Sathya Serial: ಹರ್ಷಿತ್ ವಿರುದ್ಧ ಸಿಕ್ಕಿವೆ ಸಾಕ್ಷಿಗಳು; ಅನ್ಯಾಯಕ್ಕೊಳಗಾದ ಉಷಾಗೆ ನ್ಯಾಯ ಸಿಗುತ್ತಾ?

By ಪೂರ್ವ

'ಸತ್ಯ' ಧಾರಾವಾಹಿ ಬಹಳ ಕುತೂಹಲಕಾರವಾದ ಘಟ್ಟ ತಲುಪಿದೆ. ಮಾಡಿದ ತಪ್ಪಿಗೆ ದೇವೇಂದ್ರ ಅರಸ್ ಮಗ ಹರ್ಶಿತ್ ಬೆಲೆ ಕಟ್ಟಲೇ ಬೇಕಾಗಿದೆ. ಹೌದು, ಉಷಾಳನ್ನು ನಿರ್ಜನವಾದ ಜಾಗಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಅತ್ಯಾಚಾರ ಮಾಡುತ್ತಾರೆ. ಆದರೆ, ಇದೆಲ್ಲವನ್ನೂ ಉಷಾ ಕೋರ್ಟ್‌ನಲ್ಲಿ ಈಗಾಗಲೇ ಹೇಳಿದ್ದಾಳೆ. ಇದೀಗ ಉಷಾ ಪರವಾಗಿ ವಕೀಲೆ ವಾದ ಮಂಡನೆ ಮಾಡುತ್ತಿದ್ದಾರೆ. ಇದಕ್ಕಿಂತ ಮುಂಚೆ ಹರ್ಶಿತ್‌ಗೆ ಶಿಕ್ಷೆಯಾಗಲು ಏನೆಲ್ಲಾ ಮಾಡಬೇಕು ಅದೆಲ್ಲವನ್ನೂ ಸತ್ಯ ಮಾಡಿರುತ್ತಾರೆ.

ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿ ವಕೀಲರಿಗೆ ನೀಡಿ ಇರುತ್ತಾಳೆ. ಇನ್ನೂ ವಕೀಲರು ಹರ್ಷಿತ್ ಮಾಡಿದ ಅಪರಾಧವನ್ನು ಇಂಚು ಇಂಚಾಗಿ ಹೇಳುತ್ತಾರೆ . ಹರ್ಷಿತ್, ಉಷಾ ಮೇಲೆ ಅಷ್ಟು ಕ್ರೂರವಾಗಿ ಅತ್ಯಾಚಾರ ಮಾಡಿ ಇರುತ್ತಾನೆ. ಅದು ಆತನಿಗೆ ಸೇರಿದ ಜಾಗದಲ್ಲಿಯೇ. ಹಾಗೆಯೇ ದೇವೇಂದ್ರ ಅರಸ್ ಅವರು ಮುನಿ ಸ್ವಾಮಿ ಅವರಿಗೆ ಕೇಸ್ ಮುಚ್ಚಿ ಹಾಕುವುದಕ್ಕೆ ಹಣ ನೀಡಲು ಬಂದಿರುತ್ತಾರೆ. ಇದನ್ನು ನೋಡಿದ ಮುನಿಸ್ವಾಮಿ ನನಗೆ ನನ್ನ ಮಗಳಿಗೆ ನ್ಯಾಯ ಬೇಕೆ ಬೇಕು. ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳುತ್ತಾರೆ.

Sathya Kannada Serial June 15th Episode Update

ಇದಕ್ಕೆಲ್ಲ ಸಾಕ್ಷಿಯಾಗಿ ಕೋಟೆ ಮನೆಯ ರಾಮಚಂದ್ರ ರಾಯರ ಹೆಂಡತಿ ಸಾಕ್ಷಿ ಆಗಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಅದು ಯಾವುದು ಕೂಡ ಸಕ್ಸಸ್ ಆಗುವುದು ಇಲ್ಲ. ಇನ್ನೂ ಬೇಕಾದಷ್ಟು ಸಾಕ್ಷಿಗಳು ಅವರ ವಿರುದ್ಧವಾಗಿದೆ. ಇದೆಲ್ಲವನ್ನು ಮನಗಂಡು ಉಷಾಗೆ ಕೋರ್ಟ್ ನ್ಯಾಯ ಒದಗಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಾರೆ. ಇದೆಲ್ಲವನ್ನೂ ಕೇಳಿ ದೇವೇಂದ್ರ ಅರಸ್ ಮಾತ್ರ ತಲೆಬಿಸಿ ಮಾಡಿಕೊಂಡಿರುತ್ತಾನೆ. ಆದರೆ ಮತ್ತೆ ಏನೂ ಮಾತನಾಡದೆ ಸುಮ್ಮನೆ ಇರುತ್ತಾನೆ.

ಬಾಲನ ಮಾತು ಕೇಳಿ ರುಕ್ಕು ಗರಂ

ಇತ್ತ ದಿವ್ಯಾಗೆ ಬಾಲ ಸರಿಯಾಗಿಯೇ ಕಾಗೆ ಹಾರಿಸುತ್ತಿರುತ್ತಾನೆ. ದಿವ್ಯಾ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಅನುಭವಿಸಲೇಬೇಕು ಎಂದು ಬಾಲ ಮಾಡುತ್ತಿರುವ ಕುತಂತ್ರ ಒಂದಲ್ಲ ಎರಡಲ್ಲ. ಯಾಕೆಂದರೆ, ಬಾಲನಿಗೆ ದಿವ್ಯಾ ಅಷ್ಟರವರೆಗೆ ಹಿಂಸೆಯನ್ನು ನೀಡುತ್ತಾಳೆ. ಪಾಪ ದಿವ್ಯಾ ಮಾತ್ರ ಬಾಲ ನನ್ನವನು ಆತನನ್ನು ನಾನು ಯಾವತ್ತೂ ಬಿಟ್ಟು ಕೊಡುವುದು ಇಲ್ಲ. ರುಕ್ಕು ಮಾತ್ರ ಬಾಲನ ಮೇಲೆ ಕಣ್ಣು ಹಾಕಿದರೆ ನಾನು ಯಾವತ್ತೂ ಸುಮ್ಮನೆ ಇರುವುದು ಇಲ್ಲ ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡಿರುತ್ತಾಳೆ.

Sathya Kannada Serial June 15th Episode Update

ಬಾಲನ ಮಾತು ಕೇಳಿ ದಿವ್ಯಾ ಫುಲ್ ಖುಷ್

ರುಕ್ಕುಗೆ ಬಾಲ ಎಷ್ಟೊತ್ತಿಗೂ ದಿವ್ಯಾ ದಿವ್ಯಾ ಎಂದು ಜಪ ಮಾಡುವುದನ್ನು ನೋಡಿ ಬಹಳ ಕೋಪ ಬರುತ್ತದೆ. ಇವತ್ತು ಕೂಡ ಮನೆಗೆ ಬಂದವನೇ ದಿವ್ಯಾ ನನಗೆ ಒಂದು ಗ್ಲಾಸ್ ನೀರು ಕೊಡು ಎಂದು ಕೇಳುತ್ತಾನೆ. ಇದನ್ನು ಕೇಳಿದ ರುಕ್ಕುಗೆ ಬಹಳ ಸಿಟ್ಟು ಬರುತ್ತದೆ. ಬಾಲಗೆ "ಏನು ಇನ್ನೊಂದು ಬಾರಿ ಹೇಳಿ" ಎಂದಾಗ, "ನೀರು ತಂದು ಕೊಡು" ಎಂದು ಹೇಳಿದೆ ಎಂದಾಗ, "ಮತ್ತೆ ಆಗ ಬೇರೆ ಏನೋ ಹೇಳಿದೆ" ಎನ್ನುವಾಗಲೇ ದಿವ್ಯಾ ಮೆತ್ತಗೆ ರೂಮಿನಿಂದ ಹೊರಗೆ ಬರುತ್ತಾಳೆ.

ರುಕ್ಕು ನೋಡಿ ಗಾಬರಿಗೊಂಡ ಬಾಲ

ದಿವ್ಯಾ ನೋಡಿದ ರುಕ್ಕು ಬಾಲನಿಗೆ "ಏನಂದೆ ಮಾವ ನೀನು, ದಿವ್ಯಾ ನೀರು ತೆಗೆದುಕೊಂಡು ಬಾ.. ಅಂದೆ ಅಲ್ವಾ?" ಎಂದಾಗ, ದಿವ್ಯಾಗೆ ಖುಷಿ ಆಗುತ್ತದೆ. ಆಕೆ ಬೇಗ ಒಳಗೆ ಓಡಿ ಹೋಗಿ ಬಾಲನಿಗೆ ನೀರು ತಂದು ಕೊಡುತ್ತಾಳೆ. ಇದನ್ನು ನೋಡಿದ ರುಕ್ಕುಗೆ ಮಾತ್ರ ವಿಪರೀತ ಸಿಟ್ಟು ಬರುತ್ತದೆ.

More from Filmibeat

English summary
Sathya Kannada Serial June 15th Episode Update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X