Sathya:ಪೊಲೀಸ್ ಸ್ಟೇಶನ್‌ಗೆ ಮತ್ತೆ ಖಡಕ್ ಎಂಟ್ರಿ ಕೊಟ್ಟ ಸತ್ಯ; ದೇವೇಂದ್ರನ ಮಸಲತ್ತು ಮತ್ತೆ ಠುಸ್

By ಪೂರ್ವ

ಸತ್ಯ ಹಾಗೂ ಸೀತಾ ಸೇರಿಕೊಂಡು ಸಾಮಾಜಿಕ ಜಾಲತಾಣದಿಂದ ಹಣ ದೋಚುತ್ತಿರುವವರನ್ನು ಕಂಡು ಹಿಡಿದು ಅವರಿಗೆ ಬುದ್ದಿ ಕಲಿಸಿ ಕಳ್ಳರನ್ನು ಲಾಕಪ್‌ಗೆ ಹಾಕಿದ್ದಾರೆ. ಇದರಿಂದ ಸತ್ಯ ಹಾಗೂ ಸೀತಾಗೆ ಎಲ್ಲರೂ ಭೇಷ್ ಎಂದಿದ್ದಾರೆ. ಬಾಲ ಕಳೆದುಕೊಂಡ ಹಣ ಹಾಗೆಯೇ ಅನೇಕ ಜನರು ಹಣ ಕಳೆದುಕೊಂಡಿದ್ದರು. ಅವರಿಗೆಲ್ಲ ಅವರವರ ಹಣ ಮರಳಿ ಸಿಕ್ಕಾಗ ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಸತ್ಯ ಮರಳಿ ಕೆಲಸ ಸೇರಿಕೊಂಡಿದ್ದು ಥ್ರಿಲ್ ಕೊಟ್ಟಿದೆ.

ಸತ್ಯ ಜೊತೆಗೆ ಮುನಿಸ್ವಾಮಿ ಹಾಗೂ ಮತ್ತೊಬ್ಬ ಸ್ನೇಹಿತ ಕೂಡ ಕೆಲಸಕ್ಕೆ ಜಾಯಿನ್ ಆಗುತ್ತಾರೆ. ಎಲ್ಲರನ್ನೂ ನೋಡಿ ಸತ್ಯ ಬಹಳ ಖುಷಿ ಪಡುತ್ತಾರೆ. ಮುನಿಸ್ವಾಮಿಗೆ ಅವರ ಮಗಳು ಉಷಾ ಬಗ್ಗೆ ಕೇಳುತ್ತಾಳೆ. "ಮುನಿಸ್ವಾಮಿ ಅವರೇ ನಿಮ್ಮ ಮಗಳು ಉಷಾ ಹೇಗಿದ್ದಾರೆ? ಚೆನ್ನಾಗಿದ್ದಾರಾ? ಈಗ ಏನು ಮಾಡುತ್ತಿದ್ದಾರೆ?" ಎಂದಾಗ ಮುನಿಸ್ವಾಮಿ ಬಹಳ ಖುಷಿಯಿಂದ "ನನ್ನ ಮಗಳು ನನಗೆ ವಾಪಸ್ ಸಿಗುತ್ತಾಳೆ ಎನ್ನುವ ಭರವಸೆ ನನಗೆ ಇರಲಿಲ್ಲ. ಮನೆಯಿಂದ ಹೊರಗೆ ಬರಲು ಕೂಡ ಬಹಳ ಮುಜುಗರ ಪಡುತ್ತಿದ್ದಳು ಆಕೆ" ಎಂದು ಮಾಹಿತಿ ಕೊಟ್ಟಿದ್ದಾರೆ.

Sathya Kannada serial July 15th episode update

"ಆಕೆಗೆ ಬಹಳಷ್ಟು ಮನಸ್ಸಿಗೆ ಘಾಸಿ ಆಗಿತ್ತು ನೀವು ಬಂದು ನಮ್ಮ ವಠಾರದ ಜನರ ಜೊತೆ ಮಾತನಾಡಿದ ಬಳಿಕ ಆಕೆ ಕೊಂಚ ಚೇತರಿಕೆ ಕಂಡಿದ್ದಾರೆ. ಎಲ್ಲರ ಜೊತೆಗೆ ಕೂಡ ಒಳ್ಳೆಯ ಮಾತುಗಳನ್ನು ಆಡುತ್ತಾಳೆ. ಇದೀಗ ಹಿಂದೆ ಇದ್ದ ಹಾಗೆಯೇ ಬಹಳ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು." ಎಂದು ಮುನಿಸ್ವಾಮಿ ಹೇಳಿದಾಗ ಸತ್ಯ ಕೂಡ ಖುಷಿ ಪಡುತ್ತಾರೆ. ಹಾಗೆಯೇ "ಮುನಿಸ್ವಾಮಿ ಅವರೇ, ನೀವು ನನ್ನನ್ನು ಹಾಡಿ ಹೊಗಳಿದರೆ ನಿಮಗೆ ಖಂಡಿತ ಪ್ರಮೋಷನ್ ಸಿಗುವುದಿಲ್ಲ" ಎಂದಾಗ ಮುನಿಸ್ವಾಮಿ "ನಗುತ್ತಾ ಪ್ರಮೋಷನ್ ಎಲ್ಲಾ ಎನು ಬೇಡ. ನಿಮ್ಮ ಜೊತೆ ಕೆಲಸ ಮಾಡಿದ್ದೆ ನನಗೆ ಬಹಳ ದೊಡ್ಡ ಪ್ರಮೋಷನ್" ಎಂದು ಹೇಳುತ್ತಾರೆ.

ಫಲಿಸದ ದೇವೇಂದ್ರನ ಮಸಲತ್ತು

ದೇವೇಂದ್ರ ಕುತಂತ್ರದಿಂದಾಗಿ ಸತ್ಯಗೆ ಇನ್ನಷ್ಟು ಗಂಡಾಂತರ ಕಾದಿದೆ ಎಂದು ಆಕೆಯ ಡಿಪಾರ್ಟ್ಮೆಂಟ್‌ನಲ್ಲಿ ಇರುವ ಪೊಲೀಸ್ ಒಬ್ಬರು ಹೇಳುತ್ತಾರೆ. ಆದರೆ, ಸತ್ಯ ಮಾತ್ರ ಸುಮ್ಮನೆ ಇರುತ್ತಾಳೆ. ಇನ್ನೂ ದಿವ್ಯಾ ದಿನೇ ದಿನೇ ಬದಲಾಗುತ್ತಿರುವುದನ್ನು ನೋಡಿದ ಬಾಲ ಹಾಗೂ ರುಕ್ಕುಗೆ ಶಾಕ್ ಆಗುತ್ತದೆ. ಈಕೆ ನಮ್ಮ ದಿವ್ಯಾನ ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾಳೆ. ಬಾಲ, ರುಕ್ಕುವನ್ನು ಬಹಳ ಮೆಚ್ಚಿಕೊಂಡಿದ್ದಾನೆ ಎಂದು ತಪ್ಪು ತಿಳಿದ ದಿವ್ಯಾಗೆ ಬಾಲ ನನಗೆ ಬೇಕು. ರುಕ್ಕು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಮನಸ್ಸಿನಲ್ಲಿಯೇ ಸ್ಕೆಚ್ ಹಾಕಿದ್ದಾಳೆ.

Sathya Kannada serial July 15th episode update

ಬಾಲನನ್ನು ಪಡೆದುಕೊಳ್ಳಲು ಬದಲಾದ ದಿವ್ಯಾ

ಬಾಲನನ್ನು ಪಡೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ರುಕ್ಕುವನ್ನು ಕೊಲೆ ಮಾಡಲು ಹೇಸುವವಳು ಅಲ್ಲ. ಅಂತಹದರಲ್ಲಿ ರುಕ್ಕುಗೆ ಆಶ್ಚರ್ಯ ಆಗಿ ಬಿಟ್ಟಿದೆ. ಈ ಮಟ್ಟಿಗೆ ದಿವ್ಯಾ ಬದಲಾಗಿದ್ದಾಳೆ ಎಂದು ಆಕೆಗೆ ನಂಬಲು ಸಾಧ್ಯ ಆಗುತ್ತಿಲ್ಲ. ಇನ್ನೂ ಗಿರಿಜಮ್ಮ ಹಾಗೂ ಜಾನಕಿ ಮಾತ್ರ ಇವಳೇನಾ ನಮ್ಮ ಸತ್ಯ ಎಂದು ಹೇಳುವ ಮಟ್ಟಿಗೆ ಬದಲಾಗಿದ್ದಾಳೆ.

ದಿವ್ಯಾ ನಡವಳಿಕೆ ಗಮನಿಸುತ್ತಿರುವ ಬಾಲ

ಬಾಲ ಹಾಗೂ ರುಕ್ಕು ಇಬ್ಬರೂ ದಿವ್ಯಾ ಮಾಡುತ್ತಿರುವ ಪ್ರತಿಯೊಂದು ಕೆಲಸವನ್ನೂ ಆಲಿಸುತ್ತಿದ್ದಾಳೆ. ಆಕೆಗೆ ಬಾಲನನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲು ಬೇಕು ಎನ್ನುವ ಆಸೆ. ಬಾಲ ನನ್ನನ್ನು ಬಿಟ್ಟು ಎಲ್ಲಿಗೆ ಕೂಡ ಹೋಗಬಾರದು. ನನ್ನ ಜೊತೆಗೆ ಇರಬೇಕು ಎನ್ನುವ ಆಸೆ ಆಕೆಗೆ ಮೂಡುತ್ತದೆ.

More from Filmibeat

English summary
Sathya Kannada serial July 15th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X