Sathya:ಬಾಲನಿಗಾಗಿ ರುಕ್ಕು ದಿವ್ಯಾ ಕಾದಾಟ; ಬಾಲನನ್ನು ಮದುವೆ ಆಗಲು ಹೊರಟ ರುಕ್ಕುಗೆ ಸವಾಲು
ದಿವ್ಯಾಗೆ ಬುದ್ಧಿ ಕಲಿಸಲು ಬಾಲ ಹಾಗೂ ರುಕ್ಕು ಒಂದಾಗಿ ನಟನೆ ಮಾಡುತ್ತಿದ್ದಾರೆ. ಬಾಲನಿಗೆ ದಿವ್ಯಾ ಅಂದರೆ ಬಹಳ ಪ್ರೀತಿ. ಏನೇ ಮಾಡಿದರೂ, ಆತನಿಗೆ ಎಷ್ಟೇ ಬೈದರೂ ಬಾಲ ಮಾತ್ರ ದಿವ್ಯಾ ಹಿಂದೆ ಮುಂದೇನೆ ಸುತ್ತಾಡುತ್ತಿರುತ್ತಾನೆ. ಬಾಲನಿಗೆ ದಿವ್ಯಾ ಸಾಕಷ್ಟು ಅವಮಾನಗಳನ್ನು ಮಾಡಿದ್ದಾಳೆ. ಆದರೆ ಬಾಲ ಮಾತ್ರ ಅದ್ಯಾವುದನ್ನು ಮನದಲ್ಲಿ ಇಟ್ಟು ಕೊಂಡಿರಲಿಲ್ಲ. ಇದೀಗ ದಿವ್ಯಾ ಹಣ ಇದ್ದವನನ್ನು ಮದುವೆಯಾಗಲು ಹೊರಟಿರುತ್ತಾಳೆ.
ಆತನಿಗೆ ಹಣ ಇದೆ ಎಂಬ ಮದದಲ್ಲಿ ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಪ್ಲರ್ಟ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾನೆ. ಈ ವಿಚಾರ ಕೊನೆಗೆ ಗೊತ್ತಾಗಿ ದಿವ್ಯಾ ಆತನಿಗೆ ಸರಿಯಾಗಿ ಪಾಠ ಕಲಿಸುತ್ತಾರೆ. ಕೊನೆಗೆ ಬಾಲ ನನ್ನ ಗಂಡ ಎಂದು ಜೋರಾಗಿ ಹೇಳುತ್ತಾಳೆ. ಅಷ್ಟರಲ್ಲಿ ಆಗಲೇ ಬಾಲನಿಗೆ ದಿವ್ಯಾ ಮೇಲೆ ಇದ್ದ ಪ್ರೀತಿ ಎಲ್ಲಾ ಹೋಗಿರುತ್ತೆ. ದಿವ್ಯಾ ಮೇಲೆ ಪ್ರಾಣ ಇಟ್ಟುಕೊಂಡಿದ್ದ ಬಾಲ ಕೊನೆಗೆ ದಿವ್ಯಾನಿಂದಾಗಿ ನನಗೆ ಮುಕ್ತಿಬೇಕು ಎಂದು ಖಡಕ್ ಆಗಿ ಹೇಳುತ್ತಾನೆ.

ಬಾಲ ಮಾವನ ಮಗಳು ರುಕ್ಕು ಬಾಲನಿಗೆ ಹೇಳಿ ಮಾಡಿಸಿದ ಜೋಡಿ. ಆಕೆ ದಿವ್ಯಾ ಮನೆಯಲ್ಲೇ ಇರುತ್ತಾಳೆ. ಬಾಲ ಅಂದರೆ ರುಕ್ಕುಗೆ ಚಿಕ್ಕ ವಯಸ್ಸಿನಿಂದಲೂ ಬಹಳ ಹೆಚ್ಚು ಪ್ರೀತಿ ಇತ್ತು. ಆದರೆ ಆತನ ಪ್ರೀತಿ ಬೇರೆಯವರ ಮೇಲೆ ಇತ್ತು ಆದ ಕಾರಣ ಮದುವೆ ಎನ್ನುವ ಬಂಧದಲ್ಲಿ ಸಿಕ್ಕಿ ಹಾಕಿಕೊಂಡು ಇರುತ್ತಾರೆ. ಇದೀಗ ದಿವ್ಯಾ ಎದುರು ಬಂದ ರುಕ್ಕುವನ್ನು ನೋಡಿ ದಿವ್ಯಾ ಮಾತ್ರ ಸಿಡಿ ಸಿಡಿ ಎಂದು ಹೇಳುತ್ತಿರುತ್ತಾರೆ. ದಿವ್ಯಾ ತಾಯಿ ಹಾಗೂ ಅಜ್ಜಿ ರುಕ್ಕು ಹಾಗೂ ಬಾಲನ ಮದುವೆ ಬಗ್ಗೆ ಮಾತುಕತೆ ನಡೆಸುತ್ತಿರುತ್ತಾರೆ.
ಬಾಲ ಹಾಗೂ ರುಕ್ಕು ಮದುವೆ ಬಗ್ಗೆ ಚರ್ಚೆ
ಬಾಲನನ್ನು ರುಕ್ಕು ಮದುವೆ ಆದರೆ, ಅವರ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಆದಷ್ಟು ಬೇಗ ರುಕ್ಕು ತಂದೆ ತಾಯಿಯ ಬಳಿ ಬಾಲ ಮದುವೆಯ ಬಗ್ಗೆ ಮಾತನಾಡಬೇಕು ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡ ದಿವ್ಯಾಗೆ ತುಂಬಾ ಸಿಟ್ಟು ಬರುತ್ತದೆ. ಬಾಲ ನನ್ನ ಕೈ ತಪ್ಪಿ ಹೋಗಿ ಬಿಡುತ್ತಾನೆ ಎನ್ನುವ ಭಯ ಆಕೆಗೆ ಹೆಚ್ಚಾಗುತ್ತಿತ್ತು. ಆಕೆ ಅದಕ್ಕಾಗಿ ಬಹಳ ದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳುತ್ತಾಳೆ. ಬಾಲನನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವ ಜಿದ್ದಿಗೆ ಬೀಳುತ್ತಾಳೆ. ರುಕ್ಕು ಹಾಗೂ ದಿವ್ಯಾ ಮಧ್ಯೆ ಬಾಲನಿಗಾಗಿ ಬಹಳ ದೊಡ್ಡ ಜಗಳವೇ ನಡೆದು ಬಿಡುತ್ತದೆ.
ಬಾಲನನ್ನು ಬಿಟ್ಟು ಕೊಡುವ ಮಾತೇ ಇಲ್ಲ
ಮದುವೆ ಮಾತುಕತೆ ಮಾಡುತ್ತಿರುವಾಗಲೇ ಎದ್ದು ಕುಳಿತ ದಿವ್ಯಾ ಹೇಳುತ್ತಾಳೆ. "ಹಲೋ ಅವರಿಗೆ ಡಿವೋರ್ಸ್ ಆಗಿಲ್ಲ. ಹಾಗಿದ್ದ ಮೇಲೆ ಹೇಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೀರಿ, ಇದೇನು ಮಕ್ಕಳ ಆಟನಾ?" ಎಂದು ಕೊಂಚ ಜೋರಾಗಿಯೇ ಹೇಳುತ್ತಾಳೆ. ಆದರೆ ಈ ವೇಳೆ ಮನೆ ಮಂದಿಯೆಲ್ಲ ಸುಮ್ಮನಾಗುತ್ತಾರೆ. ಇನ್ನೂ ಮರುದಿನ ರುಕ್ಕು ತನ್ನ ತಾಯಿಗೆ ಕರೆ ಮಾಡಿ ನಿಶ್ಚಿತಾರ್ಥದ ವಿಚಾರ ಮಾತನಾಡಲು ಮನೆಗೆ ಕರೆಯುತ್ತಾಳೆ. ಆದರೆ, ಆಕೆಯ ಮಾತುಗಳನ್ನು ಕೇಳಿಸಿಕೊಂಡ ದಿವ್ಯಾ, ರುಕ್ಕು ಮೇಲೆ ಸಿಡಿದು ಬಿದ್ದಿದ್ದಾರೆ.
ದಿವ್ಯಾನ ಮಾತು ಕೇಳಿ ಕೋಪಗೊಂಡ ರುಕ್ಕು
ದಿವ್ಯಾನನ್ನು ನೋಡಿದ ರುಕ್ಕು ಕೊಂಚ ಕೋಪಗೊಂಡಿದ್ದಾಳೆ. ಇದೀಗ ಇಬ್ಬರು ಜಗಳಕ್ಕೆ ಇಳಿದಿದ್ದಾರೆ. ದಿವ್ಯಾ ಮಾತನಾಡುತ್ತಿರುವ ಕೊಂಕು ಮಾತುಗಳಿಗೆ ರುಕ್ಕು ಏನು ಮಾತನಾಡಬೇಕು ತೋಚದ ಹಾಗೆ ಇರುತ್ತಾಳೆ. ರುಕ್ಕು ಬಂದು ದಿವ್ಯಾ ಬಳಿ ಹೇಳುತ್ತಾಳೆ. "ನಾನು ಒಳ್ಳೆಯ ಮೂಡ್‌ನಲ್ಲಿ ಇದ್ದೇನೆ. ಸೈಲೆಂಟ್ ಆಗಿ ಸ್ವಲ್ಪ ಸೈಡ್ ಗೆ ಹೋಗು, ಮಾವನಿಗೆ ನಿನ್ನ ಮೇಲೆ ಸ್ವಲ್ಪವೂ ಫೀಲಿಂಗ್ಸ್ ಇಲ್ಲ. ಹೀಗಿದ್ದ ಮೇಲೆ ಹೇಗೆ ನೀನು ಹೀಗೆಲ್ಲ ಅಂದುಕೊಳ್ಳುತ್ತಿಯಾ" ಎಂದು ಹೇಳಿ ಜಗಳ ಕಾಯುತ್ತಾಳೆ. ಇದನ್ನೆಲ್ಲ ಕೇಳಿದ ದಿವ್ಯಾ "ಬಾಲನ ಜೊತೆ ನಿನಗೆ ಮದುವೆ ಅಲ್ಲ ನಿಶ್ಚಿತಾರ್ಥ ಆಗಲು ನಾನು ಬಿಡುವುದು ಇಲ್ಲ" ಎಂದು ರುಕ್ಕುಗೆ ದಿವ್ಯಾ ಸವಾಲು ಹಾಕಿದ್ದಾರೆ.


Click it and Unblock the Notifications











