Sathya:ಬಯಲಾಯಿತು ಕೀರ್ತನಾ, ದಿವ್ಯಾ ಒಳಸಂಚು; ಕುಸಿದ ಹೋದ ಸತ್ಯ
ದಿವ್ಯ ಹಾಗೂ ಕೀರ್ತನ ಬದಲಾಗಿದ್ದಾರೆ ಎಂದು ನಂಬುವುದಕ್ಕೂ ಅಸಾಧ್ಯ. ಆದರೆ, ಆ ರೀತಿ ಅವರಿಬ್ಬರು ನಾಟಕ ಮಾಡುತ್ತಿರುತ್ತಾರೆ. ಎಲ್ಲರನ್ನು ನಂಬಿಸಿ ಆ ಬಳಿಕ ಕುತ್ತಿಗೆ ಕುಯ್ದು ಬಿಡೋಣ ಎನ್ನುವುದೇ ದಿವ್ಯಾ ಹಾಗೂ ಕೀರ್ತನಾ ಸಂಚು, ಆದರೆ ಇದಕ್ಕೆಲ್ಲಾ ಸತ್ಯ ಬಿಡುತ್ತಾಳಾ ಎನ್ನುವುದೇ ಅಭಿಮಾನಿಗಳಲ್ಲಿ ಮೂಡಿದೆ ಯಕ್ಷಪ್ರಶ್ನೆ.
ಇದೀಗ ಸತ್ಯ ಗರ್ಭಿಣಿಯಾಗಿದ್ದಾಳೆ. ಏನೇನೋ ತಿನ್ನಬೇಕು ಎನ್ನುವ ಬಯಕೆ ಕೂಡ ಆಕೆಗೆ ಆಗುತ್ತದೆ. ಮನೆಯವರೆಲ್ಲರೂ ಸೇರಿ ಆ ಬಯಕೆಯನ್ನು ಈಡೇರಿಸುತ್ತಿರುತ್ತಾರೆ. ಇತ್ತ ಕಾರ್ತಿಕ್ ಹಾಗೂ ಸತ್ಯ ಮಾತನಾಡುತ್ತಿರುವಾಗ, ತನ್ನ ತಲೆಗಿರುವ ಆಸೆಯನ್ನು ಸಣ್ಣ ಸಣ್ಣ ಬಯಕೆಯನ್ನು ಗಂಡನ ಬಳಿ ಹೇಳುತ್ತಿರುತ್ತಾಳೆ. ಆಗ ಕಾರ್ತಿಕ್ "ನಿನಗಾಗಿ ನಾನು ಕಷ್ಟಪಟ್ಟು ಈ ಮಾವಿನ ಕಾಯಿಯನ್ನು ತಂದಿದ್ದೇನೆ" ಎಂದು ಮಾವಿನ ಕಾಯಿಯನ್ನು ಸತ್ಯಗೆ ತೋರಿಸುತ್ತಾನೆ. ಇದನ್ನು ನೋಡಿದಂತಹ ಸತ್ಯ ಮಾತ್ರ ಬಹಳ ಖುಷಿ ಪಡುತ್ತಾಳೆ. ಆಕೆಗೆ ಸ್ವರ್ಗ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಆ ಹುಳಿ ಮಾವಿನ ಕಾಯಿಯನ್ನು ನುಡಿ ಸತ್ಯಾಗೆ ಬಹಳ ಖುಷಿಯಾಗುತ್ತದೆ. ಹಾಗೆಯೆ ಆ ಮಾವಿನ ಕಾಯಿಯನ್ನು ಎತ್ತಿಕೊಂಡು ಕೈ ಯಲ್ಲಿ ಹಿಡಿದು ಕಾರ್ತಿಕ್ ಬಳಿ ಉಪ್ಪು ಖಾರ ತರಿಸಿ ತಿನ್ನುತ್ತಾಳೆ.

ಕಾರ್ತಿಕ್‌ಗೆ ಸತ್ಯ ಪುಟ್ಟ ಮಗುವಿನ ಹಾಗೆ ಅನ್ನಿಸುತ್ತಾಳೆ. ಯಾಕೆಂದರೆ ಸತ್ಯ ಆ ರೀತಿ ಚಿಕ್ಕ ಮಕ್ಕಳ ಹಾಗೆ ನಡೆದುಕೊಳ್ಳುತ್ತಾಳೆ. ಇನ್ನೂ ದಿವ್ಯಾಳನ್ನು ಕರೆದುಕೊಂಡು ಹೋಗಲು ಬಾಲ ಸೀತಮ್ಮನ ಮನೆಗೆ ಬರುತ್ತಾನೆ. ದಿವ್ಯಾ ಬದಲಾಗಿದ್ದಾಳೆ ಎಂದು ನಂಬಿದ ಸೀತಾ ಮಾತ್ರ ದಿವ್ಯಾಳನ್ನು ಕ್ಷಮಿಸಿದ್ದೇನೆ ಎಂದು ಹೇಳುತ್ತಾರೆ. ಬಾಲ ಹೇಳುತ್ತಾನೆ. ನಾನು ದಿವ್ಯಳನ್ನ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಸತ್ಯ ಹೇಳುತ್ತಾಳೆ ಅಕ್ಕ ಇಲ್ಲಿಯೇ ಇದ್ದರೆ ನಮಗೆ ಬಹಳ ಖುಷಿ ಆಗುತ್ತದೆ. ಆಕೆ ಇಲ್ಲಿಯೇ ಇರಲಿ ಎಂದು ಹೇಳುತ್ತಾರೆ.
ದಿವ್ಯಾ ಮಾತು ಕೇಳಿ ಖುಷಿಪಟ್ಟ ಕಾರ್ತಿಕ್
ಇದನ್ನು ಕೇಳಿದ ದಿವ್ಯಾ ನಾನು ಈಗ ಮನೆಗೆ ಹೋಗದೆ ಇದ್ದರೆ ಬಹಳ ಕಷ್ಟ ಆಗುತ್ತದೆ. ನಿನ್ನನ್ನು ನೋಡಿಕೊಳ್ಳಲು ಅಮ್ಮ ಹಾಗೂ ಅತ್ತೆಯನ್ನು ಕರೆಸುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸತ್ಯ ಕೊನೆಗೆ ಆಯಿತು ಎಂದು ಹೇಳಿ ಅಕ್ಕನಿಗೆ ಬಾಗಿನ ಕೊಡಲು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ದಿವ್ಯಾ ಕೂಡ ಬೆಡ್‌ರೂಮ್ ಬಳಿ ಹೋಗುತ್ತಾಳೆ .

ಕೀರ್ತನಾ ಮಾತು ಕೇಳಿ ದಿವ್ಯಾ ಶಾಕ್
ಆಗ ಅಲ್ಲಿಗೆ ಬಂದ ಕೀರ್ತನಾ ಮೆತ್ತಗೆ ದಿವ್ಯಾ ಬಳಿಗೆ ಹೇಳುತ್ತಾಳೆ. ಸತ್ಯ ಬಗ್ಗೆ ನೀನು ಇಲ್ಲ ಸಲ್ಲದ ಮಾತನ್ನು ಆಡಿದೆ. ಆದರೆ, ಇದೀಗ ಏನು ಮಾಡಲಾಗದ ಸ್ಥಿತಿಯಲ್ಲಿ ಇದ್ದೀಯಾ? ಎಂದಾಗ ದಿವ್ಯಾಗೆ ಆಶ್ಚರ್ಯ ಆಗುತ್ತದೆ. ದಿವ್ಯಾಗೆ ಶಾಕ್ ಆಗುತ್ತದೆ. ಇದೇನಪ್ಪಾ ಕೀರ್ತನ ಬದಲಾಗಿದ್ದಾಳೆ ಎಂದು ಅಂದುಕೊಂಡರೆ ಆಕೆ ಬದಲಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ದಿಟ್ಟಿಸಿ ಕೀರ್ತನಾ ಮುಖ ನೋಡುತ್ತಾಳೆ.
ಅಕ್ಕನ ಮಾತಿಗೆ ಮನದಲ್ಲಿ ಅತ್ತ ತಂಗಿ
"ನಾನು ಬದಲಾದೆ ಅಂದುಕೊಂಡಿಯಾ ಖಂಡಿತ ಇಲ್ಲ. ನಾವು ಒಳ್ಳೆಯವರು ಆಗಿದ್ದರೆ ಮಾತ್ರ ಇಲ್ಲಿ ನಾವು ಅಂದುಕೊಂಡ ಹಾಗೆ ನಡೆದುಕೊಳ್ಳಬಹುದು. ಅದಕ್ಕೆ ಈ ದಾರಿ ಹಿಡಿದಿದ್ದೇನೆ" ಎಂದು ಹೇಳುತ್ತಾಳೆ. ಆಕೆಯ ಮಾತಿಗೆ ದಿವ್ಯಾ ಏನು ಹೇಳದೆ ಸುಮ್ಮನಾಗುತ್ತಾಳೆ. ಹಾಗೆಯೇ ಕೊಂಚ ಜೋರಾಗಿಯೇ ಸತ್ಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. "ನೀನು ಬದಲಾಗಿದ್ದಿ ಅಂದುಕೊಂಡು ಇಲ್ಲಿಂದ ನಾನು ಹೊರಟೆ. ಸತ್ಯ ಮೇಲೆ ನನಗೆ ಸ್ವಲ್ಪ ಕೂಡ ಕೋಪ ಕಡಿಮೆ ಆಗಿಲ್ಲ. ಚಿಕ್ಕ ವಯಸ್ಸಿನಿಂದಲೂ ಆಕೆಯನ್ನು ನಾನು ದ್ವೇಷ ಮಾಡುತ್ತಲೇ ಬಂದಿದ್ದೇನೆ. ಈಗಲೂ ಮಾಡುತ್ತಿದ್ದೇನೆ" ಎಂದಾಗ ಸತ್ಯಗೆ ಅವರಿಬ್ಬರ ಮಾತುಕತೆ ಕೇಳಿ ಬಹಳ ಬೇಸರ ಆಗುತ್ತದೆ. ಅವರಿಬ್ಬರೂ ಬದಲಾಗಿದ್ದಾರೆಂದು ತಿಳಿದು ಸತ್ಯ ಬಹಳ ಸಂತಸ ಪಟ್ಟಿದ್ದಳು.


Click it and Unblock the Notifications











