Sathya:ಬಾಲನಿಗೆ ಮತ್ತಷ್ಟು ಹತ್ತಿರ ಆಗುತ್ತಿರುವ ದಿವ್ಯಾ; ಡೊಂಟ್ ಕೇರ್ ಎನ್ನದ ರುಕ್ಕು

By ಪೂರ್ವ

ದಿವ್ಯಾಳಿಗೆ ತನ್ನ ತಪ್ಪಿನ ಅರಿವಾಗಿದೆ. ಬಾಲ ನನ್ನವನು ಆಗಬೇಕೆಂದು ಬಹಳ ಹರಸಾಹಸ ಪಡುತ್ತಿದ್ದಾಳೆ. ಬಾಲ ಎಂದರೆ ದಿವ್ಯಾಗೆ ಇದೀಗ ಸಿಕ್ಕಾಪಟ್ಟೆ ಪ್ರೀತಿ ಹುಟ್ಟಿದೆ. ಬಾಲನ ಹತ್ತಿರ ಬಂದು ಮಲಗುವುದರಿಂದ ಸಿಕ್ಕಾಪಟ್ಟೆ ಟಾರ್ಚರ್ ನೀಡುತ್ತಿದ್ದಾಳೆ.

ದಿವ್ಯಾ ಇದೀಗ ತನ್ನನ್ನು ಬಹಳ ಪ್ರೀತಿ ಮಾಡುತ್ತಿದ್ದಾಳೆ ಎನ್ನುವುದು ಬಾಲನಿಗೆ ಕೂಡ ಗೊತ್ತಿದೆ. ಅದು ಆಕೆಯ ಮಾತುಗಳಿಂದ ತಿಳಿಯುತ್ತಿದೆ. ಆದರೆ, ಬಾಲ ಇದನ್ನು ಹಲವು ಬಾರಿ ದಿವ್ಯಾ ತಾಯಿ ಹಾಗೂ ಗಿರಿಜಾ ಬಳಿ ಹೇಳಿದಾಗ, ಅವರು ಅದನ್ನು ಕಿವಿಗೆ ಹಾಕಿಕೊಳ್ಳದೆ ದಿವ್ಯಾ ಮಾಡುತ್ತಿರುವುದು ನಾಟಕ ಎಂದು ಹೇಳುತ್ತಿರುತ್ತಾರೆ.

Sathya kannada serial April 14th Bala and Divya episode

ಇನ್ನೊಂದು ಕಡೆ ರುಕ್ಕು ತನ್ನ ಮಾವ ಬಾಲನನ್ನು ಬಹಳ ಪ್ರೀತಿ ಮಾಡುತ್ತಿದ್ದಾಳೆ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಬಾಲನ ಬಗ್ಗೆ ಅತಿ ಹೆಚ್ಚು ಕಾಳಜಿ ತೋರುತ್ತಿದ್ದಾಳೆ. ಆದರೆ, ದಿವ್ಯಾ ಮಾತ್ರ ಪದೇ ಪದೆ ರುಕ್ಕುಗೆ "ನೀನು ಮಾಡುತ್ತಿರುವುದು ತಪ್ಪು. ಆತ ನನ್ನ ಗಂಡ. ನಾನು ಹಾಗೆಯೇ ನನ್ನ ಹಾಗೂ ಗಂಡನ ಡಿವೋರ್ಸ್ ಬೇರೆ ಆಗಿಲ್ಲ. ನೀನು ಮಾತ್ರ ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ನಿಮಗೆ ಇದರಿಂದ ಬಹಳ ಕಷ್ಟ ಆಗುತ್ತದೆ. ಬಾಲ ಯಾವತ್ತಿದ್ದರೂ ನನ್ನವನು. ಆತನನ್ನು ನಾನು ಯಾವತ್ತೂ ಬಿಟ್ಟುಕೊಡುವ ಮಾತೇ ಇಲ್ಲ. ನನ್ನ ಮಾತನ್ನು ನೀನು ಕೇಳು" ಎಂದು ದಿವ್ಯಾ ಹೇಳುತ್ತಾಳೆ.

ಆದರೆ ಆ ವೇಳೆ ರುಕ್ಕು ಮುಖದಲ್ಲಿ ಆದ ಬದಲಾವಣೆಯನ್ನು ಕಂಡು ದಿವ್ಯಾಗೆ ಕೂಡ ಕೊಂಚ ಶಾಕ್ ಆಗುತ್ತೆ. ರುಕ್ಕುಗೆ ಏನು ಹೇಳಲು ಆಗುವುದಿಲ್ಲ. ಆಕೆಯ ಕಣ್ಣಲ್ಲಿ ಬಾಲನ ಮೇಲಿರುವ ಪ್ರೀತಿ ಎದ್ದು ಕಾಣುತ್ತಿದೆ. ದಿವ್ಯಾ ಹೇಳುವ ಪ್ರತಿ ಮಾತು ಕೇಳಿ ರುಕ್ಕುಗೆ ಬಹಳ ಕೋಪ ಬರುತ್ತದೆ.

Sathya kannada serial April 14th Bala and Divya episode

ಸಂಕಷ್ಟ ತಂದುಕೊಂಡಳಾ 'ಸತ್ಯ'

ತನ್ನ ಊರಿನ ಕಾರ್ಪೊರೇಟರ್ ಅನ್ನು ಅರೆಸ್ಟ್ ಮಾಡಿಸಿದ್ದಾಳೆ. ಗಿರಿಜಾ ಮೇಲೆ ದೌರ್ಜನ್ಯ ಮಾಡಿರುವ ಆ ಕಾರ್ಪೊರೇಟರ್ ಹುಟ್ಟಡಗಿಸಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ಪೊಲೀಸರು ಕಾರ್ಪೊರೇಟರ್ ಬಳಿ ಮಾತನಾಡಲು ಬಂದಾಗ ಅವರ ವಿರುದ್ಧ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾನೆ. ಅದಲ್ಲದೆ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾನೆ. ಅದನ್ನೇ ದಾಳವಾಗಿ ಹಿಡಿದುಕೊಂಡ ಸತ್ಯ ಆ ಕಾರ್ಪೊರೇಟರ್ ಅನ್ನು ಪೊಲೀಸ್ ಕಸ್ಟಡಿಗೆ ಹಾಕುತ್ತಾಳೆ.

ಮೇಲಾಧಿಕಾರಿಯನ್ನೇ ಪ್ರಶ್ನೆ ಮಾಡಿದ ಸತ್ಯ

ಇದನ್ನು ಪ್ರಶ್ನಿಸಿದ ಮೇಲಾಧಿಕಾರಿ "ಸತ್ಯ ನೀನು ಯಾಕೆ ಹೀಗೆಲ್ಲ ಮಾಡಿದೆ. ಅವರನ್ನು ಬಿಟ್ಟು ಬಿಡು" ಎಂದಾಗ ಮೇಲಾಧಿಕಾರಿ ಬಳಿಯೇ ಸತ್ಯ ಹೇಳುತ್ತಾಳೆ. "ಸರಿ ಸರ್ ನಾನು ಬಿಟ್ಟು ಬಿಡುತ್ತೇನೆ. ಆದರೆ ಇದನ್ನು ನೀವು ರೈಟಿಂಗ್‌ನಲ್ಲಿ ಬರೆದುಕೊಡಬೇಕು" ಎಂದಾಗ ಆತನಿಗೆ ಏನು ಮಾಡಲು ಸಾಧ್ಯ ಆಗುವುದು ಇಲ್ಲ. ಕಾರ್ಪೊರೇಟರ್ ಕೆಂಗಣ್ಣಿಗೆ ಸಿಲುಕಿಕೊಂಡ ಸತ್ಯಗೆ ಗಂಡಾಂತರ ಕಾದಿರುವುದಂತು ಸತ್ಯ.

ಪ್ರತಿ ದಿನ ಆತಂಕದಲ್ಲಿರುವ ಸೀತಾ

ಸೀತಾಗೆ ಕೂಡ ಅದೇ ಭಯ. ಸತ್ಯಗೆ ಒಳ್ಳೆಯದಾಗಲಿ ಎಂದು ದೇವಾಲಯಕ್ಕೆ ಹೋಗಿ ಆಗಾಗ ಪೂಜೆ ಮಾಡಿಸುತ್ತ ಇರುತ್ತಾಳೆ. ಆಕೆಗೆ ಸತ್ಯಗೆ ಏನು ಆಗಬಾರದು. ಆಕೆ ಬಹಳ ಚೆನ್ನಾಗಿ ಇರಬೇಕು ಸುಖವಾಗಿ ಇರಬೇಕು ಎಂಬ ಸಾಕಷ್ಟು ಆಸೆಗಳು ಇರುತ್ತದೆ . ಆದರೆ, ಅದೆಲ್ಲವನ್ನೂ ದೇವರು ನೆರವೇರಿಸಲಿ ಎನ್ನುವುದು ಎಲ್ಲರ ಆಶಯ.

More from Filmibeat

English summary
Sathya kannada serial April 14th Bala and Divya episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X