Sathya Serial:ಕಷ್ಟಪಟ್ಟು ದುಡಿದ ಹಣ ಕಂಡೋರ ಪಾಲು; ಬಾಲ ವಿಲವಿಲ
ಬಾಲ ಹಣ ಕಳೆದುಕೊಂಡು ತಲೆ ಬಿಸಿ ಮಾಡಿಕೊಂಡಿದ್ದಾನೆ. ಆತ ಕಷ್ಟ ಪಟ್ಟು ದುಡಿದ ಹಣ ಈ ರೀತಿ ಕಂಡೋರ ಪಾಲಾಗುತ್ತದೆ ಎನ್ನುವ ಸಣ್ಣ ಸೂಚನೆ ಕೂಡ ಆತನಿಗೆ ಸಿಗಲಿಲ್ಲ. ಅಮಾಟೆ ಮಾಡಿದ ಸಣ್ಣ ತಪ್ಪಿನಿಂದಾಗಿ ಬಹಳ ದೊಡ್ಡ ಬೆಲೆ ಕಟ್ಟಬೇಕಾಗಿ ಬಂದಿದೆ. ಬಾಲ ಈ ವಿಚಾರವನ್ನು ಸತ್ಯಗೆ ತಿಳಿಸುತ್ತಾನೆ. ಸತ್ಯಗೆ ಈ ವಿಚಾರ ಕೇಳಿ ಶಾಕ್ ಆಗುತ್ತದೆ.
"ಹೇಗಾದರೂ ಮಾಡಿ ಬಾವ ನಿಮಗೆ ನ್ಯಾಯ ಸಿಗುವ ಹಾಗೆ ಮಾಡುತ್ತೇನೆ. ನಿಮಗೆ ಬಹಳ ದೊಡ್ಡ ಅನ್ಯಾಯವೇ ಆಗಿದೆ. ನನಗೆ ಇದರಿಂದ ಬಹಳ ಬೇಸರ ಆಗಿದೆ" ಎಂದು ಸತ್ಯ ಹೇಳುತ್ತಾಳೆ. ಬಾವ ನೀವು ಯಾಕೆ ಒಟಿಪಿ ಕೊಡಲು ಹೋದಿರಿ. ಇದೇ ರೀತಿ ಹಲವು ಜನರು ಮೋಸ ಹೋಗಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಜಾಲವೇ ಇದೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಬಾಲಗೆ ಏನು ಹೇಳಬೇಕೋ ತಿಳಿಯದ ಹಾಗೆ ಆಗುತ್ತದೆ. ಆತ ಸತ್ಯ ಬಳಿ ಬಂದು "ಅಮಾಟೆಯಿಂದ ಇಷ್ಟೆಲ್ಲ ಆಯಿತು" ಎಂದಾಗ ಸತ್ಯ "ಹಣ ಕಳೆದುಕೊಂಡು ಆಗಿದೆ. ನಿಮಗೆ ಆ ಹಣವನ್ನು ವಾಪಸ್ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ" ಎಂದು ಹೇಳಿ ಸತ್ಯ ಫೋನ್ ಇಡುತ್ತಾಳೆ.

ಇತ್ತ ಮನೆ ಒಳಗೆ ಬಂದ ಬಾಲ, ಜಾನಕಿ ಹಾಗೂ ಗಿರಿಜಾ ಬಳಿ ಕೂಡಿಟ್ಟ ಹಣ ಎಲ್ಲಾ ಇದೀಗ ಕಳ್ಳತನ ಆಗಿದೆ ಎಂದು ನಡೆದ ವಿಚಾರವನ್ನು ಎಲ್ಲರ ಮುಂದೆ ಹೇಳಿದಾಗ ಗಿರಿಜಾ ಹಾಗೂ ಜಾನಕಿಗೆ ಆತಂಕ ಆಗುತ್ತದೆ. "ನಾವು ಅದೆಷ್ಟು ಕಷ್ಟಪಟ್ಟು ಹಣ ಸಂಪಾದನೆ ಮಾಡುತ್ತೇವೆ. ಆದರೆ ಆ ಹಣವೆಲ್ಲ ನಿಮಿಷದಲ್ಲಿ ಯಾರಾದರೂ ತೆಗೆದುಕೊಂಡು ಹೋದರೆ ಅದಕ್ಕಿಂತ ದೊಡ್ಡ ಆಘಾತ ಇನ್ನೇನಿದೆ ಬಾಲ. ನನಗೆ ಬಹಳ ಬೇಸರ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ" ಎಂದು ಬಹಳ ಬೇಸರದಿಂದ ಹೇಳುತ್ತಾಳೆ.
ಬಾಲ ಮಾತಿಗೆ ಬೇಸರಪಟ್ಟ ಗಿರಿಜಮ್ಮ
ಇತ್ತ ಜಾನಕಿ ಕೂಡ ನೀನು ಅಷ್ಟು ಕಷ್ಟ ಪಟ್ಟು ಕೂಡಿಟ್ಟ ಹಣ ಎಲ್ಲಾ ಹೋಗಿ ಬಿಟ್ಟಿತಲ್ಲ ಎಂದು ಸಂಕಟ ಪಡುತ್ತಾ ಇರುತ್ತಾರೆ. ಇತ್ತ ದಿವ್ಯಾಗೆ ಅಮಾಟೆಯ ಮೇಲೆ ಬಹಳ ಸಿಟ್ಟು ಬರುತ್ತದೆ. ಅಮಾಟೆಗೆ ಬಾಯಿಗೆ ಬಂದ ಹಾಗೆ ಆತನನ್ನು ಬೈಯ್ಯುತ್ತಲೇ ಇರುತ್ತಾಳೆ. "ನಿನ್ನಿಂದಾಗಿ ಬಾಲ ಸಂಪಾದನೆ ಮಾಡಿದ ಅಷ್ಟು ದುಡ್ಡು ನೀರಲ್ಲಿ ಹೋಮ ಮಾಡಿದ ಹಾಗೆ ಆಯಿತಲ್ಲ. ಯಾಕೆ ಹೀಗೆಲ್ಲ ಮಾಡಿದೆ" ಎಂದು ಹೇಳುತ್ತಾರೆ.
ದಿವ್ಯಾ ಮಾತು ಕೇಳಿ ಅಮಾಟೆ ಬೇಸರ
ಈ ಮಾತುಗಳನ್ನು ಕೇಳಿದ ಅಮಾಟೆಗೆ ಬಹಳ ನೋವು ಆಗುತ್ತದೆ. ಇದನ್ನೆಲ್ಲ ನೋಡಿದ ಬಾಲ ಅಮಾಟೆಗೆ ಸಮಾಧಾನ ಮಾಡುತ್ತಾರೆ. ಅಮಾಟೆ "ನೀನು ಬೇಕಂತಲೆ ಹೀಗೆಲ್ಲ ಮಾಡಿದ್ದು ಅಲ್ಲ ಅಲ್ವಾ? ನೀನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಆ ಹಣ ಸಿಕ್ಕೆ ಸಿಗುತ್ತದೆ" ಎಂದು ಹೇಳುತ್ತಾರೆ. ಕೊನೆಗೆ ದಿವ್ಯಾ "ಆತ ತಪ್ಪು ಮಾಡಿದ್ದಕ್ಕೆ ನಾನು ಆತನನ್ನು ಬೈದಿದ್ದು. ಆದರೆ ಬಾಲ ನೀನು ನನ್ನನ್ನೇ ಬಯ್ಯುತ್ತಾ ಇರುತ್ತೀಯಾ ಅಲ್ವಾ?" ಎಂದಾಗ ಬಾಲ ಏನೂ ಮಾತನಾಡದೆ ಸುಮ್ಮನೆ ಆಗುತ್ತಾನೆ.

ಗಿರಿಜಮ್ಮಗೆ ಮದುವೆಯ ಚಿಂತೆ
ಇತ್ತ ಗಿರಿಜಮ್ಮಗೆ ಮದುವೆಯ ಟೆನ್ಶನ್ ಶುರು ಆಗುತ್ತದೆ. ಹೀಗಾದರೆ, ಮದುವೆ ಹೇಗೆ ಮಾಡುವುದು ಎಂದು ಆಲೋಚನೆ ಮಾಡುತ್ತಾರೆ. ಆಗ ದಿವ್ಯಾ ಮನಸ್ಸಿನಲ್ಲಿ ಅಜ್ಜಿಗೆ ಬೈಯ್ಯುತ್ತ ಇರುತ್ತಾಳೆ. "ಮದುವೆ ಅಂತೆ ಮದುವೆ ಆ ಟಾಪಿಕ್ ಈಗ ಯಾಕೆ ಮಾತನಾಡುವುದು?" ಎಂದು ಆಗ ಜಾನಕಿ ಕೂಡ ಅದೇ ಮಾತು ಹೇಳುತ್ತಾಳೆ. "ಮದುವೆ ಸಿಂಪಲ್ ಆದರೂ ಸಹ ಮುಹೂರ್ತದಲ್ಲಿ ಆಗಲಿ" ಎಂದು ಹೇಳುತ್ತಾರೆ.


Click it and Unblock the Notifications











