Sathya Serial: ಬಹಳ ದಿನಗಳ ಬಳಿಕ ದಿವ್ಯಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸತ್ಯ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕುಂತರೂ ನಿಂತರೂ ಸತ್ಯ, ಲಕ್ಷ್ಮಣನ ಎರಡನೇ ಸಂಬಂಧದ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಅಕಸ್ಮಾತ್ ಆಗಿ ಕಾರ್ತಿಕ್‌ನನ್ನು ಮದುವೆಯಾದ ಸತ್ಯ, ಈಗ ಮನೆಯ ಮುದ್ದಿನ ಸೊಸೆಯಾಗಿದ್ದಾಳೆ.

ಕಷ್ಟಪಟ್ಟು ಅತ್ತೆಯ ಬಳಿ ಒಳ್ಳೆಯ ಹೆಸರನ್ನು ಪಡೆದಿದ್ದಾಳೆ. ಕೋಟೆ ಮನೆಯ ಸಂಪ್ರದಾಯವನ್ನು ತಿಳಿದುಕೊಂಡು ಅತ್ತೆ ನಡೆದ ದಾರಿಯನ್ನೇ ಆಧರಿಸಿದ್ದಾಳೆ. ಕುಟುಂಬಕ್ಕಾಗಿ ಹಿಂದೆ-ಮುಂದೆ ಯೋಚಿಸದೆ ತನ್ನ ಪ್ರಾಣವನ್ನು ಬೇಕಿದ್ದರೂ ಕೊಡುವ ಸತ್ಯ, ಒಳ್ಳೆಯದಾಗುತ್ತೆ ಎಂದರೆ ಏನು ಬೇಕಿದ್ದರೂ ಮಾಡಲು ಸದಾ ಸಿದ್ಧಳಾಗಿರುತ್ತಾಳೆ.

Sathya Kannada Serial 28th September episode written update

ಸತ್ಯ ಗೆದ್ದು ತಂದ ಟ್ರೋಫಿಗಳು ಹಾಗೂ ಪದಕಗಳನ್ನು ಸೀತಾ ನೋಡುತ್ತಿರುತ್ತಾಳೆ. ಜಾನಕಿ ಅದನ್ನೆಲ್ಲಾ ಸತ್ಯ ಆಡಿ ಗೆದ್ದದ್ದು ಮತ್ತು ಇಡೀ ಮನೆಗೆ ಗಂಡು ಮಗನಾಗಿ ನಿಂತು ನೋಡಿಕೊಂಡಿದ್ದು, ಜೀವನ ಪೂರ್ತಿ ತನಗೆ ಎಂದು ಏನನ್ನೂ ಮಾಡಕೊಳ್ಳದೇ ಎಲ್ಲಾ ಈ ಮನೆಗಾಗಿ ದುಡಿದಳು ಎಂದು ಜಾನಕಿ ಬೇಸರದಲ್ಲಿ ಸತ್ಯ ಪಟ್ಟ ಹಾಗೂ ಅವಳ ಬಾಲ್ಯದ ದಿನಗಳ ಬಗ್ಗೆ ಸೀತಾ ಬಳಿ ಹೇಳಿಕೊಳ್ಳುತ್ತಾಳೆ.

ಸತ್ಯ ಬಾಲ್ಯವನ್ನು ಅರಿತ ಸೀತಾ

ಸತ್ಯಳ ಬಗ್ಗೆ ತಿಳಿದು ಸೀತಾಳಿಗೂ ಕಣ್ಣುಗಳು ಒದ್ದೆಯಾಗುತ್ತವೆ. ಪಾಪ ಸತ್ಯ ಮೊದಲಿನಿಂದಲೂ ಕಷ್ಟಪಟ್ಟು ಬೆಳೆದವಳು, ನಾನೇ ಅವಳನ್ನು ತಪ್ಪಾಗಿ ಅರ್ಥ ಮಾಡಿಕೊಂಡೆ ಎಂದು ಸೀತಾ ಮನದಲ್ಲೇ ನೊಂದುಕೊಳ್ಳುತ್ತಾಳೆ. ಇನ್ನು ಜಾನಕಿ ಹಾಗೂ ಗಿರಿಜಾ ಹಬ್ಬಕ್ಕೆ ಸತ್ಯಳಿಗೆ ಬಾಗಿನ ಕೊಡಬೇಕೆಂದು ಒಂದು ಸೀರೆಯನ್ನು ತರಿಸಿರುತ್ತಾರೆ. ಆದರೆ, ಸೀತಾ ಕೂಡ ಬಂದಿದ್ದಕ್ಕೆ ಈಗ ಅವರಿಗೂ ಸೀರೆಯನ್ನು ತರಬೇಕು ಎಂದು ಅಂದುಕೊಳ್ಳುತ್ತಾರೆ.

Sathya Kannada Serial 28th September episode written update

ಜಾನಕಿ ಮನೆ ಕಷ್ಟಕ್ಕೆ ಮರುಗಿದ ಸೀತಾ

ಗಿರಿಜಾ-ಜಾನಕಿ ಬಳಿ ಹಣ ಇರುವುದಿಲ್ಲ. ಈ ಬಗ್ಗೆ ಇಬ್ಬರೂ ಮಾತನಾಡಿಕೊಳ್ಳುತ್ತಿರುತ್ತಾರೆ. ಆಗ ಜಾನಕಿ ಚೀಟಿ ದುಡ್ಡಲ್ಲಿ ಸೀರೆ ತರೋಣ. ಮುಂದಿನ ತಿಂಗಳು ಚೀಟಿ ಕಟ್ಟಿದರೆ ಆಯ್ತು ಎಂದು ಅಂದುಕೊಳ್ಳುತ್ತಾರೆ. ಇದಕ್ಕೆ ಗಿರಿಜಾ ಕೂಡ ಒಪ್ಪಿಕೊಳ್ಳುತ್ತಾಳೆ. ಈ ಮಾತುಗಳನ್ನು ಕೇಳಿಸಿಕೊಳ್ಳುವ ಸೀತಾ, ಮನೆಯಲ್ಲಿ ಕಷ್ಟವಿದ್ದರೂ, ಮನಸ್ಸು ಎಷ್ಟು ಒಳ್ಳೆಯದು ಎಂದು ಅರ್ಥ ಮಾಡಿಕೊಳ್ಳುತ್ತಾಳೆ.

ಕಾರ್ತಿಕ್‌ಗೆ ಕಗ್ಗಂಟಾದ ಸತ್ಯ

ಇನ್ನು ಸತ್ಯ ಸದಾ ಮನೆಯ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಆದರೆ, ಗಂಡ ಕಾರ್ತಿಕ್ ಬಗ್ಗೆ ಕೊಂಚವೂ ಯೋಚನೆಯೇ ಇರುವುದಿಲ್ಲ. ಈಗ ಬೇರೆ ತವರು ಮನೆಗೆ ಅತ್ತೆ ಜೊತೆಗೆ ಬಂದಿದ್ದು, ಒಂದು ಫೋನ್ ಕೂಡ ಮಾಡಿರುವುದಿಲ್ಲ. ಇದು ಕಾರ್ತಿಕ್‌ಗೆ ಬೇಸರವನ್ನು ತಂದಿರುತ್ತದೆ. ಹಾಗಾಗಿ ಹೆಂಡತಿಯನ್ನು ವಿಚಾರಿಸಿಕೊಳ್ಳಲೆಂದು ಫೋನ್ ಮಾಡುತ್ತಾನೆ. ಆದರೆ, ಇದೇ ಸಂದರ್ಭದಲ್ಲಿ ಹುಡುಗರು ಬಂದು ಬೇಕೆಂದು ಸ್ಪೀಕರ್ ಹಾಕುತ್ತಾರೆ. ಸತ್ಯಳಿಗೆ ಕಾರ್ತಿಕ್ ಮಾತುಗಳು ಮುಜುಗರ ಉಂಟು ಮಾಡುತ್ತದೆ. ಈಗಲೂ ಕೂಡ ಇಬ್ಬರೂ ಸರಿಯಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಕಾರ್ತಿಕ್‌ಗೆ ಸತ್ಯ ತಿಳಿಯದೇ ಬೇಸರದಲ್ಲೇ ಫೋನ್ ಕಟ್ ಮಾಡುತ್ತಾನೆ.

ದಿವ್ಯಾಳನ್ನು ತರಾಟೆಗೆ ತೆಗೆದುಕೊಂಡ ಸತ್ಯ

ಇನ್ನು ಸತ್ಯ ಬೇಕಂತಲೇ ದಿವ್ಯಾ ರೂಮಿಗೆ ಹೋಗುತ್ತಾಳೆ. ಅಲ್ಲಿ ದಿವ್ಯಾಳನ್ನು ಮಾತನಾಡಿಸುತ್ತಾಳೆ. ನೀನು ನಮ್ಮ ಅತ್ತೆಯನ್ನು ದೇವಸ್ಥಾನದಲ್ಲಿ ಭೇಟಿಯಾದ..? ಅವರ ಬಳಿ ಏನು ಮಾತನಾಡಿದೆ..? ಎಂದು ಪ್ರಶ್ನೆಗಳನ್ನು ಕೇಳುತ್ತಾಳೆ. ದಿವ್ಯಾ ಸತ್ಯ ಹೇಳದೇ ಸುತ್ತಿ ಬಳಸಿ ಮಾತನಾಡುತ್ತಾಳೆ. ನನ್ನಿಂದ ನಿನಗೆ ಅಷ್ಟು ದೊಡ್ಡ ಮನೆ ಸೊಸೆಯಾಗು ಅವಕಾಶ ಸಿಕ್ಕಿದೆ. ನಿನ್ನ ಅತ್ತೆ ಮುದುಕಿ ಎಂದೆಲ್ಲಾ ಹೇಳುತ್ತಾಳೆ. ಆಗ ಸತ್ಯ, ದಿವ್ಯಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಎಲ್ಲವನ್ನೂ ನಾನು ಕಷ್ಟಪಟ್ಟು ಪಡೆದುಕೊಂಡಿದ್ದೇನೆ. ನಿನ್ನಂತಲ್ಲ. ನನ್ನ ಅತ್ತೆ ಬಗ್ಗೆ ಹಾಗೆಲ್ಲಾ ಮಾತನಾಡಬೇಡ ಎಂದು ಬೈಯುತ್ತಾಳೆ.

More from Filmibeat

English summary
Sathya Kannada Serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X