ಸತ್ಯ ಧಾರಾವಾಹಿಯ 'ಊರ್ಮಿಳಾ' ಗರ್ಭಿಣಿಯಾ? ಫೋಟೋ ನೋಡಿ ಶಾಕ್ ಆದ ವೀಕ್ಷಕರು!
ಸತ್ಯ ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ನಟಿ ಊರ್ಮಿಳಾ ಪಾತ್ರಧಾರಿ ಶಾಲಿನಿ. ಶಾಲಿನಿ ಸುಮಾರು 20 ವರುಷಗಳಿಂದ ಚಿತ್ರರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಇವರ ನಟನೆ ನೋಡಿ ಇವರಿಗೆ ಅನೇಕ ಜನ ಫ್ಯಾನ್ಸ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಅಷ್ಟು ಮುಗ್ಧತೆಯಿಂದ ಕೂಡಿದ ಪಾತ್ರ. ಕಣ್ಣೆದುರಿಗೆ ಗಂಡನಿಂದ ಮೋಸ ಆಗುತ್ತಾ ಇದ್ದರೂ ಊರ್ಮಿಳಾಗೆ ಅದರ ಪರಿವೆ ಇಲ್ಲ.
ತನ್ನ ಗಂಡ ಶ್ರೀ ರಾಮ ಚಂದ್ರ ಎಂದು ಈಗಲೂ ಕೂಡ ಅಂದುಕೊಂಡಿದ್ದಾಳೆ ಈಕೆ. ಇನ್ನು ಶಾಲಿನಿ ಫೋಟೋವೊಂದು ವೈರಲ್ ಆಗುತ್ತಿದೆ. ಶಾಲಿನಿ ಗರ್ಭಿಣಿ ಆಗಿದ್ದಾರಾ ಎನ್ನುವ ಗುಸು ಗುಸು ಪಿಸು ಪಿಸು ಕೇಳಿ ಬರುತ್ತಿದೆ. ಹೌದು ಶಾಲಿನಿ ಅವರು ಗರ್ಭಿಣಿ ಆಗಿ ಫೋಟೋಶೂಟ್ ಮಾಡಿಸಿಕೊಂಡು ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಅರೆರೆ ನಿನ್ನೆ ಮೊನ್ನೆ ಸತ್ಯ ಧಾರಾವಾಹಿಯಲ್ಲಿ ನಾವೆಲ್ಲ ಶಾಲಿನಿ ಅವರನ್ನು ನೋಡಿದ್ದೇವು. ದಿಢೀರ್ ಆಗಿ ಗರ್ಭಿಣಿ ಆಗಿರುವ ಫೋಟೋ ಹಂಚಿಕೊಂಡು ಇದ್ದಾರಲ್ಲ ಎಂದು ಆಶ್ಚರ್ಯ ವ್ಯಕ್ತ ಡಿಸುತ್ತಾ ಇದ್ದಾರೆ. ಆದರೆ ಇದಕ್ಕೆಲ್ಲ ಉತ್ತರ ಅವರೇ ನೀಡಿದ್ದಾರೆ. ಶಾಲಿನಿ ಅವರು ಗರ್ಭಿಣಿ ಅಲ್ಲ ಆಕೆ ಧಾರಾವಾಹಿಯಲ್ಲಿ ಗರ್ಭಿಣಿ ಇರುವ ಹಾಗೆ ಪಾತ್ರ ಮಾಡಲು ಇರುವ ಕಾರಣ ಅವರು ಈ ರೀತಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಫೋಟೋ ನೋಡಿ ಅಭಿಮಾನಿಗಳು ಶಾಕ್
ಈ ಫೋಟೋಶೂಟ್ ಮಾಡಿ ಹಲವು ತಿಂಗಳು ಕಾಲ ಆಗಿದೆ. ಆದರೆ ಆ ಫೋಟೋ ಇದೀಗ ವೈರಲ್ ಆಗುತ್ತಿದೆ. ಇನ್ನು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಯಶೋಧೆಯಾಗಿ ನಿಮ್ಮ ಮುಂದೆ. ಬ್ರಾಹ್ಮೀನ್ಸ್ ಕೆಫೆ ಧಾರಾವಾಹಿ ಸಿರಿ ಕನ್ನಡ ವಾಹಿನಿಯಲ್ಲಿ ನಿಮ್ಮ ಮುಂದೆ ಪ್ರತಿದಿನ ರಾತ್ರಿ 9.30ಕ್ಕೆ ಬರಲಿದೆ' ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಸುಮ್ಮನಿರುವ ಶಾಲಿನಿ
ಶಾಲಿನಿ ಹಾಕಿದ ಕ್ಯಾಪ್ಶನ್ ನೋಡಿ ಹಲವರು ಅದನ್ನು ಒಪ್ಪಿಕೊಳ್ಳಲು ಸಾಧ್ಯ ಆಗದೆ ಶಾಲಿನಿ ಅವರು ಗರ್ಭಿಣಿ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಾ ಇದ್ದಾರೆ. ಫ್ಯಾಷನ್ ಡಿಸೈನರ್ ಆಗಿರುವ ಶಾಲಿನಿ 'ಥ್ಯಾಂಕ್ಯೂ ಸರ್' ಧಾರಾವಾಹಿ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. ಇದೀಗ ಸತ್ಯ ಧಾರವಾಹಿಯಿಂದ ಶಾಲಿನಿ ಸಾಕಷ್ಟು ಖ್ಯಾತಿ ಕೂಡ ಸಿಕ್ಕಿದೆ . ಆಕೆಯ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ
ಇನ್ನು ಕೆಲವರು ಟಿವಿಯಲ್ಲಿ ಗರ್ಭಿಣಿ, ರಿಯಲ್ ಲೈಫ್ ನಲ್ಲಿ ಮಾಡರ್ನ್ ಆಗಿದ್ದಿರಾ ಎಂದು ಹೇಳಿದ್ದಾರೆ. ಶಾಲಿನಿ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಆಗಾಗ ಫೋಟೋಗಳನ್ನ ಅಪ್ಲೋಡ್ ಮಾಡಿ ಎಲ್ಲರ ಮನಸ್ಸಿಗೆ ಖುಷಿ ನೀಡುತ್ತಾ ಇರುತ್ತಾರೆ. ಹಾಗೆಯೇ ಸದಾ ಹಸನ್ಮುಖಿ ಆಗಿರುವ ನಟಿ ನೋಡಲು ಬಲು ಸುಂದರ . ಈಕೆಯ ನೋಟಕ್ಕೆ ಅನೇಕ ಜನರು ಫಿದಾ ಆಗಿ ಇರುವುದಂತೂ ಸತ್ಯ. ಅನೇಕ ವರುಷಗಳಿಂದ ಸಿನಿಮಾ ರಂಗದಲ್ಲಿ ಇದ್ದು ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ನಟಿ ಶಾಲಿನಿ.


Click it and Unblock the Notifications











