Sathya Serial: ಹಣದ ಆಮಿಷಕ್ಕೆ ಬಲಿಯಾದ ಶಿವು; ಸತ್ಯ ವಿರುದ್ದ ನಿಲ್ಲುತ್ತಾನಾ?
ಸತ್ಯ ಜೊತೆ ಕೆಲಸ ಮಾಡಿದವರು ಎಲ್ಲರೂ ಸಸ್ಪೆಂಡ್ ಆಗಿ ಮನೆಯಲ್ಲಿ ಇದ್ದಾರೆ. ಕೆಲವರು ಆ ಸಂಬಳವನ್ನು ನಂಬಿಕೊಂಡು ತನ್ನ ಸಂಸಾರವನ್ನು ನಡೆಸುತ್ತಿರೋರು. ಅಂತಹವರಲ್ಲಿ ಶಿವು ಕೂಡ ಒಬ್ಬರು. ಶಿವು ಮನೆಯಲ್ಲಿ ಕೂಡ ಬಹಳ ಕಷ್ಟವಿದೆ. ಆತನಿಗೆ ಮಗಳ ಶಾಲೆಯ ಫೀಸ್ ಕಟ್ಟಲು ಬಹಳ ಕಷ್ಟ ಪಡಬೇಕಾದ ಸ್ಥಿತಿ ಬಂದುಬಿಟ್ಟಿದೆ. ಈ ವಿಚಾರ ಸತ್ಯಗೂ ತಿಳಿದಿದೆ.
ಶಿವು ಜೊತೆ ಸ್ವಲ್ಪ ಮಾತನಾಡಬೇಕು ಎಂದು ಅಂದುಕೊಂಡು ಆತನ ಮನೆಗೆ ಸತ್ಯಾ ಬರುತ್ತಾಳೆ. ಬಾಲ ಹಣ ಕಳೆದುಕೊಂಡಿರುವ ವಿಚಾರವನ್ನು ಸತ್ಯ ಬಳಿ ಹೇಳುತ್ತಾಳೆ. ಆಗ ಆತನಿಗೆ ಏನು ಮಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ. ತುಂಬಾ ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ಕಂಡೋರ ಪಾಲಾಯಿತು ಎಂದು ಬಹಳ ನೊಂದುಕೊಂಡಿರುತ್ತಾನೆ. ಸತ್ಯ ಈ ವಿಚಾರದಲ್ಲಿ ಶಿವು ಸಹಾಯ ಮಾಡಬಹುದಾ ಎಂದು ಯೋಚಿಸುತ್ತಾಳೆ.

ಶಿವು ಬಳಿ ಬಂದ ಸತ್ಯ "ಶಿವು ಅವರೆ ನನ್ನ ಬಾವನಿಗೆ ಆನ್‌ಲೈನ್‌ನಿಂದಾ ಬಹಳ ದೊಡ್ಡ ದೋಖಾ ಆಗಿದೆ" ಎಂದು ನಡೆದ ವಿಚಾರ ವಿವರಿಸುತ್ತಾಳೆ. ಆಗ ಶಿವು ಕೂಡ "ಹೌದು ಮೇಡಂ, ಈ ರೀತಿ ಬಹಳ ಜನರಿಗೆ ಆಗಿದೆ" ಎಂದು ಹೇಳಿ, "ಈಗ ನಾವು ಕೆಲಸದಲ್ಲಿ ಇಲ್ಲ ಅಲ್ವಾ. ನಾವು ಹೇಗೆ ಕೆಲಸ ಮಾಡುವುದು?" ಎಂದಾಗ ಸತ್ಯ ಹೇಗಾದರೂ ಮಾಡಿ ನನ್ನ ಬಾವನಿಗೆ ನ್ಯಾಯ ಒದಗಿಸಿ ಕೂಡಲೇ ಬೇಕು ಎಂದು ಹೇಳುತ್ತಾಳೆ. ಇನ್ನೂ ಸತ್ಯ ಹಾಗೂ ಶಿವು ಮನೆಯಿಂದ ಹೊರಗೆ ಹೋಗಬೇಕಾದರೆ, ಶಿವು ಮಗಳು ಫೀಸ್ ಬಗ್ಗೆ ಹೇಳುತ್ತಾಳೆ. ಇದು ಸತ್ಯ ಕಿವಿಗೆ ಬೀಳುತ್ತದೆ.
ಶಿವು ಕಷ್ಟಕ್ಕೆ ಸ್ಪಂದಿಸಲು ಮುಂದಾದ ಸತ್ಯ
ಶಿವು ಬಹಳ ಕಷ್ಟದಲ್ಲಿ ಇದ್ದಾರೆ. ಅವರಿಗೆ ಹೇಗಾದರೂ ಮಾಡಿ ಸಹಾಯ ಮಾಡಬೇಕು ಎಂದು ಕೊಂಡು ಇರುತ್ತಾಳೆ. ಈ ಬಗ್ಗೆ ಕಾರ್ತಿಕ್ ಬಳಿ ಕೂಡ ಮಾತನಾಡುತ್ತಾಳೆ. ಇನ್ನೂ ಹರ್ಶಿತ್ ತಂದೆ ಸತ್ಯಗೆ ಆಪಾದನೆ ಬರುವ ಹಾಗೆ ಮಾಡಬೇಕು. ಆಕೆಯನ್ನು ಈ ಕೇಸ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಸಿ ಹಾಕಬೇಕು. ಆಕೆಯ ಕೆಲಸ ಕಳೆದುಕೊಳ್ಳಬೇಕು ಎಂದು ಹೇಳಿ ಶಿವುಗೆ ಹಣದ ಆಮಿಷ ಒಡ್ಡುತ್ತಾನೆ. ಆದರೆ ಶಿವುಗೆ ಬಹಳ ಕಷ್ಟ ಇದ್ದಿದ್ದರಿಂದ ಆ ಹಣ ನೋಡಿದ ಕೂಡಲೇ ಆತನಿಗೆ ಮಗಳ ನೆನಪು ಬರುತ್ತದೆ.
ಮಗಳ ನೆನಪಾಗಿ ಹಣ ತೆಗೆದುಕೊಂಡ ಶಿವು
ಶಿವು ಹಣ ತೆಗೆದುಕೊಂಡು ಅಲ್ಲಿಂದ ಹೋಗುತ್ತಾನೆ. ಇತ್ತ ದಿವ್ಯಾ ಮಾತ್ರ ಬಾಲ ನನಗೆ ಬೇಕು ಎಂದು ಹಠ ಹಿಡಿಯುತ್ತಾಳೆ. "ನನಗೆ ನೀವು ಬೇಕು ಬಾಲ. ನನ್ನನ್ನು ಬಿಟ್ಟು ಬೇರೆ ಮದುವೆ ಆಗುವ ನಿರ್ಧಾರ ಮಾಡಬೇಡಿ" ಎಂದು ಬೇಡಿಕೊಂಡರು ಬಾಲ ಮನಸ್ಸು ಕರಗುವುದು ಇಲ್ಲ. "ದಿವ್ಯಾ ನಾನು ರುಕ್ಕುವನ್ನು ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನೀನು ನನ್ನ ಜೀವನದಲ್ಲಿ ಮುಗಿದ ಅಧ್ಯಾಯ ಅಷ್ಟೇ" ಎಂದು ಹೇಳುತ್ತಾನೆ. ಇದನ್ನು ನೋಡಿದ ದಿವ್ಯಾಗೆ ಮುಂದೇನು ಹೇಳಬೇಕೋ ಗೊತ್ತಾಗುವುದಿಲ್ಲ.

ಮದುವೆ ಪತ್ರಿಕೆ ಸುಟ್ಟು ಹಾಕಿದ ದಿವ್ಯಾ
ರುಕ್ಕು ಹಾಗೂ ಬಾಲ ಮದುವೆ ಆಗುವುದು ನಿಶ್ಚಿಯ ಆಗಿರುತ್ತದೆ. ಆದರೆ ಇದನ್ನು ದಿವ್ಯಾಗೆ ಅರಗಿಸಿ ಕೊಳ್ಳಲು ಆಗುತ್ತಿಲ್ಲ. ರುಕ್ಕು ಹಾಗೂ ಬಾಲ ಮದುವೆ ಲಗ್ನ ಪತ್ರಿಕೆ ಪ್ರಿಂಟ್ ಆಗಿ ಬರುತ್ತದೆ. ಇದನ್ನು ನೋಡಿದ ದಿವ್ಯಾಗೆ ತಲೆ ಕೆಟ್ಟು ಹೋಗುತ್ತದೆ. ಆಕೆ ಆ ಲಗ್ನ ಪತ್ರಿಕೆಯನ್ನು ಸುಟ್ಟು ಹಾಕುತ್ತಾಳೆ. ಆದರೆ ಬಾಲ ಮಾತ್ರ ದಿವ್ಯಾ ಮನಸ್ಸು ಅರ್ಥ ಮಾಡಿಕೊಳ್ಳದೆ ಆಕೆಗೆ ಸಿಕ್ಕಾಪಟ್ಟೆ ಬಯ್ಯುತ್ತಾನೆ.


Click it and Unblock the Notifications











