Sathya: ದಿವ್ಯಾಳನ್ನು ಪರೀಕ್ಷೆ ಮಾಡುತ್ತಿರೋ ಗಿರಿಜಮ್ಮ; ರುಕ್ಕು ಮುಂದೆ ದಿವ್ಯಾ ಗುಣಗಾನ, ಮುಂದೇನಾಯ್ತು?

By ಪೂರ್ವ

ದಿವ್ಯಾ ನಿಜವಾಗಿಯೂ ಬದಲಾಗಿದ್ದಾಳಾ? ಅಥವಾ ಬದಲಾಗಿರುವ ಹಾಗೆ ನಟನೆ ಮಾಡುತ್ತಿದ್ದಾಳಾ? ಅನ್ನೋ ಪ್ರಶ್ನೆ ರುಕ್ಕು ಹಾಗೂ ಗಿರಿಜಮ್ಮನಿಗೆ ಮೂಡಿದೆ. ಅದಕ್ಕಾಗಿ ಗಿರಿಜಮ್ಮನಿಗೆ ಒಂದು ಟೆಸ್ಟ್ ಇಡುತ್ತಾರೆ. ಆ ಟೆಸ್ಟ್‌ನಲ್ಲಿ ದಿವ್ಯಾ ಪಾಸಾಗುತ್ತಾಳಾ? ಅಥವಾ ಫೈಲ್ ಆಗುತ್ತಾಳಾ? ಎಲ್ಲಾದರೂ ಆಕೆ ತಿರುಗಿ ಬಿದ್ದರೆ, ಆಕೆ ನಾಟಕ ಆಡುತ್ತಿರೋದು ಸ್ಪಷ್ಟವಾಗಿ ನಮಗೆ ತಿಳಿಯುತ್ತದೆ ಎಂದು ರುಕ್ಕುಗೆ ಹೇಳುತ್ತಾರೆ. ಹೀಗಾಗಿ ಬಜ್ಜಿ ಕಾಯಿಸಲು ಹಿಟ್ಟು ಸರಿ ಸಮವಾಗಿ ತೆಗೆದು ಅದಕ್ಕೆ ಬೇಕಾದಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಿಸಿ ಮ್ಯಾರಿನೆಟ್ ಮಾಡಲು ಇಡುತ್ತಾರೆ.

ಇದನ್ನು ನೋಡಿದ ರುಕ್ಕು ಹಾಗೂ ಗಿರಿಜಾ ಆ ಹಿಟ್ಟಿಗೆ ಬಹಳ ಉಪ್ಪು ಹಾಕಿ ಮಿಕ್ಸ್ ಮಾಡುತ್ತಾರೆ. ಆದರೆ, ಈ ವಿಚಾರ ದಿವ್ಯಾಗೆ ತಿಳಿದಿರುವುದಿಲ್ಲ. ಇನ್ನೂ ಅಂಗಡಿಗೆ ಎಲ್ಲರೂ ಕಸ್ಟಮರ್ಸ್ ಬರುತ್ತಾರೆ. ದಿವ್ಯಾ ಬಿಸಿ ಬಿಸಿಯಾಗಿ ಬಜ್ಜಿ ಹಾಕಿ ಕೊಡುತ್ತಾಳೆ. ಆದರೆ ಅದನ್ನು ತಿಂದ ಜನಗಳು ಮಾತ್ರ ದಿವ್ಯಾಗೆ ಬಯ್ಯಲು ಶುರು ಮಾಡುತ್ತಾರೆ. ಯಾಕೆ ಇಷ್ಟು ಉಪ್ಪು ಹಾಕಿದ್ದಿರಾ? ನಮ್ಮನ್ನೇನು ನೀವು ಸಾಯಿಸಬೇಕು ಎಂದಿದ್ದಿರಾ? ಯಾಕೆ ನಿಮಗೆ ಇಷ್ಟು ಕೆಟ್ಟ ಮನಸ್ಸು ಎಂದು ಜೋರಾಗಿ ಹೇಳುತ್ತಾರೆ.

Sathya Kannada serial July 17th episode update

ಈ ಮಾತನ್ನು ಕೇಳಿದ ಬಳಿಕ ಆಕೆಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತೆ. ನಾನು ಸರಿಯಾಗಿ ಉಪ್ಪು ಹಾಕಿದ್ದೇನೆ. ಲೆಕ್ಕಕ್ಕಿಂತ ಉಪ್ಪು ಜಾಸ್ತಿ ಹಾಕಿಲ್ಲ ಎಂದು ವಾಡಿಸಿದಾಗ ಬಂದ ಗಿರಾಕಿಗಳು ಹಾಗಾದರೆ ನೀವು ಇದನ್ನು ಟೇಸ್ಟ್ ಮಾಡಿ ಹೇಳಿ ಆ ಮೇಲೆ ಮಾತನಾಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ದಿವ್ಯಾ ತಾನು ಮಾಡಿದ ಬಜ್ಜಿಯ ಟೇಸ್ಟ್ ನೋಡುತ್ತಾಳೆ. ಆಗ ಆಕೆಗೆ ಅದರಲ್ಲಿ ಉಪ್ಪು ಹೆಚ್ಚಾಗಿದ್ದು ಗೊತ್ತಾಗುತ್ತೆ.

ತಪ್ಪಿತಸ್ಥ ಸ್ಥಾನದಲ್ಲಿ ನಿಂತ ದಿವ್ಯಾ

ಇದನ್ನು ನೋಡಿ ದಿವ್ಯಾ ಏನು ಹೇಳಬೇಕು ಎಂದು ತಿಳಿಯದೇ ಸ್ತಬ್ಧವಾಯಿತು ನಿಂತುಕೊಳ್ಳುತ್ತಾಳೆ. ಇನ್ನೂ ಗಲಾಟೆ ಕೇಳಿ ಮನೆಯ ಒಳಗೆ ಇದ್ದ ಬಾಲ ಮನೆಯ ಹೊರಗೆ ಬರುತ್ತಾನೆ. ಅವರ ಜೊತೆ ಗಿರಿಜಮ್ಮ ಹಾಗೂ ರುಕ್ಕು ಕೂಡ ಹೊರಗೆ ಬರುತ್ತಾಳೆ. ರುಕ್ಕುವನ್ನು ನೋಡಿದ ದಿವ್ಯಾ ಮಾತ್ರ ಏನು ಪ್ರತಿಕ್ರಿಯೆ ಕೊಡುವುದಿಲ್ಲ. ಯಾಕೆಂದರೆ, ಆಕೆಗೆ ಬಜ್ಜಿಯಲ್ಲಿ ಹೇಗೆ ಇಷ್ಟೆಲ್ಲ ಉಪ್ಪು ಬಂತು ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತೆ.

ಬಾಲನ ಬಳಿ ಕಂಪ್ಲೇಂಟ್ ಹೇಳಿದ ಗ್ರಾಹಕರು

ಇನ್ನೂ ಗ್ರಾಹಕರು ಬಾಯಿಗೆ ಬಂದ ಹಾಗೆ ದಿವ್ಯಾಳನ್ನು ಬೈದರೆ, ದಿವ್ಯಾ ಸುಮ್ಮನೆ ನಿಂತಿರುತ್ತಾರೆ. ಆಕೆಗೆ ತಪ್ಪು ಮಾಡಿದೇ ಇದ್ದರೂ ಯಾರಾದರೂ ಬೈದರೆ ಬಹಳ ಬೇಸರ ಆಗುತ್ತದೆ. ಆದರೂ ಯಾರಿಗೂ ಒಂದೇ ಒಂದು ಮಾತು ಬೈದಿಲ್ಲ. ಸುಮ್ಮನೆ ನಿಂತು ಇರುತ್ತಾಳೆ. ಇನ್ನೂ ಬಾಲನಿಗೆ ಕೆಲವರು ಹೇಳುತ್ತಾರೆ. "ನೋಡಿ ಬಾಲಣ್ಣ. ನಾವು ನಿಮ್ಮ ಮೇಲಿನ ವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ನಾವು ಬಹಳಷ್ಟು ಸಲ ಬಜ್ಜಿ ತಿಂದು ಹೋಗಿದ್ದೇವೆ. ಆದರೆ, ಇಷ್ಟು ಕೆಟ್ಟದಾಗಿರುವ ಬಜ್ಜಿ ತಿಂದಿಲ್ಲ" ಎಂದಾಗ ಬಜ್ಜಿಯನ್ನು ಟೇಸ್ಟ್ ಮಾಡಲು ಬಾಲ ತೆಗೆದುಕೊಳ್ಳುತ್ತಾನೆ.

ದಿವ್ಯಾಗೆ ಮೇಲೆ ಕೂಗಾಡಿದ ಬಾಲ

ಬಾಲ ತಿಂದು ನೋಡಿದ ಬಜ್ಜಿಯಲ್ಲಿ ಉಪ್ಪಿ ಹೆಚ್ಚಿದೆ. ಇದನ್ನು ನೋಡಿದ ಆತ ದಿವ್ಯಾಳನ್ನು ಪ್ರಶ್ನೆ ಮಾಡುತ್ತಾನೆ. ದಿವ್ಯಾ, ಬಾಲನ ಮಾತಿಗೆ ಏನು ಮಾತನಾಡದೆ ಸುಮ್ಮನೆ ಇರುತ್ತಾರೆ. ಆದರೆ, ಇದನ್ನೆಲ್ಲ ಮರೆಯಿಂದ ನೋಡಿದ ಗಿರಿಜಮ್ಮ "ಇದು ಸತ್ಯನಾ ಅಥವಾ ಸುಳ್ಳಾ? ನನ್ನ ಕಣ್ಣನ್ನು ನಂಬಲು ಆಗುತ್ತಿಲ್ಲ. ದಿವ್ಯಾ ನಿಜವಾಗಲೂ ನನ್ನ ಮೊಮ್ಮಗಳ ಎನ್ನುವ ಫೀಲ್ ಆಗುತ್ತಿದೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ರುಕ್ಕು ಮುಖ ಮಾತ್ರ ಕೊಂಚ ಬಾಡಿ ಹೋಗುತ್ತದೆ. ಇನ್ನೂ ಸತ್ಯ ಮುಂದೆ ಸೀತಾ ಒಂದು ಬೇಡಿಕೆ ಇಟ್ಟಿದ್ದಾರೆ. "ಸತ್ಯ ಏನೆಲ್ಲ ಆಸೆಪಟ್ಟಳು. ಅದೆಲ್ಲ ನಿನಗೆ ಸಿಕ್ಕಿದೆ. ಆದರೆ, ನೀನು ನಮಗೆ ಉತ್ತಮ ಸ್ಥಾನವನ್ನು ನೀಡಬೇಕು" ಎಂದಾಗ ಸತ್ಯ ಅರ್ಥ ಆಗದೆ ವಾಪಸ್ ಏನೆಂದು ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಸೀತಾ "ನೀನು ನಮ್ಮನ್ನು ಅಜ್ಜ ಅಜ್ಜಿ ಹಾಗೆಯೇ ಕಾರ್ತಿಕ್‌ನನ್ನು ಯಾವಾಗ ತಂದೆ ಮಾಡುತ್ತೀಯಾ" ಎಂದು ಕೇಳಿದಾಗ, ಸತ್ಯ ಅದಕ್ಕೆ ಅಷ್ಟು ಸಮ್ಮತಿ ನೀಡುವುದಿಲ್ಲ. ಇದನ್ನು ನೋಡಿದ ಕಾರ್ತಿಕ್‌ಗೆ ಕೊಂಚ ಕೋಪ ಕೂಡ ಬರುತ್ತದೆ. "ನಾನು ಹೇಳಿದೆ ಅಲ್ವಾ ಅಮ್ಮ. ಆಕೆಗೆ ಇದೆಲ್ಲ ಇಷ್ಟ ಇಲ್ಲವೆಂದು. ನೀವು ಆಕೆಗೆ ಒತ್ತಾಯ ಮಾಡಬೇಡಿ" ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ.

More from Filmibeat

English summary
Sathya Kannada serial July 17th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X