Sathya Serial: ಮನೆಯಲ್ಲಿ ಅಗ್ರೀಮೆಂಟ್ ವಿಚಾರ ಬ್ಲಾಸ್ಟ್ ಮಾಡಿದ ಕೀರ್ತನಾ
ಸತ್ಯ ಧಾರಾವಾಹಿಯಲ್ಲಿ ಅತ್ತೆ-ಸೊಸೆ ಈಗ ಫುಲ್ ಖುಷಿಯಾಗಿದ್ದಾರೆ. ಎಲ್ಲೇ ಹೋದರೂ ಸತ್ಯ ಮತ್ತು ಸೀತಾ ಇಬ್ಬರೂ ಒಟ್ಟಿಗೆ ಹೋಗುತ್ತಾರೆ. ಮದುವೆಯಾದ ಹೊಸತರಲ್ಲಿ ಸತ್ಯಳ ನೆರಳನ್ನು ಕೂಡ ಇಷ್ಟಪಡದ ಸೀತಾ, ಈಗ ಸತ್ಯಳನ್ನು ಅರ್ಥ ಮಾಡಿಕೊಂಡಿದ್ದಾಳೆ. ಹೀಗಾಗಿ ಸತ್ಯಳನ್ನು ಸೀತಾ ಹಚ್ಚಿಕೊಂಡಿದ್ದಾಳೆ.
ಸತ್ಯ ಈ ಮನೆಯಲ್ಲಿ ಇದ್ದಷ್ಟೂ ದಿನವೂ ತನಗೆ ಕುತ್ತು ಎಂದು ತಿಳಿದಿರುವ ಕೀರ್ತನಾ, ಸತ್ಯಳನ್ನು ಮನೆಯಿಂದ ಹೊರಗಟ್ಟಲು ಅಗ್ರೀಮೆಂಟ್ ಅನ್ನೇ ಅಸ್ತ್ರವಾಗಿಸಿಕೊಂಡಿದ್ದಾಳೆ.

ಸತ್ಯ, ಕಾರ್ತಿಕ್ ಮತ್ತು ಸೀತಾ ಪಾನಿಪೂರಿ ತಿನ್ನಲು ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕೀರ್ತನಾ ಬೇಕಂತಲೇ ಮನೆಯವರೆಲ್ಲರನ್ನೂ ಕರೆದಿದ್ದಾಳೆ. ತುಂಬಾ ಮುಖ್ಯವಾದ ವಿಚಾರವನ್ನು ಮಾತನಾಡಬೇಕು ಎಂದು ಹೇಳಿದ್ದಾಳೆ.
ಅಗ್ರಿಮೆಂಟ್ ವಿಚಾರ ಹೇಳಿದ ಕೀರ್ತನಾ
ಕೀರ್ತನಾ ಮಾತು ಕೇಳಿಸಿಕೊಳ್ಳಲು ಕೂಡ ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ಅದೇನು ವಿಷಯ ಎಂದು ಹೇಳು, ನಮಗೆಲ್ಲಾ ಬೇರೆ ಕೆಲಸವಿದೆ ಎಂದು ನೆಗೆಲೆಕ್ಟ್ ಆಗಿ ಮಾತನಾಡುತ್ತಾರೆ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಕೀರ್ತನಾ ಅಗ್ರೀಮೆಂಟ್ ವಿಚಾರವನ್ನು ಹೇಳುತ್ತಾಳೆ. ಸತ್ಯ ಈ ಮನೆಯಲ್ಲಿ ಇರುವಂತಿಲ್ಲ. ಅಮ್ಮ ಅವಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಸತ್ಯಗೆ ಮನೆಯಲ್ಲಿ ಕೊನೆಯ ದಿನ ಎಂದು ಹೇಳುತ್ತಾಳೆ. ಈ ಮಾತು ಕೇಳಿದಾಗ ಎಲ್ಲರಿಗೂ ಶಾಕ್ ಆಗುತ್ತದೆ.
ಕೀರ್ತನಾಳಿಗೆ ಮನೆಯವರಿಂದ ಕ್ಲಾಸ್
ಯಾರೂ ಕೂಡ ಕೀರ್ತನಾ ಮಾತನ್ನು ನಂಬುವುದಿಲ್ಲ. ನಿನಗೆ ಸತ್ಯ ಮೇಲೆ ಹೊಟ್ಟೆ ಉರಿ. ಅದಕ್ಕೆ ಹೀಗೆಲ್ಲಾ ಏನೇನೋ ಮಾತನಾಡುತ್ತಿದ್ದೀಯಾ. ಸೀತಾಳಿಗೆ ಅಗ್ರಿಮೆಂಟ್ ಬಗ್ಗೆ ಎಲ್ಲಾ ಗೊತ್ತೇ ಇಲ್ಲ. ಅವಳ್ಯಾಕೆ ಹಾಗೆಲ್ಲಾ ಮಾಡುತ್ತಾಳೆ. ಸದಾ ಮನೆಯನ್ನು ಒಂದಾಗಿಡಲು ಬಯಸುತ್ತಾರೆ. ಅವರ ಮನಸ್ಸಲ್ಲಿ ಕೊಂಚವೂ ಕೆಟ್ಟ ಬುದ್ಧಿಯಿಲ್ಲ. ಸೀತಾ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ಅದರಲ್ಲೂ ಇತ್ತೀಚೆಗೆ ಸತ್ಯ ಮತ್ತು ಸೀತಾ ಇಬ್ಬರೂ ಬಹಳ ಖುಷಿಯಿಂದ ಇರುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುವುದೇ ಇಲ್ಲ. ಇದೆಲ್ಲಾ ಏನಿದ್ದರೂ ನಿನ್ನದೇ ಕೆಟ್ಟ ಬುದ್ಧಿ. ನಿನಗೆ ಇಂಹದ್ದೆಲ್ಲಾ ತಲೆ ಓಡುವುದು ಎಂದು ಮನೆಯಲ್ಲಿ ಎಲ್ಲರೂ ಕೀರ್ತನಾಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ.

ತಂಗಿಯ ಮೇಲೆ ಅಕ್ಕನಿಗೆ ದ್ವೇಷ
ಇತ್ತ ದಿವ್ಯಾ, ಕೀರ್ತನಾ ಮಾಡುವ ವೀಡಿಯೋ ಕಾಲ್‌ಗಾಗಿ ಕಾಯುತ್ತಿರುತ್ತಾಳೆ. ಇನ್ನು ಸ್ವಲ್ಪ ಹೊತ್ತಲ್ಲೇ ಸತ್ಯಳನ್ನು ಆ ಮನೆಯಿಂದ ಹೊರಗೆ ಕಳಿಸುತ್ತಾರೆ. ಆಗ, ಅವಳೂ ನನ್ನಂತೆಯೇ ಈ ಮನೆಗೆ ಬರಬೇಕು ಎಂದು ಹೇಳುತ್ತಾಳೆ. ದಿವ್ಯಾ ಮಾತುಗಳನ್ನು ಕೇಳಿ ಜಾನಕಿ ಹಾಗೂ ಗಿರಿಜಾ ಕೂಡ ಸ್ವಂತ ತಂಗಿ ಬದುಕಿಗೆ ಕೆಡಕು ಬಯಸುತ್ತೀಯಲ್ಲ ಎಂದು ಬೈಯುತ್ತಾರೆ. ಆದರೆ, ಇದಕ್ಕೆಲ್ಲಾ ದಿವ್ಯಾ ಕೇರ್ ಮಾಡುವುದಿಲ್ಲ. ಕೀರ್ತನಾಳಿಂದ ವೀಡಿಯೋ ಕಾಲ್ ಬಂದ ಕೂಡಲೇ, ದಿವ್ಯಾ ಮನೆಯವರಿಗೆ ತೋರಿಸುತ್ತಾಳೆ.
ಅಗ್ರೀಮೆಂಟ್ ನೋಡಿ ರಾಯರು ಶಾಕ್
ಕೀರ್ತನಾ ಮನೆಯವರಿಗೆ ಸೀತಾ ಬರೆಸಿರುವ ಅಗ್ರಿಮೆಂಟ್ ಅನ್ನು ತೋರಿಸುತ್ತಾಳೆ. ಇದನ್ನು ಓದಿದ ಲಕ್ಷ್ಮಣ ಮತ್ತು ರಾಯರು ಗಾಬರಿಯಾಗುತ್ತಾರೆ. ನಮ್ಮ ಸೀತಾ ಇಷ್ಟೆಲ್ಲಾ ಮಾಡಿದ್ದಾಳಾ? ಎಂದು ಬೇಸರ ಮಾಡಿಕೊಳ್ಳುತ್ತಾರೆ. ರಿತು ಮತ್ತು ಊರ್ಮಿಳಾ ಕೂಡ ಸೀತಾ ಮೇಲೆ ಬೇಸರ ಮಾಡಿಕೊಳ್ಳುತ್ತಾರೆ. ಇಷ್ಟು ದಿನ ಸತ್ಯ ಜೊತೆಗೆ ನಗುನಗುತಾ ಇರುವುದೆಲ್ಲಾ ನಾಟಕವೇ ಎಂದು ಊಹಿಸಿಕೊಳ್ಳುತ್ತಾರೆ.
ಮನೆಗೆ ಬಂದ ಸೀತಾಳಿಗೆ ರಾಯರ ಕ್ಲಾಸ್
ಸೀತಾ ಮನೆಗೆ ಬಂದ ಕೂಡಲೇ ರಾಯರು ಸೀತಾಳಿಗೆ ಬೈಯುತ್ತಾರೆ. ಆದರೆ, ಯಾಕೆ ಬೈಯುತ್ತಿದ್ದಾರೆ ಎಂಬುದು ಇನ್ನೂ ಸೀತಾಳಿಗೆ ಅರ್ಥವಾಗಿಲ್ಲ. ಸೀತಾ ಅಗ್ರಿಮೆಂಟ್ ಅನ್ನು ಏನು ಮಾಡುತ್ತಾಳೆ ಎಂಬ ಕುತೂಹಲವಿದೆ.


Click it and Unblock the Notifications











