತ್ತೆ. ಗೂಗಲ್ ಮ್ಯಾಪ್‌ನಲ್ಲಿ ಲ್ಯಾಂಡ್ ಮಾರ್ಕ್ ಅಪ್ ಡೇಟ್ ಮಾಡುತ್ತೇನೆ ಎಂದು ಹೆದರಿಸುತ್ತಾನೆ. ದಿವ್ಯಾ, ಬಾಲನ ಮಾತಿಗೆ ಹೆದರಿ, ತಿಂಡಿ ಮಾಡುತ್ತಾಳೆ. ಬಾಲನ ಬಟ್ಟೆಗಳನ್ನು ಕೂಡ ವಾಶ್ ಮಾಡಿ ಕೊಡುತ್ತಾಳೆ.

ದಿವ್ಯಾಗೆ ಕೆಲಸ ಸಿಕ್ತಾ?
ಬಾಲನಿಗೆ ಸೆಡ್ಡು ಹೊಡೆಯಲು ಮುಂದಾದ ದಿವ್ಯಾ ಬೇಕಂತಲೇ ಕೆಲಸ ಹುಡುಕಲು ಶುರು ಮಾಡುತ್ತಾಳೆ. ಆನ್ ಲೈನ್‌ನಲ್ಲಿ ಕೆಲಸ ಇದೆ ಎಂದು ತಿಳಿದ ದಿವ್ಯಾ ಕಾಲ್ ಮಾಡಿ ಮಾತನಾಡುತ್ತಾಳೆ. ಫೋನ್‌ನಲ್ಲೇ ದಿವ್ಯಾ ಇಂಟರ್‌ವ್ಯೂವ್ ಅಟೆಂಡ್ ಮಾಡುತ್ತಾಳೆ. ಕೆಲಸವೂ ಕನ್ಫರ್ಮ್ ಆಗುತ್ತೆ. ಆದರೆ ನಿಜವಾಗಲೂ ದಿವ್ಯಾಳಿಗೆ ಸಿಕ್ಕ ಕೆಲಸದ ಬಗ್ಗೆ ಬಾಲನಿಗೆ ಅನುಮಾನವಿದೆ.
ಸತ್ಯ ಓದಿಗೆ ಅಡ್ಡಿಯಾದ ಸೀತಾ
ಇತ್ತ ಸತ್ಯ ಮನೆಗೆ ಪದ್ಮಾ ಬಂದು ಸೇರಿದ್ದೇನೋ ಆಯ್ತು. ಮನೆಯವರೂ ಕೂಡ ಪದ್ಮಾ ಯಾರು ಎಂದು ಗೊತ್ತಿಲ್ಲದಿದ್ದರೂ, ಅವಳನ್ನು ಮನೆಯವಳಂತೆಯೇ ಒಪ್ಪಿಕೊಂಡಿದ್ದಾರೆ. ಈಗ ಸತ್ಯ ತನ್ನ ಓದಿನ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾಳೆ. ತಾನು ತನ್ನ ಕನಸಿನಂತೆ ಪೊಲೀಸ್ ಆಗಬೇಕು ಎಂದುಕೊಂಡಿದ್ದಾಳೆ. ಕಾರ್ತಿಕ್ ಕೂಡ ಸತ್ಯಳಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಹೀಗಾಗಿ ಸತ್ಯ ಓದಲು ಎಲ್ಲಾ ರೀತಿಯಲ್ಲೂ ಜೊತೆಗೆ ನಿಂತಿದ್ದಾನೆ. ಆದರೆ ಈ ವಿಚಾರ ಈಗ ಸೀತಾಳಿಗೆ ಗೊತ್ತಾಗಿದೆ. ಸತ್ಯ ಪೊಲೀಸ್ ಆಗುವುದು ಸೀತಾಳಿಗೆ ಕೊಂಚವೂ ಇಷ್ಟವಿಲ್ಲ. ಹೀಗಾಗಿ ಸತ್ಯಳ ಆಸೆಗೆ ಅಡ್ಡಿಯಾಗಿದ್ದಾಳೆ.
ಅತ್ತೆಗಾಗಿ ಕನಸು ಬಿಟ್ಟ ಸತ್ಯ
ಸತ್ಯ ಪೊಲೀಸ್ ಆಗುವುದಾದರೆ, ಅವಳು ತನ್ನ ಮಾತನ್ನೂ ಮೀರಿ ಪರೀಕ್ಷೆ ಬರೆಯುತ್ತಾಳೆ ಎಂದರೆ, ತಾನು ಊಟ ಮಾಡುವುದಿಲ್ಲ ಎಂದು ಸೀತಾ ಹಠ ಮಾಡುತ್ತಿದ್ದಾಳೆ. ಸತ್ಯ ಆ ಪೊಲೀಸ್ ಕೆಲಸಕ್ಕೆ ಪರೀಕ್ಷೆ ಬರೆಯುವುದು ಕೊಂಚವೂ ಇಷ್ಟವಿಲ್ಲ ಎಂದು ಕೋಪ ಮಾಡಿಕೊಂಡಿದ್ದಾಳೆ. ಯಾರು ಎಷ್ಟೇ ಹೇಳಿದರೂ ಕೂಡ ಸೀತಾ ಯಾರ ಮಾತನ್ನು ಕೇಳುತ್ತಿಲ್ಲ. ಅತ್ತೆಗೋಸ್ಕರ ಈಗ ಸತ್ಯ ತನ್ನ ಕನಸನ್ನೇ ತ್ಯಾಗ ಮಾಡಿದ್ದಾಳೆ. ನಿಮಗೆ ಇಷ್ಟವಿಲ್ಲದ ಯಾವ ಕೆಲಸವನ್ನೂ ನಾನು ಮಾಡೋದಿಲ್ಲ ಎಂದು ಸತ್ಯ ಹೇಳಿದ್ದಾಳೆ. ಪೊಲೀಸ್ ಆಗುವ ತನ್ನ ಕನಸಿಗೆ ತಣ್ಣೀರೆರಚಿದ್ದಾಳೆ.


Click it and Unblock the Notifications











