Sathya Serial: ವಕೀಲರ ಪ್ರಶ್ನೆಗೆ ತಬ್ಬಿಬ್ಬಾದ ಉಷಾ; ವಕೀಲರ ವಿರುದ್ಧ ಸಿಡಿದು ನಿಂತ ಸತ್ಯ

By ಪೂರ್ವ

ದೇವೇಂದ್ರ ಅರಸ್ ಸತ್ಯ ಜೊತೆ ತನ್ನ ಮಗ ಏನೂ ತಪ್ಪು ಮಾಡಿಲ್ಲ. ಆತ ಅಮಾಯಕ ಆತನನ್ನು ಮಾತ್ರ ಜೈಲಿನಿಂದ ಬಿಡುಗಡೆ ಮಾಡಿ ಎಂದು ಎಷ್ಟೇ ಕೇಳಿಕೊಂಡರು ಸತ್ಯ ಮಾತ್ರ ಖಂಡಿತ ಇದು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಉಷಾಗೆ ಅನ್ಯಾಯ ಆಗಿದೆ. ಆಕೆಗೆ ನ್ಯಾಯ ಸಿಗಲೇಬೇಕು ಇಲ್ಲವಾದರೆ, ಖಂಡಿತವಾಗಿಯೂ ಉಷಾ ಜೀವಂತವಾಗಿ ಉಳಿಯುವುದು ಇಲ್ಲ ಅಂತ ಸತ್ಯ ಅಂದುಕೊಂಡಿದ್ದಾಳೆ.

ಉಷಾ ಗೆ ಬದುಕುವ ಧೈರ್ಯ ತುಂಬಿದ್ದೆ ಸತ್ಯ ಹಾಗೂ ಸೀತಾ. ಸೀತಾಗೆ ಸತ್ಯ ಮೇಲೆ ಬಲವಾದ ನಂಬಿಕೆ. ನನ್ನ ಸೊಸೆ ಏನೇ ಮಾಡಿದರೂ ಖಂಡಿತವಾಗಿಯೂ ಎಲ್ಲರ ಒಳಿತಿಗಾಗಿ ಆಗುತ್ತದೆ ಎನ್ನುತ್ತಾಳೆ. ಅದಕ್ಕಾಗಿ ದೇವೇಂದ್ರ ಅರಸ್ ಅವರನ್ನು ಕೂಡ ಎದುರು ಹಾಕಿಕೊಂಡು ಇರುತ್ತಾಳೆ. ದೇವೇಂದ್ರ ಅರಸ್ ಅವರು ಸೀತಾ ಮನೆಗೆ ಬಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾರೆ. "ನನ್ನ ಮಗನದ್ದು ಯಾವುದೇ ತಪ್ಪಿಲ್ಲ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ" ಎಂದು ಹೇಳುತ್ತಾರೆ.

Sathya Kannada serial june 14th episode update

ಅದೆಲ್ಲ ಕೋರ್ಟ್ ತೀರ್ಪು ಮಾಡುತ್ತದೆ. ಅಲ್ಲಿಯೇ ನೋಡಿಕೊಳ್ಳೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ದೇವೇಂದ್ರ ಅಲ್ಲಿಂದ ಹೋಗುತ್ತಾನೆ. ಇನ್ನೂ ಕೋರ್ಟ್ ಗೆ ಹರ್ಷಿತ್‌ನನ್ನು ಪೊಲೀಸರು ಕರೆದುಕೊಂಡು ಬರುತ್ತಾರೆ. ಆಗ ಕೂಡ ದೇವೇಂದ್ರ ಅರಸ್, ಸತ್ಯ ಜೊತೆ ಚಾಲೆಂಜ್ ಮಾಡುತ್ತಾರೆ. "ನನ್ನ ಮಗನದ್ದು ಯಾವುದು ತಪ್ಪಿಲ್ಲ ಎನ್ನುವುದನ್ನು ನಾನು ಸಾಬೀತು ಮಾಡುತ್ತೇನೆ. ಹೇಗೆ ಮಾಡಬೇಕು ಎನ್ನುವುದು ನನಗೆ ತಿಳಿದಿದೆ" ಎಂದು ಹೇಳುತ್ತಾನೆ.

ವಕೀಲರ ಮುಂದೆ ಮಾತನಾಡಲು ಉಷಾ ಹಿಂದೇಟು

ಕೋರ್ಟ್ ನಲ್ಲಿ ಉಷಾ ಜೊತೆ ವಕೀಲರ ವರ್ತನೆ ನೋಡಿ ಸತ್ಯಗೆ ಬಹಳ ಸಿಟ್ಟು ಬರುತ್ತದೆ. ವಕೀಲರ ಪ್ರತಿ ಪ್ರಶ್ನೆಗೆ ಉತ್ತರ ನೀಡುವಾಗ ಉಷಾ ಕಣ್ಣೀರು ಹಾಕುತ್ತಾಳೆ. "ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿರುವಾಗ ಅಡ್ರೆಸ್ ಕೇಳುವ ನೆಪದಲ್ಲಿ ಕಾರು ನನ್ನ ಬಳಿ ಬಂದಿತು . ಅಡ್ರೆಸ್ ಹೇಳುತ್ತಿರುವಾಗ ಕಾರಿನಲ್ಲಿ ನನ್ನನ್ನು ಎಳೆದು ಕೊರಿಸಿಕೊಂಡು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನನ್ನನ್ನು ರೇಪ್ ಮಾಡುತ್ತಾರೆ" ಎಂದು ಅಳುತ್ತಾ ಹೇಳುತ್ತಾಳೆ

ಜಡ್ಜ್ ಎದುರು ಕಣ್ಣೀರು ಹಾಕಿದ ಉಷಾ

ಹರ್ಶಿತ್ ಪರ ಇರುವ ವಕೀಲರು ಮಾತ್ರ ವ್ಯತಿರಿಕ್ತ ಪ್ರಶ್ನೆ ಕೇಕುತ್ತಿರುವುದನ್ನು ಸತ್ಯ ಖಂಡಿಸಿದಾಗ ಉಷಾ ಪರವಾಗಿ ಇರುವ ವಕೀಲರ ಬಳಿ ಜಡ್ಜ್ ವಾರ್ನಿಂಗ್ ಮಾಡುತ್ತಾರೆ. ಹಾಗೆಯೇ ಅದಕ್ಕೆ ಬೇಕಾದ ಸಾಕ್ಷಿಗಳನ್ನು ಸತ್ಯ ಕಲೆ ಹಾಕಿ ಇರುತ್ತಾಳೆ. ಸತ್ಯಗೆ ಅದ್ಯಾಕೋ ಕೇಸ್‌ನಲ್ಲಿ ದೇವೇಂದ್ರ ಅರಸ್ ಬಹಳ ದೊಡ್ಡ ಕುತಂತ್ರ ಮಾಡಿರುತ್ತಾರೆ. ಯಾಕೆಂದರೆ ಆತನಿಗೆ ಸತ್ಯ ಮೇಲೆ ಇರುವ ಕೋಪಕ್ಕೆ, ಹಾಗೆಯೇ ತನ್ನ ಮಗನನ್ನು ಹೇಗಾದರೂ ಮಾಡಿ ಬಚಾವ್ ಮಾಡಬೇಕು. ಇಲ್ಲವಾದರೆ ತನ್ನ ಮಗನಿಗೆ ಬಹಳ ದೊಡ್ಡ ಕಠಿಣ ಶಿಕ್ಷೆ ಕೂಡಾ ಆಗುವ ಸಾಧ್ಯತೆ ಇದೆ. ಆ ಕಾರಣದಿಂದ ಒಮ್ಮೆ ತನ್ನ ಮಗ ಇದರಿಂದ ಪಾರಾಗಲೀ ಎಂದು ಬೇಡುತ್ತಿರುತ್ತಾನೆ.

Sathya Kannada serial june 14th episode update

ಬಾಲ ಮೇಲೆ ದಿವ್ಯಾಗೆ ಫುಲ್ ಲವ್

ಇನ್ನೂ ಬಾಲ, ದಿವ್ಯಾ ಜೊತೆ ನಯವಾಗಿ ಮಾತನಾಡುವ ಹಾಗೆ ಆಕ್ಟಿಂಗ್ ಮಾಡುತ್ತಾನೆ. ದಿವ್ಯಾ ಬಾಲನನ್ನು ಬಹಳ ಪ್ರೀತಿ ಮಾಡುತ್ತಿರುತ್ತಾನೆ. ಆತನ ಜೊತೆ ಸಂಸಾರ ಮಾಡಬೇಕು. ಇಲ್ಲವಾದರೆ ಖಂಡಿತವಾಗಿ ಬಾಲ ನನಗೆ ಸಿಗುವುದು ಇಲ್ಲ ಎಂದು ಹೇಳಿದಾಗ, ಬಾಲಗೆ ಏನು ಮಾಡಬೇಕು ತಿಳಿಯದಾಗುತ್ತೆ. ಹೋಟೆಲ್ ಮೇಲೆ ದಿವ್ಯಾ ಕಣ್ಣು ಹಾಕಿದ್ದಾಳೆ. ಅವತ್ತಿನಿಂದ ಬಾಲ, ದಿವ್ಯಾ ಜೊತೆ ಪ್ರೀತಿ ಎಂಬ ನಾಟಕ ಆಡುತ್ತಿದ್ದಾನೆ. ಮುಂದೇನು ಆಗುತ್ತೆ ಅನ್ನೋದು ಕಾದು ನೋಡಬೇಕಿದೆ.

More from Filmibeat

English summary
Sathya Kannada serial june 14th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X