Sathya: ಸತ್ಯಳಿಗಾಗಿ ಮಿಡಿದ ಕಾರ್ತಿಕ್: ಅನುಮಾನ ಮೂಡಿಸಿದ ಲಕ್ಷ್ಮಣನ ನಡೆ
ಸತ್ಯ ಧಾರಾವಾಹಿಯಲ್ಲಿ ಎಲ್ಲರದ್ದು ಒಂದು ದಾರಿಯಾದರೆ, ಕೀರ್ತನಾ ಮತ್ತು ದಿವ್ಯಾಳದ್ದೇ ಬೇರೆ ದಾರಿಯಾಗಿದೆ. ಯಾರ ಮಾತನ್ನೂ ಕೂಡ ಕೇಳುವುದಿಲ್ಲ.
ದಿವ್ಯಾ, ಬಾಲನ ಮೇಲಿನ ಹಠಕ್ಕೆ ಬಿದ್ದು ಕೆಲಸಕ್ಕೆ ಹೋಗಲು ಮುಂದಾಗಿದ್ದಾಳೆ. ಯಾವ ಕಂಪನಿ, ಎಲ್ಲಿ ಕೆಲಸ ಎನ್ನುವುದನ್ನು ಮಾತ್ರ ಯಾರಿಗೂ ಹೇಳುತ್ತಿಲ್ಲ.
ತನಗೆ ಕೆಲಸ ಸಿಕ್ಕಿದ್ದು, ಬಾಲನಿಗಿಂತಲೂ ಹೆಚ್ಚು ಸಂಪಾದಿಸುವುದಾಗಿ ಜಂಭ ಮಾತ್ರ ಕೊಚ್ಚಿಕೊಳ್ಳುತ್ತಿದ್ದಾಳೆ. ದಿವ್ಯಾಳ ನಡೆ ಜಾನಕಿ ಮತ್ತು ಗಿರಿಜಾಳಿಗೆ ಮತ್ತಷ್ಟು ಆತಂಕ ತಂದಿದೆ.

ಕೆಲಸಕ್ಕೆ ಹೊರಟ ದಿವ್ಯಾ
ದಿವ್ಯಾ ಪ್ರತೀ ಸಲವೂ ಏನಾದರೂ ಮಾಡಲು ಹೊರಟರೆ, ಮನೆಯಲ್ಲಿ ತಲೆನೋವನ್ನು ತರುತ್ತಾಳೆ. ಹೀಗಾಗಿ ಜಾನಕಿ ಮತ್ತು ಗಿರಿಜಾ ಇಬ್ಬರೂ ದಿವ್ಯಳ ಈ ಹೊಸ ಕೆಲಸದ ಸುದ್ದಿ ಕೇಳಿ ಗಾಬರಿಯಾಗಿದ್ದಾರೆ. ಬಾಲ ಇಬ್ಬರಿಗೂ ಸಮಾಧಾನ ಹೇಳಿದ್ದಾನೆ. ನಾನಿದ್ದೀನಿ ನೀವು ಯೋಚಿಸಬೇಡಿ ಎನ್ನುತ್ತಾನೆ. ಆದರೆ, ದಿವ್ಯಾ ಕೆಲಸಕ್ಕೆ ಹೋಗಲೂ ಪಾರ್ಟಿಗೆ ಹೋಗುವಂತೆ ರೆಡಿಯಾಗಿದ್ದು, ಅವಳಿಗಾಗಿ ಕಾಸ್ಟ್ಲಿ ಕಾರ್ ಕೂಡ ಬಂದಿದೆ.
ಬಾಲನಿಗೆ ಅನುಮಾನ
ಯಾರೋ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರಿಗೆ ಪಿಎ ಆಗಿದ್ದೀನಿ. ನನ್ನ ಸ್ಟೇಟಸ್ ಇನ್ಮುಂದೆ ಬೇರೆನೇ ಎಂದು ಜಂಭ ಕೊಚ್ಚಿಕೊಂಡಿದ್ದಾಳೆ. ಆದರೆ, ಇದು ಬಾಲನಿಗೆ ದಿವ್ಯಾ ಹೋಗುತ್ತಿರುವ ದಾರಿ ಸರಿಯಿಲ್ಲ ಎಂಬ ಅನುಮಾನ ಮೂಡಿಸಿದೆ. ಆದರೆ, ದಿವ್ಯಾ ಮಾತ್ರ ಬಹಳ ಹುಮ್ಮಸ್ಸಿನಲ್ಲಿ ಕೆಲಸಕ್ಕೆ ಹೊರಟಿದ್ದಾಳೆ. ಮುಂದೇನಾಗುತ್ತದೋ ಕಾದು ನೋಡಬೇಕಿದೆ.
ಬೇಸರದಲ್ಲಿರುವ ಸತ್ಯ
ಇತ್ತ ಸತ್ಯ ಕಥೆ ತನ್ನ ಸಂಕಟವನ್ನೂ ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ. ತನ್ನ ತ್ಯಾಗವೂ ತನ್ನನ್ನೇ ಸುಡುವಂತೆ ಮಾಡಿದೆ. ಚಿಕ್ಕ ವಯಸ್ಸಿನಿಂದಲೂ ತಂದೆಯ ಆಸೆಯಂತೆ ಪೊಲೀಸ್ ಆಗಬೇಕು ಎಂದುಕೊಂಡಿದ್ದವಳು. ಮನೆಯ ಬಡತನ ಅವಳ ಕನಸ್ಸನ್ನು ಮರೆಸುವಂತೆ ಮಾಡಿತ್ತು. ಆದರೆ, ಮದುವೆಯಾದ ಬಳಿಕ ಕನಸಿಗೆ ನೀರೆರೆದ ಸತ್ಯ ಆಸೆ ಈಗ ಮತ್ತೆ ಮುದುಡಿಕೊಂಡಿದೆ. ಅತ್ತೆ ಸೀತಾಳಿಗೋಸ್ಕರ ಪೊಲೀಸ್ ಆಗುವ ಕನಸನ್ನು ತ್ಯಾಗ ಮಾಡಿದ್ದಾಳೆ. ಆದರೆ, ತನ್ನ ಕನಸನ್ನು ಬಿಟ್ಟುಕೊಟ್ಟಿದ್ದಕ್ಕೆ ಹಗಲು ಇರುಳು ಎನ್ನದೇ ಕೊರಗುತ್ತಿದ್ದಾಳೆ.

ಅನುಮಾನ ಮೂಡಿಸಿದ ಲಕ್ಷ್ಮಣನ ನಡೆ
ಇನ್ನು ಲಕ್ಷ್ಮಣನಿಗೆ ಪದ್ಮಾ ಮನೆಗೆ ಬಂದಾಗಿನಿಂದಲೂ ಉಸಿರು ಕಟ್ಟುವಂತಹ ಸ್ಥಿತಿಯಲ್ಲಿದ್ದಾನೆ. ಪದ್ಮಾ ಈ ಮನೆಗೆ ಹೇಗೆ ಬಂದಳು? ಅವಳಿಗೆ ಈ ಮನೆಗೆ ಬರಲು ಹೇಳಿಕೊಟ್ಟವರು ಯಾರು? ಪದ್ಮಾ ಇದೇ ಮನೆಯಲ್ಲಿದ್ದರೆ, ತನಗೆ ಕಷ್ಟ ಎಂದು ಒದ್ದಾಡುತ್ತಿದ್ದಾನೆ. ಹೀಗಾಗಿ ಪದ್ಮಾ ಒಬ್ಬಳೇ ಸಿಕ್ಕಾಗಲೆಲ್ಲಾ ಅವಳನ್ನು ಪ್ರಶ್ನೆ ಮಾಡುತ್ತಲೇ ಇದ್ದಾನೆ. ಆದರೆ, ಪದ್ಮಾ ಮಾತ್ರ ತಾನು ಇಲ್ಲಿಗೆ ಬರಲು ಯಾರು ಕಾರಣ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಅಷ್ಟೇ ಅಲ್ಲದೇ, ತಾನಿನ್ನು ಈ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾಳೆ. ಇವರಿಬ್ಬರೂ ಮಾತನಾಡುವುದನ್ನು ಕೀರ್ತನಾ ಕೂಡ ಗಮನಿಸಿದ್ದಾಳೆ. ಅಲ್ಲದೇ, ಊರ್ಮಿಳಾ ನೋಡಿ, ಅನುಮಾನದಿಂದ ಪ್ರಶ್ನೆ ಮಾಡಿದ್ದಾಳೆ. ಆಗ ಲಕ್ಷ್ಮಣ ನಚ್ಚಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೇನೆ ಎಂದು ಹೇಳಿ ಸಂಬಾಳಿಸುತ್ತಾನೆ.
ಸತ್ಯಳನ್ನು ಹೊರಗೆ ಕರೆ ತಂದ ಕಾರ್ತಿಕ್
ಸತ್ಯ ಒದ್ದಾಡುತ್ತಿರುವುದನ್ನು ನೋಡಲಾಗದೇ ಕಾರ್ತಿಕ್ ಸಮಾಧಾನ ಮಾಡಲು ಯತ್ನಿಸುತ್ತಾನೆ. ಆದರೆ, ಸತ್ಯಳಿಗೆ ತನ್ನ ಸಂಕಟವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತನಗೆ ಮಾತ್ರವೇ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ನೊಂದುಕೊಳ್ಳುತ್ತಾಳೆ. ಕಾರ್ತಿಕ್ ಸತ್ಯಳ ಮನಸ್ಸನ್ನು ಡೈವರ್ಟ್ ಮಾಡುವ ಸಲುವಾಗಿ ಬೈಕ್‌ನಲ್ಲಿ ಹೊರಗಡೆ ಕರೆದುಕೊಂಡು ಹೋಗುತ್ತಾನೆ. ಅವಳನ್ನು ನಗಿಸಲು ಯತ್ನಿಸುತ್ತಾನೆ. ರಸ್ತೆ ಬದಿಯಲ್ಲಿ ಪಾನಿಪುರಿ, ಮಸಾಲಪುರಿ ಕೊಡಿಸುತ್ತಾನೆ. ಹೆಂಡತಿಯನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾನೆ.


Click it and Unblock the Notifications











