Sathya serial: ಪದ್ಮಾಳನ್ನು ಮನೆಗೆ ಕರೆತರುವ ಆಲೋಚನೆ ಸತ್ಯಳದ್ದು: ರಿತು ಮೇಲೆ ಕೂಗಾಡಿದ ಲಕ್ಷ್ಮಣ
ಸತ್ಯ ಧಾರಾವಾಹಿಯಲ್ಲಿ ಪದ್ಮಾ ಮನೆಗೆ ಹೋಗಿದ್ದ ರಾಯರು ಮತ್ತು ಸತ್ಯ ಈಗ ಈ ಸಂಬಂಧದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ತಿಳಿಯದೇ ಒದ್ದಾಡುತ್ತಿದ್ದಾರೆ. ಇತ್ತ ಪದ್ಮಾಳಿಗೆ ರಾಯರು ಮನೆಗೆ ಬಂದು ಹೋದ ವಿಚಾರವನ್ನು ಪತಿ ಲಕ್ಷ್ಮಣನ ಬಳಿ ಹೇಳದೇ ಇರಲಾಗುತ್ತಿಲ್ಲ. ಇದರಿಂದ ಲಕ್ಷ್ಮಣನನ್ನು ಕೊಂಚ ಅವಾಯ್ಡ್ ಮಾಡುತ್ತಿದ್ದಾಳೆ.
ಇನ್ನು ಪದ್ಮಾ ತನ್ನ ಮಗನಿಗೆ ಆ ತುಂಬು ಕುಟುಂಬದಲ್ಲಿ ಜಾಗ ಸಿಗಬೇಕು. ಒಂಟಿಯಾಗಿರದೇ ಅಪ್ಪನ ನೆರಳಲ್ಲಿ ಖುಷಿಯಾಗಿ ಬೆಳೆಯಬೇಕು ಎಂಬುದೊಂದೇ ಆಸೆ. ರಾಯರು ಬಳಿ ಪದ್ಮಾ ಹಣ ಬೇಡ. ಸಮಾಜದಲ್ಲಿ ಸ್ಥಾನ ಬೇಕು ಎಂದು ಕೇಳಿದ್ದಾಳೆ. ರಾಯರು ಏನು ಮಾಡುವುದು ಎಂದು ಆಲೋಚಿಸುತ್ತಿರುತ್ತಾನೆ. ಸತ್ಯ ಇದಕ್ಕೆ ಒಳ್ಳೆಯ ಐಡಿಯಾ ಕೊಡುತ್ತಾಳೆ.

ಪದ್ಮಾ ಅವರನ್ನು ಈ ಮನೆಗೆ ಕರೆದುಕೊಂಡು ಬರೋಣ. ಇಂದಲ್ಲ ನಾಳೆ ಪದ್ಮಾ ಅವರ ಬಗ್ಗೆ ಮನೆಯಲ್ಲಿ ಎಲ್ಲರಿಗೂ ಗೊತ್ತಾಗಲೇಬೇಕು. ಯಾರಿಂದಲೋ ವಿಚಾರ ಗೊತ್ತಾಗಿ ಮನೆಯವರು ನೊಂದುಕೊಳ್ಳುವುದರ ಬದಲು, ನಾವೇ ಪದ್ಮಾ ಮತ್ತು ನಚಿಕೇತನ್ ಅನ್ನು ಕರೆದುಕೊಂಡು ಬರೋಣ ಎಂದು ಸತ್ಯ ಹೇಳುತ್ತಾಳೆ.
ಪದ್ಮಾಳನ್ನು ಮನೆಗೆ ಕರೆ ತರುವ ಆಲೋಚನೆ
ಸತ್ಯ ಮಾತನ್ನು ಕೇಳಿದ ರಾಯರಿಗೆ ಭಯವಾಗುತ್ತದೆ. ಪದ್ಮಾ ಬಗ್ಗೆ ಊರ್ಮಿಳಾಗೆ ಗೊತ್ತಾದರೆ, ಅವಳು ಹೇಗೆ ಸಹಿಸಿಕೊಳ್ಳುತ್ತಾ?ಳೆ ಎಂದು ಪ್ರಶ್ನೆ ಮಾಡಿದಾಗ, ಸತ್ಯ ಅದೆಲ್ಲವನ್ನೂ ನಾವು ಅರ್ಥ ಮಾಡಿಸೋಣ ಎಂದು ಹೇಳುತ್ತಾಳೆ.
ಮನೆ ಕೆಲಸ ಮಾಡಿಕೊಂಡಿರುವ ಕೀರ್ತನಾ
ಇನ್ನು ಕೀರ್ತನಾ, ಸತ್ಯ ವಿರುದ್ಧ ಮನೆಯಲ್ಲಿ ಸಮಸ್ಯೆ ಮಾಡುತ್ತಿದ್ದ ಕಾರಣ ಸೀತಾ ಈಗ ಶಿಕ್ಷೆ ನೀಡಿದ್ದಾಳೆ. ಆಫೀಸಿಗೆ ಹೋಗಬಾರದು ಮನೆಯಲ್ಲೇ ಇರಬೇಕು. ಮನೆಯ ಕೆಲಸ ಮಾಡಿಕೊಂಡು ಇದ್ದರೆ ಮಾತ್ರವೇ ಊಟ ಕೊಡುವುದು ಎಂದು ಹೇಳಿದ್ದಾಳೆ. ಹೀಗಾಗಿ ಕೀರ್ತನಾ ಮತ್ತು ಸುಹಾಸ್ ಇಬ್ಬರೂ ಮನೆ ಕೆಲಸ ಮಾಡಿಕೊಂಡು ಇದ್ದಾರೆ. ರೂಮ್‌ನಲ್ಲಿ ಧೂಳು ತೆಗೆಯುವ ಬದಲು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಕ್ಕೆ ಸೀತಾ ಇಬ್ಬರಿಗೂ ಒಂದು ದಿನದ ಊಟ ಕ್ಯಾನ್ಸಲ್ ಮಾಡಿದ್ದಾಳೆ. ಕೀರ್ತನಾ ಶಿಕ್ಷೆ ಅನುಭವಿಸಿ ಒಳ್ಳೆಯ ಬುದ್ಧಿಯನ್ನು ಕಲಿಯುವುದರ ಬದಲು ಸತ್ಯ ಮೇಲೆ ಇನ್ನಷ್ಟು ದ್ವೇಷ ಹೆಚ್ಚಿಸಿಕೊಂಡಿದ್ದಾಳೆ.

ಬೋಂಡದ ಅಂಗಡಿ ತೆರೆಯಲು ತಯಾರಿ
ಇತ್ತ ಬಾಲ ಬೋಂಡ ಬಿಸಿನೆಸ್ ಅನ್ನು ಶುರು ಮಾಡಬೇಕು ಎಂದುಕೊಂಡಿದ್ದಾನೆ. ಇದಕ್ಕಾಗಿ ಗಾಡಿಯನ್ನು ಸಿದ್ಧ ಪಡಿಸಿದ್ದು, ಜಾಗವನ್ನು ಕ್ಲೀನ್ ಮಾಡುತ್ತಿದ್ದಾನೆ. ಆದರೆ, ದಿವ್ಯಾ, ಬಾಲನ ಕೆಲಸವನ್ನು ಒಪ್ಪಿಕೊಳ್ಳದೇ, ಅಡ್ಡ ಬಾಯಿ ಹಾಕುತ್ತಲೇ ಇದ್ದಾಳೆ. ಆದರೆ, ಬಾಲ ಮಾತ್ರ ದಿವ್ಯಾ ಮಾತಿಗೆ ಕೊಂಚವೂ ಸೊಪ್ಪು ಹಾಕುತ್ತಿಲ್ಲ. ಸತ್ಯಳ ಹುಡುಗರ ಸಹಾಯದಿಂದ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾನೆ. ಬಾಲ ಬೋಂಡದ ಅಂಗಡಿ ಶುರು ಮಾಡುತ್ತಿರುವುದಕ್ಕೆ ಸತ್ಯ ಹಾಗೂ ಕಾರ್ತಿಕ್ ಶುಭ ಕೋರಲು ಆಗಮಿಸುತ್ತಿದ್ದಾರೆ.
ರಿತು ಮೇಲೆ ಕೂಗಾಡಿದ ಲಕ್ಷ್ಮಣ
ಲಕ್ಷ್ಮಣ ಇತ್ತೀಚೆಗೆ ಬಹಳ ಬ್ಯುಸಿಯಾಗಿಬಿಟ್ಟಿದ್ದಾನೆ. ಆದರೆ, ಆ ಕಡೆ ಪದ್ಮಾಳಿಗೂ ಸಮಯ ಕೊಡುತ್ತಿಲ್ಲ. ಇತ್ತ ಮನೆಯವರಿಗೂ ಸಿಗುತ್ತಿಲ್ಲ. ಆಫೀಸ್, ಆಫೀಸ್ ಎಂದು ಎರಡೂ ಸಂಬಂಧ ಮ್ಯಾನೇಜ್ ಮಾಡುವ ಗೊಂದಲದಲ್ಲೇ ಸಿಲುಕಿಕೊಂಡಿದ್ದಾನೆ. ಹೀಗಾಗಿ ಮನೆಯವರೆಲ್ಲರೂ ಲಕ್ಷ್ಮಣನಿಗೆ ಊರ್ಮಿಳಾ ಮೊದಲ ಹೆಂಡತಿ, ಕೆಲಸ ಎರಡನೇ ಹೆಂಡತಿ ಎಂದು ರೇಗಿಸುತ್ತಿರುತ್ತಾರೆ. ಈಗ ರಿತು ಕೂಡ ಬಂದು ನಿಮಗೆ ನನಗಿಂತಲೂ ನಿಮ್ಮ ಎರಡನೇ ಸಂಸಾರವೇ ಹೆಚ್ಚಾಯ್ತಾ? ಎಂದು ತಮಾಷೆ ಮಾಡುತ್ತಾಳೆ. ಇದರಿಂದ ಕೋಪಗೊಂಡ ಲಕ್ಷ್ಮಣ ಮಗಳ ಮೇಲೆ ಕೂಗಾಡುತ್ತಾನೆ.


Click it and Unblock the Notifications











