Sathya Serial: ರುಕ್ಕು ಕೊಲೆ ಮಾಡಲು ಬಂದ ದಿವ್ಯಾ; ಇದಕ್ಕೆಲ್ಲ ಬ್ರೇಕ್ ಹಾಕುತ್ತಾನಾ ಬಾಲ?

By ಪೂರ್ವ

ರುಕ್ಕು ಹಾಗೂ ಬಾಲ ಮದುವೆ ಆಗುವುದು ನಿಶ್ಚಿತವಾಗಿದೆ. ಅದಕ್ಕೆ ಒಂದಷ್ಟು ಪ್ರಿಪರೇಷನ್ ನಡೆಯುತ್ತಿದೆ. ಮನೆಯಲ್ಲಿ ಲಗ್ನ ಪತ್ರಿಕೆ ಮಾಡುತ್ತಿರುವಾಗ ದಿವ್ಯಾ ಅರಚಾಡುತ್ತಿರುವುದನ್ನು ನೋಡಿದ ಅರ್ಚಕರಿಗೆ ಗಾಬರಿ ಆಗಿದೆ. ಇನ್ನೂ ಪೂಜೆಯ ಬಳಿಕ ಅರ್ಚಕರು ಹೊರಟು ಹೋಗುತ್ತಾರೆ. ಆದಾದ ಬಳಿಕ ರೂಮ್ ಬಾಗಿಲು ತೆಗೆಯುತ್ತಾನೆ ಬಾಲ.

ಆ ರೂಮ್‌ನಿಂದಾ ದಿವ್ಯಾ ಬಹಳ ಕೋಪದಿಂದ ಹೊರಗೆ ಬರುತ್ತಾಳೆ. ಇದನ್ನು ನೋಡಿ ಗಿರಿಜಮ್ಮ "ಯಾಕೆ ನೀನು ಹೀಗೆಲ್ಲ ಆಡುತ್ತಿದ್ದಿಯಾ. ಮನೆಯಲ್ಲಿ ಪೂಜೆ ನಡೆಯುತ್ತಿರುವಾಗ ನೀನ್ಯಾಕೆ ಗಲಾಟೆ ಮಾಡುತ್ತಿದ್ದಿಯಾ" ಎಂದು ಹೇಳಿದಾಗ ದಿವ್ಯಾಗೆ ಬಹಳ ಕೋಪ ಬರುತ್ತೆ.ರುಕ್ಕು ಮೇಲೆ ಕಿಡಿ ಕಾರುತ್ತಾಳೆ. "ನನಗೆ ನನ್ನ ಬಾಲ ಬೇಕು. ಎಲ್ಲಾ ಆಗುತ್ತಿರುವುದು ಈ ರುಕ್ಕುವಿನಿಂದ. ಈ ರುಕ್ಕುನೇ ಇಲ್ಲವಾಗಿಸಿದರೆ ಹೇಗೆ" ಎಂದು ಯೋಚನೆ ಮಾಡುತ್ತಾಳೆ.

Sathya Kannada serial June 26th episode update

ಆದರೆ ದಿವ್ಯ ಮನಸ್ಸಿನಲ್ಲಿ ರುಕ್ಕುವನ್ನು ಸಾಯಿಸಿಬಿಡುವಷ್ಟು ಕೋಪ ಬರುತ್ತದೆ. ಆಕೆ ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಬರುತ್ತಾಳೆ. ಆ ಬಳಿಕ ರುಕ್ಕುವನ್ನು ನೋಡಿ "ಏಯ್ ನಿನಗೆ ನನ್ನ ಗಂಡನೇ ಬೇಕಾಯಿತಾ. ಬೇರೆ ಹುಡುಗನನ್ನು ನೋಡಿ ಮದುವೆ ಆಗಬಹುದು ಆಗಿತ್ತಲ್ಲ. ಇದೀಗ ನಿನಗೆ ನನ್ನ ಗಂಡ ಬೇಕಾ?" ಎಂದು ಹೇಳಿ ಆಕೆಗೆ ತಿವಿಯಲು ಮುಂದಾಗುತ್ತಾಳೆ.

ಎಲ್ಲರಿಗೂ ಬಹಳ ಭಯ ಆಗುತ್ತದೆ. ಗಿರಿಜಮ್ಮ ಕಿರುಚಿಕೊಂಡು ಇರುತ್ತಾರೆ. ಇದನ್ನು ನೋಡಿ ಬಾಲ ಒಮ್ಮೆಲೆ ದಿವ್ಯಾ ಕೈ ಹಿಡಿದುಕೊಂಡು ಬಿಡುತ್ತಾನೆ. ಆತ ರುಕ್ಕುಗೆ ಎದುರಾಗುತ್ತ ಇದ್ದ ಜೀವಾಪಾಯದಿಂದ ಪಾರು ಮಾಡುತ್ತಾನೆ. ಇನ್ನೂ ದಿವ್ಯಾ ಮಾತ್ರ ಬಾಲಗೋಸ್ಕರ ಏನು ಮಾಡಲು ಹೇಸುವುದು ಇಲ್ಲ ಎಂದು ಅರ್ಥ ಆಗುತ್ತದೆ.

ಇತ್ತ ಬಾಲ ಮದುವೆಯ ಖುಷಿಯಲ್ಲಿ ಇರುತ್ತಾನೆ. ಅದಕ್ಕೆ ಅವನಿಂದ ಆದಷ್ಟು ಕೆಲಸ ಮಾಡುತ್ತಾ ಇರುತ್ತಾನೆ. ಆ ವೇಳೆ ಅಲ್ಲಿಗೆ ಬಾಲ ಗೆಳೆಯ ಬರುತ್ತಾನೆ. ಬಾಲ ಗೆಳೆಯ ಕೂಡ ಬಾಲಗೆ ಬಹಳ ಸಹಾಯ ಮಾಡುತ್ತಿರುತ್ತಾನರ. ಆ ವೇಳೆ ಬಾಲಗೆ ಒಂದು ಕರೆ ಬರುತ್ತದೆ. ಅದನ್ನು ಆಕೆಯ ಗೆಳೆಯ ಪಿಕ್ ಮಾಡಿ ಮಾತನಾಡುತ್ತಾನೆ. ಇನ್ನು ಫೋನ್‌ನಲ್ಲಿ ಹೆಣ್ಣಿನ ದ್ವನಿ ಕೇಳಿ ಬಾಲನ ಗೆಳೆಯ ಬಹಳ ಖುಷಿ ಪಡುತ್ತಾನೆ. ಏನೋ ಆಫರ್ ಇದೆ ಎಂದೆಲ್ಲ ಕಾಗೆ ಹಾರಿಸಿ ಓಟಿಪಿ ಎಲ್ಲಾ ತೆಗೆದುಕೊಳ್ಳುತ್ತಾಳೆ.

Sathya Kannada serial June 26th episode update

ಇದನ್ನು ನೋಡಿದ ಬಾಲಗೆ ಸಣ್ಣ ಡೌಟ್ ಬರುತ್ತದೆ. ಆತ ಫೋನ್‌ನಲ್ಲಿ ಮಾತನಾಡುತ್ತಾ ಇರುವುದು ಯಾರು? ಎಂದೆಲ್ಲ ಕೇಳಿದಾಗ ಯಾರೋ ಹೆಂಗಸು ಎಂದು ಹೇಳುತ್ತಾನೆ. ಗೆಳೆಯನಿಂದ ಫೋನ್ ತೆಗೆದುಕೊಂಡು ಬಾಲ ಮಾತನಾಡಬೇಕು ಎನ್ನುವ ವೇಳೆ ಕರೆ ಕಟ್ ಆಗುತ್ತದೆ. ಪುನ: ಆ ನಂಬರ್‌ಗೆ ಕರೆ ಮಾಡಿದಾಗ ಕಾಲ್ ಸ್ವಿಚ್ ಆಫ್ ಎಂದು ಬರುತ್ತದೆ. ಹಾಗೆಯೇ ಬಾಲ ಬಳಿ ಇದ್ದ ಎಲ್ಲಾ ಹಣವೂ ಡ್ರಾ ಆಗಿರುವ ಮೆಸೇಜ್ ಬರುತ್ತದೆ. ಇದನ್ನು ನೋಡಿ ಬಾಲ ಕಂಗೆಟ್ಟು ಹೋಗಿದ್ದಾನೆ. ಆತನಿಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ.

ಸತ್ಯ ಮಾತ್ರ ಇದೀಗ ಸಸ್ಪೆಂಡ್ ಆಗಿ ಮನೆಯಲ್ಲಿಯೇ ಉಳಿಯುವ ಹಾಗೆ ಆಗಿದೆ. ಇದೀಗ ಸತ್ಯಗೆ ಕೀರ್ತನ ಕೂಡ ಭೇಷ್ ಎಂದು ಹೇಳಿದ್ದಾಳೆ. ಆದರೆ, ಸತ್ಯಗೆ ಇದು ಬಹಳ ನೋವು ಆಗುತ್ತದೆ. ನಾನು ಒಳ್ಳೆಯ ಕೆಲಸ ಮಾಡಿದ್ದರು ಈ ಥರ ನನಗೆ ಸ್ಥಿತಿ ಬಂತಲ್ಲ ಎಂದು ಬೇಸರದಲ್ಲಿ ಇರುತ್ತಾಳೆ.

More from Filmibeat

English summary
Sathya Kannada serial June 26th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X