Sathya Serial: ದಿವ್ಯಾಳಿಗೆ ವಾರ್ನಿಂಗ್ ಕೊಟ್ಟ ಸತ್ಯ: ಅಕ್ಕನಿಗೆ ಬುದ್ಧಿ ಬರೋದಿಲ್ಲ
ಸತ್ಯ ಧಾರಾವಾಹಿಯಲ್ಲಿ ಲಕ್ಷ್ಮಣನಿಗೆ ಸತ್ಯ ಎಲ್ಲಿಗೂ ಹೋಗಲು ಬಿಡದೇ, ಕಟ್ಟಿ ಹಾಕುತ್ತಿರುವುದು ಹಿಂಸೆಯಾಗುತ್ತಿದೆ. ಆದರೆ, ಈ ವಿಚಾರವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಲಕ್ಷ್ಮಣನ ಎರಡನೇ ಹೆಂಡತಿ ಪದ್ಮ ಬೇರೆ ನೀವು ಮನೆಗೆ ಬರೋದಿಲ್ಲ. ನನ್ನ ಹಾಗೂ ಮಗನ ಜೊತೆಗೆ ಸಮಯವೇ ಕಳೆಯೋದಿಲ್ಲ. ಫೋನ್ ಮಾಡಿದರೂ ಬೈಯುತ್ತೀರಾ ಎನ್ನುತ್ತಾಳೆ.
ನನಗೆ ನೀವು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಗೋಳಾಡುತ್ತಿರುತ್ತಾಳೆ. ಅಲ್ಲದೇ ಮಗ ಲಚ್ಚಿಯ ಟ್ರೀಟ್‌ಮೆಂಟ್‌ಗೆ ಲಕ್ಷ ಲಕ್ಷ ಹಣ ಬೇಕಾಗಿರುತ್ತದೆ. ಲಕ್ಷ್ಮಣ ಕೂಡ ಎಷ್ಟು ಅಂತ ದುಡ್ಡು ಹೊಂದಿಸುವುದು ಎಂದು ಯೋಚಿಸುತ್ತಿರುತ್ತಾನೆ. ಮದುವೆಯಾದಾಗಿನಿಂದ ಇದೇ ಆಯ್ತು. ಹಣ ಹೊಂದಿಸುವುದು ಬಿಟ್ಟರೆ, ಕೊಂಚವೂ ಸುಖವಿಲ್ಲ ಎಂದು ಬೈಯುತ್ತಿರುತ್ತಾನೆ.

ರಾಮಚಂದ್ರ ಬಗ್ಗೆ ಹೇಳಿದ ಲಚ್ಚಿ
ಅತ್ತ ಪದ್ಮ ಮಗನಿಗೆ ಊಟ ಮಾಡಿಸುವಾಗ ಲಚ್ಚಿಗೆ ತನಗೆ ರಾಮಚಂದ್ರ ರಾಯರು ಸಿಕ್ಕ ವಿಚಾರವನ್ನು ಮೂಕ ಭಾಷೆಯಲ್ಲಿ ಹೇಳುತ್ತಿರುತ್ತಾನೆ. ಪದ್ಮ ಹಾಗೆಲ್ಲಾ ದೊಡ್ಡವರನ್ನು ಪರಿಚಯ ಮಾಡಿಕೊಳ್ಳಬಾರದು. ಅವರು ಕೊಡುವುದನ್ನೆಲ್ಲಾ ತಿನ್ನಬಾರದು ಎಂದು ಬೈಯುತ್ತಿರುತ್ತಾಳೆ. ನಿನಗೆ ನಾನು ಹೇಳಿದರೆ, ಸರಿ ಹೋಗುವುದಿಲ್ಲ. ಅಪ್ಪ ಬರಲಿ ಎಂದು ಬೆದರಿಸುತ್ತಾಳೆ. ಆದರೆ, ಅವರೇ ಲಕ್ಷ್ಮಣನ ಅಣ್ಣ ಎಂಬುದು ಇನ್ನೂ ಯಾರಿಗೂ ಗೊತ್ತಾಗಿಲ್ಲ. ಮುಂದೊಂದು ದಿನ ಸತ್ಯ ಗೊತ್ತಾದರೆ, ಕೋಟೆ ಮನೆಯಲ್ಲಿ ಏನಾಗುತ್ತದೋ ಕಾದು ನೋಡಬೇಕಿದೆ.
ದಿವ್ಯಾಗೆ ಸತ್ಯ ಕಪಾಳಮೋಕ್ಷ
ಇನ್ನು ಇತ್ತ ದಿವ್ಯಾ, ಸತ್ಯಳ ಅತ್ತೆ ಸೀತೆಯನ್ನು ಮುದುಕಿ ಎಂದು ಕರೆಯುವುದಲ್ಲದೇ, ಏನೇನೋ ಮಾತನಾಡಿದಳು. ಮುದುಕಿ ಅಂತ ಸುಮ್ಮನೆ ಬಿಟ್ಟೆ. ಇನ್ನೊಂದು ಸಲ ಹಾಗೆ ಮಾಡಿದರೆ, ಸರಿಯಾಗಿ ಹೇಳುತ್ತೀನಿ ಎಂದು ಧಿಮಾಕಿನಿಂದ ಮಾತನಾಡುತ್ತಾಳೆ. ಕೋಪ ಸಹಿಸಿಕೊಳ್ಳಲಾರದೆ ಸತ್ಯ ದಿವ್ಯಾಳ ಕೆನ್ನೆಗೆ ಜೋರಾಗಿ ಹೊಡೆಯುತ್ತಾಳೆ. ಹೊಡೆದು, ಇನ್ನೊಂದು ದಿನ ನನ್ನ ಮನೆಯವರ ವಿಚಾರಕ್ಕೆ ಬರೋದಾಗಲಿ, ಸೀತಮ್ಮನಿಗೆ ತೊಂದರೆ ಕೊಡೋದಾಗಲಿ, ನನ್ನ ಮನೆಯವರ ಬಗ್ಗೆ ಮಾತನಾಡೋದಾಗಲಿ, ಅಥವಾ ನಮ್ಮ ಮನೆಯ ಕಡೆ ಸುಳಿದಾಡಿದರೂ ಸುಮ್ಮನೆ ಬಿಡೋದಿಲ್ಲ ಎಂದು ವಾರ್ನಿಂಗ್ ಕೊಟ್ಟು ಬರುತ್ತಾಳೆ.

ಸೊಸೆಯ ಮೇಲೆ ಹೆಚ್ಚಿದ ಹೆಮ್ಮೆ
ಇದನ್ನೆಲ್ಲಾ ನೋಡುವ ಸೀತಾಳಿಗೆ ಸೊಸೆಯ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ಇನ್ನು ಜಾನಕಿ ಸತ್ಯ ಮತ್ತು ಸೀತಮ್ಮನಿಗೆ ಬಾಗಿನ ಕೊಡುತ್ತಾಳೆ. ಸೀತಾಳಿಗೆ ಬಾಗಿನ ಪಡೆದು ಖುಷಿಯಾಗುತ್ತದೆ. ಸೊಸೆ ಸತ್ಯ ಬಗ್ಗೆ ಬಹಳ ಹೊಗಳುತ್ತಾಳೆ. ಈಗ ನಾನು ಸತ್ಯಳಿಂದ ಬುದ್ಧಿ ಕಲಿಯುತ್ತಿದ್ದೇನೆ. ಅಕ್ಕ-ಪಕ್ಕದವರ ಬಗ್ಗೆಯೂ ಯೋಚಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣಗಳೇ ಶ್ರೀಮಂತಿಕೆಯನ್ನು ತಂದು ಕೊಡುವುದು ಎಂದು ಸೊಸೆಯನ್ನು ಮಾಡಿ ಹೊಗಳುತ್ತಾಳೆ. ಇದನ್ನೆಲ್ಲಾ ಕೇಳುವ ಗಿರಿಜಾ ಹಾಗೂ ಜಾನಕಿಗೆ ಬಹಳ ಖುಷಿಯಾಗುತ್ತದೆ.
ಬುದ್ಧಿ ಕಲಿಯೋದಿಲ್ಲ ದಿವ್ಯಾ
ಸತ್ಯಳನ್ನು ಸೀತಾ ಹೊಗಳುತ್ತಿದ್ದರೆ, ದಿವ್ಯಾ ಹೊಟ್ಟೆ ಉರಿಯುತ್ತಿರುತ್ತದೆ. ಮಾತಾಡಿ ಮಾತಾಡಿ ಎಷ್ಟು ಬೇಕಾದರೂ ಹೇಳಿ. ನಿಮ್ಮ ಮನೆಗೆ ಬರುತ್ತೇನೆ. ಆಗ ನಿಮಗೆಲ್ಲಾ ಸರಿಯಾದ ಪಾಠ ಕಲಿಸುತ್ತೇನೆ ಎಂದು ಮನದೊಳಗೆ ಮಾತನಾಡಿಕೊಳ್ಳುತ್ತಾಳೆ. ಯಾರು ಎಷ್ಟೇ ಬುದ್ಧಿ ಹೇಳಿದರೂ ಕೂಡ ದಿವ್ಯಾಳಿಗೆ ಸತ್ಯ ಅರ್ಥವಾಗುವುದಿಲ್ಲವೋ. ಅಥವಾ ಅವಳಿಗೆ ಬೇಕಾಗಿಲ್ಲವೋ ಗೊತ್ತಾಗುತ್ತಿಲ್ಲ. ಇತ್ತ ಕಾರ್ತಿಕ್, ಸತ್ಯ ಜೊತೆಗಿಲ್ಲದ ಕಾರಣ ಸೊರಗಿ ಹೋಗಿರುತ್ತಾನೆ. ಊಟವನ್ನೂ ಮಾಡದೇ ಮಂಕಾಗಿ ಕೂಳಿತಿರುತ್ತಾನೆ. ಕಾರ್ತಿಕ್‌ನನ್ನು ನೋಡಿ ತಂಗಿ ಮತ್ತು ಮಂಜ ಇಬ್ಬರೂ ರೇಗಿಸುತ್ತಿರುತ್ತಾರೆ. ರಾಮಚಂದ್ರ ರಾಯರು ಮಗನಿಗೆ ಸಮಾಧಾನ ಮಾಡುತ್ತಾರೆ.


Click it and Unblock the Notifications











