Sathya: ಪೊಲೀಸ್ ಸ್ಟೇಶನ್‌ನಲ್ಲಿ ಸಿಕ್ಕಿ ಹಾಕಿಕೊಂಡ ದಿವ್ಯಾ; ತಪ್ಪಿಗೆ ಶಿಕ್ಷೆ ನೀಡುತ್ತಾಳಾ ಸತ್ಯಾ?
ಬಾಲನ ವಿರುದ್ದ ದಿವ್ಯಾ ಕಂಪ್ಲೇಂಟ್ ಕೊಡುತ್ತಾಳೆ. ದಿವ್ಯಾಗೆ ಬಾಲನನ್ನು ಹೇಗಾದರೂ ಮಾಡಿ ನನ್ನವನ್ನಾಗಿ ಮಾಡಿಕೊಳ್ಳುವ ಆಸೆ. ತನ್ನ ತಪ್ಪಿನ ಅರಿವಾಗಿ ದಿವ್ಯಾ ಬಹಳ ಪಶ್ಚಾತಾಪ ಪಡುತ್ತಾಳೆ. ಆಕೆಗೆ ಆಗ ಬಾಲನ ಪ್ರೀತಿ ಅರ್ಥ ಆಗುತ್ತದೆ. ಬಾಲ ತನ್ನವನಾಗಬೇಕು. ಆತನ ಜೊತೆ ಸಂಸಾರ ಮಾಡಬೇಕು ಎಂದು ಹಲವು ಬಯಕೆ ಇಟ್ಟುಕೊಂಡು ಇರುತ್ತಾಳೆ. ಆದರೆ, ಕೊನೆಗೆ ಆಗಿದ್ದೆ ಬೇರೆ. ಬಾಲ, ರುಕ್ಕು ಜೊತೆ ಮದುವೆ ಆಗಲು ಸನ್ನದ್ಧನಾಗುತ್ತಾನೆ. ದಿವ್ಯಾಗೆ ಬಾಲ ಯಾವಾಗ ಸಿಗುವುದು ಇಲ್ಲ ಎಂದು ಗೊತ್ತಾಗಿ ಬಿಡುತ್ತದೋ ಆಗ ದಿವ್ಯಾ ಅಸಲಿ ಆಟ ಶುರು ಮಾಡುತ್ತಾಳೆ.
ಬಾಲ ನನ್ನವನು ಮಾತ್ರ ಆತನನ್ನು ಯಾರಿಗೆ ಕೂಡ ನಾನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ. ಆದರೂ ಯಾರ ಬಳಿಯೂ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಕೊನೆಗೆ ಬಾಲ ಹಾಗೂ ರುಕ್ಕು ನಿಶ್ಚಿತಾರ್ಥ ಎಂದು ದಿವ್ಯಾಗೆ ಗೊತ್ತಾಗುತ್ತದೆ. ಆಕೆ ಪೊಲೀಸ್ ಕಂಪ್ಲೇಂಟ್ ಕೊಡುತ್ತಾಳೆ. ವರದಕ್ಷಿಣೆ ಕಿರುಕುಳ ಹಾಗೆಯೇ ಇಲ್ಲ ಸಲ್ಲದ ಕೇಸ್ ಹಾಕಿ ಪೊಲೀಸರು ಮನೆ ಬಾಗಿಲಿಗೆ ಬರುವ ಹಾಗೆ ಮಾಡುತ್ತಾಳೆ.

ಬಾಲ ಹಾಗೂ ರುಕ್ಕು ಬಹಳ ಸಂಭ್ರಮದಿಂದ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ವೇಳೆ ಪೊಲೀಸರು ಬರುತ್ತಾರೆ. ಬಾಲ ಹಾಗೂ ರುಕ್ಕುಗೆ ಪೊಲೀಸರನ್ನು ನೋಡಿ ಶಾಕ್ ಆಗುತ್ತದೆ. "ಬಾಲ ಅಂದರೆ ನೀವೇನಾ? ನಿಮ್ಮ ಮೇಲೆ ಕಂಪ್ಲೇಂಟ್ ಬಂದಿದೆ" ಎಂದು ಹೇಳಿದಾಗ ಬಾಲಗೆ ಶಾಕ್ ಆಗುತ್ತದೆ. ನಾನೇನು ತಪ್ಪು ಮಾಡಿದೆ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ದಿವ್ಯಾ ಮನೆಯಿಂದ ಹೊರಗೆ ಬರುತ್ತಾಳೆ. "ನಾನೇ ಕಂಪ್ಲೇಂಟ್ ಕೊಟ್ಟಿದ್ದು. ನನ್ನ ಕಣ್ಣೆದುರಿಗೆ ನನ್ನ ಗಂಡ ಇನ್ನೊಂದು ಮದುವೆ ಆಗುತ್ತಿದ್ದಾರೆ" ಎಂದು ಬಹಳ ಬೇಸರದಿಂದ ಹೇಳುತ್ತಾಳೆ. ಇದನ್ನು ನೋಡಿದ ದಿವ್ಯಾ ತಾಯಿಗೆ ಬಹಳ ಕೋಪ ಬರುತ್ತದೆ.
ದಿವ್ಯಾ ಕೆನ್ನೆಗೆ ಬಾರಿಸಿದ ತಾಯಿ
"ಯಾಕೆ ಹೀಗೆ ಮಾಡಿದ್ದೀಯಾ? ಬಾಲ ನಿನ್ನ ಜೊತೆ ಇರಬೇಕಾದರೆ ಆತನಿಗೆ ಬಹಳ ತೊಂದರೆ ಕೊಡುತ್ತಿದ್ದೆ. ಆದರೆ ಇದೀಗ ಬೇರೆ ಜೀವನ ಕಟ್ಟಿಕೊಳ್ಳುತ್ತಿದ್ದಾನೆ. ಅದಕ್ಕೂ ಅಡ್ಡಗಾಲು ಹಾಕಿದ್ದೀಯಾ. ಯಾಕೆ ಹೀಗೆ ಮಾಡಿದೆ" ಎಂದು ಕೇಳುತ್ತಾರೆ. ಆದರೂ ದಿವ್ಯಾ ಮಾತ್ರ ನಾನು ಮಾಡಿದ್ದು ಸರಿ ಅಂದುಕೊಂಡು ಇರುತ್ತಾಳೆ. ಪೊಲೀಸ್ ದಿವ್ಯಾ ಬಳಿ "ನೀವು ಬರಬೇಕಾಗುತ್ತದೆ ಫೋನ್‌ನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಕಂಪ್ಲೇಂಟ್ ಕೊಡಬೇಕು" ಎಂದು ಹೇಳುತ್ತಾರೆ. ಇದನ್ನು ಕೇಳಿದ ದಿವ್ಯಾ ಪೊಲೀಸ್ ಸ್ಟೇಶನ್‌ಗೆ ಹೋಗುತ್ತಾರೆ.
ರುಕ್ಕುಗೆ ಸಮಾಧಾನ ಹೇಳೋರು ಯಾರು?
ರುಕ್ಕುಗೆ ಬಹಳ ಬೇಸರ ಆಗುತ್ತದೆ. ದಿವ್ಯಾ ಈ ರೀತಿ ನಡೆದುಕೊಳ್ಳುತ್ತಾರೆ ಎನ್ನುವ ಕನಿಷ್ಠ ಆಲೋಚನೆ ಕೂಡ ರುಕ್ಕುಗೆ ಇರುವುದಿಲ್ಲ. ಪೊಲೀಸ್ ಸ್ಟೇಶನ್‌ಗೆ ಹೋದಾಗ ಅಲ್ಲಿ ಇದ್ದಿದ್ದು ಸತ್ಯಾ. ಸತ್ಯಾಳನ್ನು ನೋಡಿ ದಿವ್ಯಾಗೆ ನಡುಕ ಶುರು ಆಗುತ್ತದೆ. ಸತ್ಯಾ ಕೊಂಚ ಜೋರಾಗಿಯೇ ದಿವ್ಯಾ ಬಳಿ ಕೇಳುತ್ತಾಳೆ. "ಯಾಕೆ ನೀನು ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಿಯಾ?" ಎಂದಾಗ, ಸತ್ಯಾ ಡ್ಯೂಟಿ ಮೇಲಿರುವಾಗಲೇ ಏಕವಚನದಲ್ಲಿ ನಿಂದನೆ ಮಾಡುತ್ತಾಳೆ.

ಸತ್ಯಾ ಜೊತೆ ದಿವ್ಯಾ ಕಿತ್ತಾಟ
"ಯಾರ ಜೊತೆ ಈ ರೀತಿ ಮಾತನಾಡುತ್ತಿಯಾ? ರೆಸ್ಪೆಕ್ಟ್ ಕೊಟ್ಟು ಮಾತನಾಡಿ" ಎಂದು ಹೇಳುತ್ತಾರೆ. ಸತ್ಯಾ ಆಗ ಕಾನ್‌ಸ್ಟೆಬಲ್ ಬಳಿ ಹೇಳುತ್ತಾರೆ. "ಇವರ ಮೇಲೆ ಎರಡು ಕೇಸ್ ದಾಖಲಿಸಿ. ಇನ್ಮೇಲೆ ಈಕೆ ಸುಳ್ಳು ಹೇಳಬಾರದು" ಎಂದು ಖಡಕ್ ಆಗಿ ಹೇಳುತ್ತಾರೆ. ಈಗ ದಿವ್ಯಾ ಮುಂದೇನು ಮಾಡುತ್ತಾಳೆ ಎಂಬುವುದೇ ಕುತೂಹಲ.


Click it and Unblock the Notifications











