ಕೊನೆಗೂ ಅಮೂಲ್ ಬೇಬಿ ಬಳಿ ಸಾರಿ ಕೇಳಿದ ಸತ್ಯ

By ಪೂರ್ವ

ಸತ್ಯ ಧಾರವಾಹಿ ಸಖತ್ ಆಗಿ ಮೂಡಿಬರುತ್ತಿದೆ. ರೌಡಿ ಬೇಬಿ ಜೊತೆ ಅಮೂಲ್ ಬೇಬಿನ ನೋಡಿದ ಜನ ಸಖತ್ ಖುಷಿಯಾಗಿದ್ದಾರೆ. ಇದೀಗ ಸತ್ಯ ಮನೆಗೆ ಕಾರ್ತಿಕ್ ಕುಡಿದು ಬಂದಿರುವುದನ್ನು ನೋಡಿದ ಸತ್ಯ ಕಾರ್ತಿಕ್ ಗೆ ಸರಿಯಾದ ಶಾಸ್ತಿ ಮಾಡಿದ್ದಾಳೆ.

ಬಳಿಕ ಅಮೂಲ್ ಬೇಬಿಯ ಪರದಾಟ ಕಂಡು ಕ್ಷಮೆ ಯಾಚಿಸಲು ಬರುತ್ತಾಳೆ. ಸತ್ಯ ಕಾರ್ತಿಕ್ ಗೆ ಮಜ್ಜಿಗೆ ತಂದು ಕೊಡುತ್ತಾಳೆ ಅದಕ್ಕೆ ಕಾರ್ತಿಕ್ ಕೋಪದಿಂದ ನನಗೆ ಬೇಡ ನಾನೇನು ಮಜ್ಜಿಗೆ ತಂದು ಕೊಡು ಎಂದು ಕೇಳಿದೆನಾ ಎಂದು ಹೇಳುತ್ತಾನೆ. ಅದಕ್ಕೆ ಸತ್ಯ ಹೇಳುತ್ತಾಳೆ ತಗೋ ಅಮೂಲ್ ಬೇಬಿ ಬೇಡ ಅನ್ನಬೇಡ ಎಂದಾಗ ಕಾರ್ತಿಕ್ ಹೇಳುತ್ತಾನೆ ಒಳಗೆ ಹೋಗಿ ಹೊರಗಡೆ ಬರಬೇಕಾದರೆ ಹೊಸ ನಾಟಕ ಶುರುವಾಗಿದೆ ಎಂದು ಹೇಳುತ್ತಾನೆ.

ಸತ್ಯಳನ್ನು ನಂಬದ ಅಮೂಲ್ ಬೇಬಿ

ಸತ್ಯಳನ್ನು ನಂಬದ ಅಮೂಲ್ ಬೇಬಿ

ಅದಕ್ಕೆ ಸತ್ಯ ಹೇಳುತ್ತಾಳೆ ನನಗೆ ಆಗ ವಿಷಯ ಗೊತ್ತಿರಲಿಲ್ಲ ಬೈದು ಬಿಟ್ಟೆ. ಈಗ ಅಮ್ಮ ಹೇಳಿದಳು ಅದಕ್ಕೆ ಸಾರಿ ಕೇಳೋಣ ಅಂತ ಬಂದೆ ಎಂದಳು ಅದಕ್ಕೆ ಕಾರ್ತಿಕ್ ಆಹಾಹಾ ಮಾಡೋದೆಲ್ಲ ಮಾಡಿ ಇದೀಗ ಸಾರಿ ಅಂತೀಯಾ ಎಂದಾಗ ಸತ್ಯ ಹೇಳುತ್ತಾಳೆ ಇದೀಗ ಸುಮ್ಮನೆ ಹೇಳಿದ್ದು ಕೇಳುತ್ತಿಯಾ ಸಾರಿ ನಾನು ಆಗಲೇ ಬೈದು ಬಿಟ್ಟೆ ತಪ್ಪಾಯಿತು ಎನ್ನುತ್ತಾಳೆ. ಅದಕ್ಕೆ ಕಾರ್ತಿಕ್ ಹೇಳುತ್ತಾನೆ ಅಬ್ಬಬ್ಬಾ ಡ್ರಾಮಾ ಕ್ವೀನ್ ಹೊಡೆದು ಬಿಟ್ಟಳು ನಾಟಕದ ಡೈಲಾಗ್. ಹಂಗಿದ್ದ ಪ್ಲೇಟನ್ನು ಹೆಂಗೆ ಚೇಂಜ್ ಮಾಡಿದ್ದಿ ಅಲ್ವಾ ತುಂಬಾ ಡೇಂಜರ್ ನೀನು ಇದನ್ನು ಯಾರಾದರೂ ಸಾರಿ ಅಂತಾರ ಎನ್ನುತ್ತಾನೆ.

ಮಂಡಿಯೂರಿ ಕ್ಷಮೆ ಕೇಳುವ ಸತ್ಯ

ಮಂಡಿಯೂರಿ ಕ್ಷಮೆ ಕೇಳುವ ಸತ್ಯ

ಸರಿ ನಿನಗೆ ಹೇಗೆ ಸಾರಿ ಹೇಳಬೇಕೋ ಹೇಳು ಹಾಗೆ ಕೇಳುತ್ತೇನೆ ಎನ್ನುತ್ತಾಳೆ. ಅದಕ್ಕೆ ಕಾರ್ತಿಕ್ ಮನದಲ್ಲಿ ಆಲೋಚಿಸುತ್ತಾನೆ ಕಾರ್ತಿಕ್ ನಿನಗೆ ಒಳ್ಳೆ ಚಾನ್ಸ್ ಸಿಕ್ಕಿದೆ ಮಿಸ್ ಮಾಡಿಕೊಳ್ಳಬೇಡ ಸರಿಯಾಗಿ ಸಾರಿ ಕೇಳಿಸು ಎಂದು ಯೋಚಿಸುತ್ತಾ ಹೇಳುತ್ತಾನೆ ಸರಿ ಮಂಡಿ ಮೇಲೆ ಕೂತು ಸಾರಿ ಕೇಳು ಎಂದಾಗ ಸತ್ಯ ಹೇಳುತ್ತಾಳೆ ಅತಿಯಾಗಲಿಲ್ವಾ ಅಂದಾಗ ಕಾರ್ತಿಕ್ ಹೇಳುತ್ತಾನೆ ನೀನು ಆಗ ತಣ್ಣೀರು ಹೊಯ್ದಿದ್ದು ಅತಿಯಾಗಲಿಲ್ವ ಎಂದಾಗ ಸತ್ಯ ಹೇಳುತ್ತಾಳೆ ಆಯ್ತು ಕೇಳುತ್ತೇನೆ ಎಂದು ಮಂಡಿಯೂರುತ್ತಾಳೆ.

ಗ್ಯಾರೇಜ್ ಉಳಿಸಿದ ಸತ್ಯ

ಗ್ಯಾರೇಜ್ ಉಳಿಸಿದ ಸತ್ಯ

ಬಳಿಕ, ಅಮೂಲ್ ಬೇಬಿ ಸಾರಿ ವಿಷಯ ಗೊತ್ತಿಲ್ಲದೆ ನಾನು ನಿನ್ನ ಮೇಲೆ ರೇಗಿ ಬಿಟ್ಟೆ ಇವತ್ತು ನೀನು ನನ್ನ ಮನೆ ಗ್ಯಾರೇಜ್ ಉಳಿಸಿದ್ದಲ್ಲ. ನಮ್ಮ ಮನೆ ಮಾನ ಮರ್ಯಾದೆ ಉಳಿಸಿದ್ದೀಯಾ ಎಂದಾಗ ಕಾರ್ತಿಕ್ ಹೇಳುತ್ತಾನೆ ಹಲೋ ಇದೆಲ್ಲ ನಿನಗಾಗಿ ಮಾಡಿಲ್ಲ ಅಜ್ಜಿ ಅತ್ತೆಗಾಗಿ ಮಾಡಿದ್ದು. ಈ ವಯಸ್ಸಲ್ಲಿ ಅವರು ಹಿಂಸೆ ಪಡಬಾರದು ಎಂದು ಮಾಡಿದ್ದೆ ಅಷ್ಟೇ ಎಂದಾಗ ಸತ್ಯ ಹೇಳುತ್ತಾಳೆ ಅವರು ನನ್ನ ಅಮ್ಮನೇ ಅಲ್ವಾ ಎಂದಾಗ ಸತ್ಯ ಹೇಳುತ್ತಾಳೆ ಇದಕ್ಕೆ ಕಾರ್ತಿಕ್ ಹೇಳುತ್ತಾನೆ ಸುಮ್ಮನೆ ಲಾಜಿಕ್ ತೆಗಿಬೇಡ ಅವರ ಜಾಗದಲ್ಲಿ ಬೇರೆಯವರು ಇದ್ದರೂ ಹೀಗೆ ಮಾಡುತ್ತಿದ್ದೆ ಎನ್ನುತ್ತಾನೆ.

ಕ್ಷಮೆ ಕೇಳುವ ಸತ್ಯ

ಕ್ಷಮೆ ಕೇಳುವ ಸತ್ಯ

ನಿನಗೆ ಇಷ್ಟು ಒಳ್ಳೆ ಮನಸ್ಸಿದೆ ಎಂದು ಗೊತ್ತಿರಲಿಲ್ಲ ನನಗೆ ಎಂದಾಗ ಕಾರ್ತಿಕ್ ಶಟ್ ಅಪ್ ನೀನು ಸಾರಿ ಕೇಳುತ್ತೇನೆ ಎಂದು ಕುಳಿತಿದ್ದು ಈ ಥಾಂಕ್ಸ್ ಗಿವಿಂಗ್ ಎಲ್ಲಾ ಬೇಡ ಸಾರಿ ಹೇಳು ಎಂದು ಹೇಳುತ್ತಾನೆ. ಅದಕ್ಕೆ ಸತ್ಯ ಹೇಳುತ್ತಾಳೆ ನಾನು ನಿನಗೆ ಬೈದಿದ್ದು ತಪ್ಪು ತಪ್ಪು ತಪ್ಪು ನನ್ನಿಂದ ತಪ್ಪಾಯ್ತು ಎಂದಾಗ ಕಾರ್ತಿಕ್ ಹೇಳುತ್ತಾನೆ ಮತ್ತೆ ಎಳೆದುಕೊಂಡು ಬಂದು ತಲೆ ಮೇಲೆ ತಣ್ಣೀರು ಸುರಿದಿದ್ದು ಎಂದು ಕೇಳುತ್ತಾನೆ ಅದಕ್ಕೆ ಸತ್ಯ ತೊದಲುತ್ತಾ ಅದು ನಾನು ಮಾಡಿದ್ದು ತಪ್ಪು ನಾನು ನಿನ್ನ ಏಷ್ಟು ಚೀಪ್ ಆಗಿ ನಡೆಸಿಕೊಳ್ಳಬಾರದಿತ್ತು ಎಂದಳು ಅದಕ್ಕೆ ಕಾರ್ತಿಕ್ ಹೇಳುತ್ತಾನೆ ಅದೇನು ಏಷ್ಟು ಚೀಪ್ ಅಲ್ಲ ಬಿಡು ಅದನ್ನು ಯಾಕೆ ಏಷ್ಟು ಒತ್ತಿ ಹೇಳುತ್ತಿದ್ದೀಯಾ ಎಂದಾಗ ಸತ್ಯ ಹೇಳುತ್ತಾಳೆ ಎಲ್ಲಾದಕ್ಕೂ ಸಾರಿ ಸಾರಿ ಸಾರಿ ಈಗ ಮಜ್ಜಿಗೆ ಕುಡಿ ಎಂದು ಮಜ್ಜಿಗೆ ಕೊಡುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Sathya Kannada Serial July 27th Episode Written Update. Know more about new episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X