Sathya Serial: ಸೊಸೆಯ ಜೊತೆಗೆ ಬೀಗರ ಮನೆಗೆ ಬಂದ ಸೀತಮ್ಮ
ಸತ್ಯ ಧಾರಾವಾಹಿಯಲ್ಲಿ ಜಾನಕಿ ಫೋನ್ ಮಾಡಿ ಗೌರಿ ಹಬ್ಬಕ್ಕೆ ಮನೆಗೆ ಬಂದು ಬಾಗಿನವನ್ನು ತೆಗೆದುಕೊಂಡು ಹೋಗು ಎಂದು ಹೇಳುತ್ತಾಳೆ. ಆದರೆ, ಸತ್ಯ ಇದಕ್ಕೆ ಒಪ್ಪುವುದಿಲ್ಲ. ತನಗೆ ಮನೆ ಕೆಲಸವಿದೆ. ನಾನು ಬರುವುದಕ್ಕೆ ಆಗೋದಿಲ್ಲ ಎಂದು ಹೇಳಿರುತ್ತಾಳೆ. ಈ ಮಾತನ್ನು ಕೇಳಿದ ಸೀತಾ, ಸತ್ಯಳನ್ನು ಕರೆದು ಯಾಕೆ ಹೋಗೋದಿಲ್ಲ ಎಂದು ಪ್ರಶ್ನೆ ಮಾಡುತ್ತಾಳೆ.
ಸತ್ಯ ಇಲ್ಲೂ ಹಬ್ಬ ಇದೆ. ಇಲ್ಲಿ ಊರ್ಮಿಳಾ ಅತ್ತೆ ಒಬ್ಬರಿಗೆ ಕಷ್ಟವಾಗುತ್ತೆ ಎಂದು ಕುಂಟು ನೆಪ ಹೇಳುತ್ತಾಳೆ. ಆದರೆ, ಸೀತಾ ಬಿಡುವುದಿಲ್ಲ. ತವರು ಮನೆಗೆ ಹೋಗಿ ಬಾಗಿನ ತಗೋಬೇಕು ಎಂದು ಒತ್ತಾಯ ಮಾಡುತ್ತಾಳೆ.
ಅಲ್ಲದೇ, ಸತ್ಯ ಜೊತೆಗೆ ತಾನೂ ಕೂಡ ಅವರ ತವರು ಮನೆಗೆ ಬರುವುದಾಗಿ ಹೇಳುತ್ತಾಳೆ. ಇದು ಸತ್ಯಳಿಗೆ ಖುಷಿ ಕೊಡುತ್ತದೆ. ಆದರೆ, ಲಕ್ಷ್ಮಣ ಮನೆ ಬಿಟ್ಟು ಎರಡನೇ ಹೆಂಡತಿ ಮನೆಗೆ ಹೋಗುತ್ತಾನೆ ಎಂಬ ಚಿಂತೆಯಿಂದ ಸತ್ಯ ಮೊದಲು ತವರು ಮನೆಗೆ ಹೋಗಲು ಒಪ್ಪಿರುವುದಿಲ್ಲ.

ಸತ್ಯಳನ್ನು ಸಿದ್ಧ ಮಾಡಿದ ಸೀತಾ
ಸೀತಮ್ಮ ಕೂಡ ಬರುತ್ತೇನೆ ಎಂದಿದ್ದಕ್ಕೆ, ಬೇರೆ ದಾರಿ ಇಲ್ಲದೇ ಸತ್ಯ ತವರು ಮನೆಗೆ ಹೊರಟಿರುತ್ತಾಳೆ. ಸೀತಾ, ಸತ್ಯಳಿಗೆ ರೇಷ್ಮೆ ಸೀರೆ ಕೊಟ್ಟು ಮೈ ತುಂಬಾ ಒಡವೆ ಹಾಕಿಸಿಕೊಂಡು ಹೊರಡಿಸುತ್ತಾಳೆ. ಇದು ಮನೆಯವರಿಗೆಲ್ಲಾ ಖುಷಿ ಕೊಡುತ್ತದೆ. ಆದರೆ, ಕೀರ್ತನಾಳಿಗೆ ಹೊಟ್ಟೆ ಉರಿ ಆಗುತ್ತದೆ. ಆದರೆ, ಸೀತಾನೇ ಸತ್ಯ ಪರ ಇರುವ ಕಾರಣ ಕೀರ್ತನಾಳಿಗೆ ಬೇರೆ ಯಾವ ದಾರಿಯೂ ಕಾಣುವುದಿಲ್ಲ.
ಸತ್ಯ ಮನೆಗೆ ಬಂದ ಅತ್ತೆ-ಸೊಸೆ
ಸತ್ಯ ಮತ್ತು ಸೀತಾಳನ್ನು ತವರು ಮನೆಗೆ ಕಳಿಸಿಕೊಡಲು ರಾಮಚಂದ್ರ ರಾಯರು ಕಣ್ಣೀರು ಹಾಕಿ, ಸೀತಾ ನಿನ್ನನ್ನು ಬಿಟ್ಟಿರಲು ಆಗುತ್ತಿಲ್ಲ ಎಂದು ನಾಟಕ ಮಾಡಿ ಕಳುಹಿಸಿ ಕೊಡುತ್ತಾರೆ. ಸೀತಾ ಮತ್ತು ಸತ್ಯ ಇಬ್ಬರೂ ಕಾರಿನಲ್ಲಿ ಹೊರಡುತ್ತಾರೆ. ಸತ್ಯ ಮನೆಯ ಬಳಿ ಕಾರು ಇಳಿಯುತ್ತಿದ್ದಂತೆಯೇ, ಮನೆಯ ಅಕ್ಕ-ಪಕ್ಕದವರು ಬಂದು ಮಾತನಾಡಿಸುತ್ತಾರೆ. ಸತ್ಯ ತುಂಬಾ ಒಳ್ಳೆಯವಳು. ಅವಳಿಲ್ಲದೇ, ನಮ್ಮ ಏರಿಯಾಗೆ ಕಳೆಯೇ ಇಲ್ಲ. ಸೀರೆಯಲ್ಲಿ ಮುದ್ದಾಗಿ ಕಾಣುತ್ತಾಳೆ ಎಂದೆಲ್ಲಾ ಹೊಗಳುತ್ತಾರೆ. ಈ ಮಾತುಗಳನ್ನು ಕೇಳಿದ ಸೀತಾಳಿಗೆ ಸೊಸೆಯ ಬಗ್ಗೆ ಇನ್ನಷ್ಟು ಹೆಮ್ಮೆ ಎನಿಸುತ್ತದೆ.

ದಿವ್ಯಾಳನ್ನು ನೋಡಿ ಕೋಪಗೊಂಡ ಸೀತಾ
ದಿವ್ಯಾ, ಜಾನಕಿ ಮನೆಯಲ್ಲಿ ಇರುತ್ತಾಳೆ. ಈ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ದಿವ್ಯಾ ಬಾಗಿಲಲ್ಲಿ ನಿಂತು ಸೀತಾ ಮತ್ತು ಸತ್ಯ ಬರುವುದನ್ನು ನೋಡುತ್ತಾಳೆ. ದಿವ್ಯಾ, ಸೀತಾ ಬಂದು ಏನಾದರೂ ಹೆಚ್ಚು-ಕಡಿಮೆ ಮಾತನಾಡಿದರೆ, ಸುಮ್ಮನೆ ಬಿಡಬಾರದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ. ಸೀತಾ ಕೂಡ ದಿವ್ಯಾಳನ್ನು ನೋಡಿ ಹೀಗೆ ಅಂದುಕೊಳ್ಳುತ್ತಾಳೆ. ಒಟ್ನಲ್ಲಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದು, ಗೌರಿ ಹಬ್ಬದಲ್ಲಿ ಏನು ಜಗಳವಾಗುತ್ತೋ ಗೊತ್ತಿಲ್ಲ.
ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಪದ್ದು
ಇತ್ತ ಲಕ್ಷ್ಮಣ, ಪದ್ದುಗೆ ಫೋನ್ ಮಾಡಬೇಡ ಎಂದರೂ ಆಕೆ ಪದೇ ಪದೇ ಫೋನ್ ಮಾಡುತ್ತಲೇ ಇರುತ್ತಾಳೆ. ಒಮ್ಮೆ ಮಗ ಹಠ ಮಾಡುತ್ತಿದ್ದಾನೆ ಎಂದು ಫೋನ್ ಮಾಡುತ್ತಾಳೆ. ಮತ್ತೊಮ್ಮೆ ಫೋನ್ ಮಾಡಿ ಮಗನ ರಿಪೋರ್ಟ್ ಬಂದಿದೆ. ಮುಂದಿನ ಟ್ರೀಟ್‌ಮೆಂಟ್ ಗೆ 2-3 ಲಕ್ಷ ರೂಪಾಯಿ ಬೇಕು ಎಂದು ಹೇಳುತ್ತಾಳೆ. ಲಕ್ಷ್ಮಣನಿಗೆ ಪದೇ ಪದೇ ಲಕ್ಷ ಲಕ್ಷ ಹಣವನ್ನು ಹೊಂದಿಸುವ ಚಿಂತೆಯಾಗಿದೆ. ಅವನ ಬಳಿ ಹಣಕ್ಕೇನೂ ಕಡಿಮೆ ಇಲ್ಲ. ಆದರೆ, ಪ್ರತಿಯೊಂದಕ್ಕೂ ಮನೆಯಲ್ಲಿ ಹೇಗೆ ಲೆಕ್ಕ ಕೊಡುವುದು ಎಂಬುದೇ ದೊಡ್ಡ ಚಿಂತೆ.


Click it and Unblock the Notifications











