Sathya Serial: ಅಗ್ರೀಮೆಂಟ್ ಪೇಪರ್ ಹರಿದು ಬಿಸಾಡಿದ ಸೀತಾ, ಕೀರ್ತನಾಳಿಗೆ ಹೇಳಿದ್ದೇನು..?
ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಬೇಕಂತಲೇ ಮನೆಯಲ್ಲಿ ಎಲ್ಲರಿಗೂ ಸೀತಾ ಮಾಡಿಸಿದ ಅಗ್ರೀಮೆಂಟ್ ವಿಚಾರವನ್ನು ಹೇಳಿದ್ದಾಳೆ. ಈ ವಿಚಾರ ಕೇಳಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.
ಸೀತಾ ಇಂತಹ ಕೆಲಸ ಮಾಡುತ್ತಾಳೆ ಎಂದು ಯಾರೂ ಊಹಿಸಿರುವುದಿಲ್ಲ. ಮನೆಯ ಸೊಸೆಗೆ ಅಗ್ರಿಮೆಂಟ್ ಮಾಡಿಸಿರುವುದು ಮಹಾಪರಾಧ ಎಂಬಂತೆ ನಡೆದುಕೊಂಡಿದ್ದಾರೆ.

ಸೀತಾ, ಸತ್ಯ ಹಾಗೂ ಕಾರ್ತಿಕ್ ಹೊರಗಡೆಯಿಂದ ಬರುತ್ತಿದ್ದಂತೆಯೇ ಪ್ರಶ್ನೆ ಮಾಡುತ್ತಾರೆ. ಮನೆಯೊಳಗೆ ಬರದಂತೆ ರಾಯರು ಸೀತಾಳನ್ನು ತಡೆಯುತ್ತಾನೆ.
ಸೀತಾಳಿಗೆ ಬೈದ ಮನೆಯವರು
ಮನೆಯವರೆಲ್ಲಾ ಸೀತಾ ನೀನು ಇಷ್ಟು ಕೆಟ್ಟವಳು ಎಂದು ಭಾವಿಸಿರಲಿಲ್ಲ. ಮಾತು ಜೋರಿದ್ದರೂ, ಸಂಪ್ರದಾಯ, ಮನೆ ಆಚಾರ-ವಿಚಾರಗಳಲ್ಲಿ ಬಹಳ ಕಟ್ಟುನಿಟ್ಟಾಗಿದ್ದವಳು ಎಂದು ಭಾವಿಸಿದ್ದೆ. ಆದರೆ, ಒಂದು ಹೆಣ್ಣಿಗೆ ಅನ್ಯಾಯವಾಗುವಂತೆ ನಡೆದುಕೊಳ್ಳುತ್ತೀಯಾ ಎಂದು ಯಾವತ್ತೂ ತಿಳಿದುಕೊಂಡಿರಲಿಲ್ಲ. ನಿನ್ನ ಮನಸಲ್ಲಿ ಇಷ್ಟು ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ಅದು ಹೇಗೆ ನೀನು ಸತ್ಯ ಜೊತೆಗೆ ಅಷ್ಟು ನಗು ನಗುತಾ ಓಡಾಡಿಕೊಂಡಿದ್ದೀಯಾ. ನೀನು ನಾಟಕ ಮಾಡುತ್ತಿದ್ದೀಯಾ. ಕೋಟೆ ಮನೆ ಗೌರವ ಕಾಪಾಡಬೇಕಾದವಳು ಎಂದೆಲ್ಲಾ ಬೈಯುತ್ತಾರೆ. ಆದರೆ, ಯಾಕೆ ಬೈಯುತ್ತಿದ್ದಾರೆ, ಸೀತಾಳಿಂದ ಆಗಿರುವ ತಪ್ಪು ಏನು ಎಂಬುದನ್ನು ಮಾತ್ರ ಹೇಳುವುದಿಲ್ಲ. ಇದು ಸೀತಾಳನ್ನು ಗಾಬರಿಯಾಗುವಂತೆ ಮಾಡುತ್ತದೆ.
ಅತ್ತೆ ಪರ ಮಾತನಾಡಿದ ಸತ್ಯ
ಆಗ ಸತ್ಯ ಅಗ್ರಿಮೆಂಟ್ ವಿಚಾರ ಎಲ್ಲರಿಗೂ ತಿಳಿದಿರಬೇಕು. ಅದಕ್ಕೆ ಎಲ್ಲರೂ ಅತ್ತೆಗೆ ಹೀಗೆಲ್ಲಾ ಬೈಯುತ್ತಿದ್ದಾರೆ. ಪಾಪ ಅತ್ತೆ ಎಂದು ಮನದಲ್ಲಿ ಆಲೋಚಿಸುತ್ತಾ, ಅತ್ತೆಯನ್ನು ರೂಮಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾಳೆ. ರಾಯರು, ಸತ್ಯಳಿಗೆ ಬೈಯುತ್ತಾರೆ. ನಿಮ್ಮ ಅತ್ತೆ ನಿನಗೆ ಇಷ್ಟೆಲ್ಲಾ ಅವಮಾನ ಮಾಡಿದರೂ ಅವಳನ್ನು ವಹಿಸಿಕೊಳ್ಳುತ್ತಿದ್ದೀಯಲ್ಲ ಸತ್ಯ. ನನ್ನ ಜೊತೆಗೆ ಇಷ್ಟು ಚೆನ್ನಾಗಿದ್ದೀಯಾ ನನಗೂ ಕೂಡ ನಿನಗಾಗಿರುವ ಅನ್ಯಾಯದ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ ಎಂದು ನೊಂದುಕೊಂಡು ಮಾತನಾಡುತ್ತಾರೆ.
ಅಗ್ರಿಮೆಂಟ್ ವಿಚಾರ ತಿಳಿಸಿದ ಕೀರ್ತನಾ
ಆಗ ಕೀರ್ತನಾ ಅಗ್ರಿಮೆಂಟ್ ಅನ್ನು ತೋರಿಸುತ್ತಾಳೆ. ನಿನ್ನಿಂದಲೇ ಸತ್ಯ ನನ್ನ ಅಮ್ಮ ಬೈಯಿಸಿಕೊಳ್ಳುವಂತಾಗಿದೆ. ಈ ಅಗ್ರಿಮೆಂಟ್‌ನಲ್ಲಿ ತಿಳಿಸಿರುವಂತೆ ನಿನಗೆ ನನ್ನ ಅಮ್ಮ ಕೊಟ್ಟ ಕಾಲಾವಕಾಶ ಮುಗಿದಿದೆ. ನೀನು ಇನ್ಮುಂದೆ ಈ ಮನೆಯಲ್ಲಿ ಇರುವಂತಿಲ್ಲ ಎಂದು ಹೇಳುತ್ತಾಳೆ. ಆಗ ಸೀತಾ ಅಗ್ರಿಮೆಂಟ್ ವಿಚಾರಕ್ಕಾ ನೀವೆಲ್ಲಾ ಹೀಗೆ ಮಾತನಾಡುತ್ತಿದ್ದೀರಾ? ನಾನು ಗಾಬರಿಯಾದೆ. ಅದೊಂದು ಹಾಳೆಯಷ್ಟೇ ಎಂದು ಹೇಳುತ್ತಾಳೆ. ಯಾಕೆಂದರೆ, ಸೀತಾಳಿಗೆ ಆ ಅಗ್ರಿಮೆಂಟ್‌ನ ಅವಶ್ಯಕತೆಯೇ ಈಗ ಇಲ್ಲ.

ಅಗ್ರಿಮೆಂಟ್ ಹರಿದು ಬಿಸಾಡಿದ ಸೀತಾ
ಸೀತಾ ಆ ಅಗ್ರಿಮೆಂಟ್ ಅನ್ನು ತೆಗೆದುಕೊಂಡು ಹರಿದು ಬಿಸಾಡುತ್ತಾಳೆ. ಆಗ ಕೀರ್ತನಾ ಅಮ್ಮ ನೀನು ಮಾಡಿದ್ದು ತಪ್ಪು. ಅಗ್ರಿಮೆಂಟ್ ಪ್ರಕಾರ ಸತ್ಯಗೆ ಇನ್ಮುಂದೆ ಈ ಮನೆಯಲ್ಲಿ ಇರುವ ಹಕ್ಕಿಲ್ಲ ಎನ್ನುತ್ತಾಳೆ. ಆಗ ಸೀತಾಳಿಗೆ ಮಗಳ ಮೇಲೆ ಕೋಪ ಬರುತ್ತದೆ. ಇದೆಲ್ಲಾ ನಿನ್ನ ಕೆಲಸನಾ ಕೀರ್ತನಾ. ಸುಮ್ಮನೆ ಇರುವುದು ಬಿಟ್ಟು ಯಾಕೆ ಮನೆಯಲ್ಲಿ ಅವಾಂತರ ಮಾಡುತ್ತೀಯಾ. ಅಷ್ಟು ತೊಂದರೆಯಾಗಿದ್ದರೆ, ನೀನು ಮನೆ ಬಿಟ್ಟು ಹೋಗು ಎಂದು ಹೇಳುತ್ತಾಳೆ. ಅದು ನನ್ನ ಸೊಸೆಯನ್ನು ಈ ಮನೆಗೆ ತಕ್ಕನಾಗಿ ಬದಲಾಯಿಸಿಕೊಳ್ಳಲು ಮಾಡಿಕೊಂಡಿದ್ದು. ಈಗ ಅದು ಕೇವಲ ಹಾಳೆಗಳಷ್ಟೇ ಎಂದು ಜೋರು ಮಾಡುತ್ತಾಳೆ. ಅಮ್ಮನ ಮಾತು ಕೇಳಿದ ಕೀರ್ತನಾಳಿಗೆ ಗಾಬರಿಯಾಗುತ್ತದೆ. ಈಗ ಕೀರ್ತನಾ ಮನೆ ಬಿಟ್ಟು ಹೋಗುತ್ತಾಳಾ? ಎಂಬ ಕುತೂಹಲ ಮೂಡಿದೆ.


Click it and Unblock the Notifications











