Sathya Serial: ಬಾಲ-ರುಕ್ಕು ಮದುವೆ ನಡೆಯುತ್ತಾ ಇಲ್ವಾ? ಈ ಬಾರಿ ದಿವ್ಯಾ ಗೆಲ್ಲುತ್ತಾಳಾ?
ಬಾಲ ಬಳಿ ದಿವ್ಯಾ ಅದೆಷ್ಟೇ ಕೇಳಿಕೊಂಡರು ಬಾಲ ಮನಸ್ಸು ಕರಗುತ್ತಿಲ್ಲ. ಇತ್ತ ತಾಯಿ ಅಜ್ಜಿ ಬೆಂಬಲನೂ ಸಿಗುತ್ತಿಲ್ಲ. "ನನ್ನ ಪ್ರೀತಿಯನ್ನು ಹೇಗೆ ಪಡೆದುಕೊಳ್ಳಲಿ? ಬಾಲ ನನ್ನ ಜೊತೆ ಬರಲು ಒಪ್ಪುತ್ತಾನಾ? ಬಾಲಗೆ ಇದೀಗ ನಾನು ಬೇಡ. ರುಕ್ಕು ಬಾಲಗೆ ಮತ್ತಷ್ಟು ಹತ್ತಿರ ಆಗಿದ್ದಾಳೆ. ನನ್ನ ಬಾಲನನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ ಬೇಸರದಲ್ಲಿ ದಿವ್ಯಾ ಇದ್ದಾಳೆ.
ದಿವ್ಯಾಳ ಎದುರೇ ರುಕ್ಕು ಹಾಗೂ ಬಾಲ ಮದುವೆ ನಡೆಯುತ್ತಿದೆ. ತನಗೆ ಬಾಲ ಬೇಕೆ ಬೇಕು ಎನ್ನುವ ಹಠದಿಂದ ದಿವ್ಯಾ ತನ್ನ ಪ್ರಾಣಕ್ಕೆ ಸಂಚಕಾರ ತೆಗೆದುಕೊಂಡಿದ್ದಾಳೆ. ಈ ಹಿಂದೆ ಬಾಲ, ದಿವ್ಯಾನ ಬಳಿ ಸುಳ್ಳು ಹೇಳಿ ಮದುವೆ ಆಗಿರುತ್ತಾನೆ. ಆದರೆ ಆ ಬಳಿಕ ದಿವ್ಯಾ ಅದೆಷ್ಟು ಕಷ್ಟ ಪಟ್ಟಿದ್ದಾಳೆ ಎಂದರೆ ಅದು ಹೇಳಲು ಅಸಾಧ್ಯ. ಕಾರ್ತಿಕ್‌ನನ್ನು ಮದುವೆಯಾಗಬೇಕಾಗಿದ್ದ ದಿವ್ಯಾ, ಬಾಲನ ಮರಳು ಮಾತಿಗೆ ಆತನ ಹಿಂದೆಯೇ ಹೋಗುತ್ತಾಳೆ. ಆದರೆ ಬಾಲ, ದಿವ್ಯಾಳನ್ನು ಹಳ್ಳಿಗೆ ಕರೆದುಕೊಂಡು ಹೋಗಿ, ಸುಳ್ಳುಗಳನ್ನು ಹೇಳಿ ಆಕೆಗೆ ಕೊಡಬಾರದ ಕಷ್ಟ ಕೊಟ್ಟಿದ್ದಾನೆ.

ಆದರೆ ಆಗ ಆಕೆಯ ಹೆತ್ತವರು ಒಂದೇ ಒಂದು ಮಾತು ಆಡಲಿಲ್ಲ. ದಿವ್ಯಾಗೆ ಒಂದೇ ಒಂದು ಪ್ರಶ್ನೆ ಕೂಡ ಮಾಡಲಿಲ್ಲ. ಎಲ್ಲಿ ಹೋದಳು? ಏನಾದಳು? ಎನ್ನುವ ಮಾಹಿತಿ ಕೂಡ ಕಲೆ ಹಾಕಲಿಲ್ಲ. ಕೊನೆಗೆ ದಿವ್ಯಾ ಹೇಗಿದ್ದಾಳೆ ಎಂದು ತಿಳಿದುಕೊಳ್ಳಲು ಹೋದಾಗ, ಅಜ್ಜಿ ಗಿರಿಜಮ್ಮನಿಗೆ ದಿವ್ಯಾ ಸ್ಥಿತಿ ತಿಳಿದಿತ್ತು. ಆ ಬಳಿಕ ದಿವ್ಯಾ ತವರು ಮನೆಗೆ ಬರುತ್ತಾಳೆ. ಬಾಲ ಕೂಡ ಆಕೆಯ ಹಿಂದೆ ಬರುತ್ತಾನೆ.
ಇನ್ನೂ ಮನೆ ಮಗನ ಹಾಗೆ ಅಳಿಯನನ್ನು ನೋಡುತ್ತಾರೆ. ಆದರೆ, ಅದ್ಯಾರೋ ಬಂದ ರುಕ್ಕು ಎನ್ನುವಾಕೆಯನ್ನು ದಿವ್ಯಾ ಮನೆಯಲ್ಲಿ ಇಟ್ಟುಕೊಳ್ಳುವ ಅನಿವಾರ್ಯ ಇರಲಿಲ್ಲ. ಆದರೂ ಕೂಡ ಎಲ್ಲರೂ ಸೇರಿ ರುಕ್ಕುವನ್ನು ಮನೆಯಲ್ಲಿ ಇರಿಸಿಕೊಂಡು ಆಕೆಯ ಮನದಲ್ಲಿ ಇಲ್ಲದ ಆಸೆಯನ್ನು ಹುಟ್ಟು ಹಾಕಲಾಗುತ್ತದೆ. ಹಾಗೆಯೇ ಇದೀಗ ಮದುವೆಯವರೆಗೆ ಬಂದು ನಿಂತಿದೆ. ಆದರೆ ರುಕ್ಕು ಕಡೆಗೆ ಬಾಲ, ಜಾನಕಿ, ಗಿರಿಜಮ್ಮ ಇದ್ದಾರೆ. ಆದರೆ "ನಾನು ಬದಲಾಗಿದ್ದೀನಿ, ನನಗೆ ಬದಲಾಗಲು ಒಂದು ಅವಕಾಶ ಕೊಡಿ" ಎನ್ನುವ ದಿವ್ಯಾ ಪರವಾಗಿ ಯಾರೂ ಇಲ್ಲ.
ಬಾಲನ ಮದುವೆ ನಿಲ್ಲಿಸಲು ಬಂದ ದಿವ್ಯಾ
ಆಕೆ ಬಾಲನ ಮದುವೆ ಮಂಟಪದವರೆಗೆ ಬಂದು ಮೈ ಎಲ್ಲ ಡೀಸೆಲ್ ಸುರಿದುಕೊಳ್ಳುತ್ತಾಳೆ. ಆದರೆ ಬಾಲಗೆ ದಿವ್ಯಾ ಹೇಗೆ ಎಂಬುವುದು ಚೆನ್ನಾಗಿ ಗೊತ್ತಿದೆ. ದಿವ್ಯಾ ಹಿಡಿದ ಕೆಲಸವನ್ನು ಮಾಡಿಯೇ ಮಾಡುತ್ತಾಳೆ ಎನ್ನುವುದು ಬಾಲಗೆ ಗೊತ್ತಿದೆ. ಆದರೆ, ಗಿರಿಜಮ್ಮ ಮಾತ್ರ "ಆಕೆಯ ಬೆದರಿಕೆಗೆ ನೀನು ಬಗ್ಗ ಬೇಡ. ನೀನು ರುಕ್ಕುನ ಮದುವೆ ಆಗು. ಹಸೆಮಣೆ ಏರಿದ ಮೇಲೆ ನೀನು ರುಕ್ಕು ಕೈ ಬಿಡಬಾರದು ಎಂದು ಹೇಳಿದಾಗ ದಿವ್ಯಾ ಅಳುತ್ತಾ ಹೇಳುತ್ತಾಳೆ.

ಬಾಲನ ಬಳಿ ಬೇಡಿಕೊಂಡ ದಿವ್ಯಾ
"ನಾನು ಇದೀಗ ಯಾರಿಗೂ ಬೇಡ. ಅಳಿಯ ಬೇರೆಯವರನ್ನು ಮದುವೆ ಆಗುತ್ತಿದ್ದರೂ ಬೇರೆ ಮದುವೆ ಆಗು ಎಂದು ಕುಮ್ಮಕ್ಕು ಬೇರೆ ನೀಡುತ್ತೀರಾ. ಇದೆಲ್ಲ ಎಷ್ಟು ಸರಿ" ಎಂದು ದಿವ್ಯಾ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಈ ವೇಳೆ ರುಕ್ಕು, ದಿವ್ಯ ಬಳಿ "ಇದೇನಿದು ದಿವ್ಯಾ, ಬಾಲ ಮಾವ ನನ್ನ ಮದುವೆಯಾಗುವ ಹೊತ್ತಲ್ಲಿ ನೀನು ಹೀಗೆಲ್ಲ ಮಾಡುತ್ತಿದ್ದೀರಾ. ಇದು ನಿನಗೆ ಸರಿ ಅನ್ನಿಸುತ್ತಿದೆಯಾ? ದಯವಿಟ್ಟು ನಮ್ಮಿಬ್ಬರ ಮದುವೆಗೆ ಅಡ್ಡಿ ಬರಬೇಡ" ಎಂದಾಗ ದಿವ್ಯಾ "ಎಲ್ಲವೂ ಆಗಿದ್ದು ನಿನ್ನಿಂದ ಕಣೆ ರುಕ್ಕು. ನಿನ್ನಿಂದಾಗಿ ಎಲ್ಲರೂ ನನ್ನ ಮನೆಯಲ್ಲಿ ನನ್ನ ವಿರುದ್ಧವೇ ನಿಂತು ಮಾತನಾಡುತ್ತಿದ್ದಾರೆ." ಎನ್ನುತ್ತಾಳೆ ದಿವ್ಯಾ.
ಬೆಂಕಿ ಹಚ್ಚಿಕೊಂಡು ಸಾಯಲು ಮುಂದಾದ ದಿವ್ಯಾ
"ನನ್ನ ಬಾಲ ನನ್ನಿಂದ ದೂರ ಆಗಲು ಬಹಳ ದೊಡ್ಡ ಕಾರಣ ಅಂದರೆ ಅದು ನೀನು. ಯಾಕೆ ಹೀಗೆಲ್ಲ ಮಾಡುತ್ತೀಯಾ?" ಎಂದು ಜೋರಾಗಿ ಅಳುತ್ತಾಳೆ. ರುಕ್ಕು, ದಿವ್ಯಾ ಮಾತಿಗೆ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾರೆ. ಆದರೆ ಗಿರಿಜಮ್ಮ ಬಾಲನ ಬಳಿ ಬಂದು "ಈಕೆಯ ನಾಟಕ ಇದ್ದಿದ್ದೆ. ನೀನು ತಾಳಿ ಕಟ್ಟು" ಎಂದು ಹೇಳುತ್ತಾರೆ. ಆದರೆ, ಅವರ ಮಾತು ಕೇಳಿದ ಬಾಲ "ದಿವ್ಯಾ ಹೇಗೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವಳು ಏನಾದರೂ ಈ ಕೆಲಸ ಮಾಡಲು ಹೊರಟರೆ, ಅದರಿಂದ ಹೊರಬರುವುದು ಬಹಳ ಕಷ್ಟ" ಎಂದು ಹೇಳಿದಾಗ ದಿವ್ಯಾ ಬೆಂಕಿ ಹಚ್ಚಿಕೊಳ್ಳಲು ಮುಂದಾಗುತ್ತಾಳೆ. ಈಗ ಬಾಲ ಹಾಗೂ ರುಕ್ಕು ಮದುವೆ ನಡೆಯುತ್ತಾ? ದಿವ್ಯಾ ಗೆಲ್ಲುತ್ತಾಳಾ? ನೋಡಬೇಕು.


Click it and Unblock the Notifications











