Sathya: ತಂಗಿಗೆ ನ್ಯಾಯ ಕೊಡಿಸಲು ಮುಂದಾದ ಸತ್ಯ; ಮುನಿಸ್ವಾಮಿ ಮಗಳಿಗೆ ನ್ಯಾಯ ಸಿಗುತ್ತಾ?
ಸತ್ಯಗೆ ಇದೀಗ ದಿಕ್ಕೇ ತೋಚದ ಹಾಗೆ ಆಗಿದೆ. ಮುನಿಸ್ವಾಮಿ ಮಗಳಿಗೆ ಹೀಗೆ ಆಯಿತಲ್ವ. ಪಾಪ ಅವರು ಅದೆಷ್ಟು ಬೇಸರ ಪಟ್ಟುಕೊಂಡು ಇದ್ದಾರೆ. ಇರುವ ಒಬ್ಬಳೇ ಒಬ್ಬಳು ಮಗಳನ್ನು ದುಷ್ಟರು ಈ ರೀತಿ ಮಾಡಿ ಬಿಸಾಡಿದ್ದಾರೆ ಅಲ್ವಾ ಎಂದು ಸತ್ಯ ಜೊತೆ ಬಹಳ ಹೇಳಿ ಅತ್ತು ಬಿಡುತ್ತಾರೆ. ಸತ್ಯಗೆ ಮುನಿ ಸ್ವಾಮಿಗೆ ಹೇಗೆ ಸಹಾಯ ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗಿದೆ. ಇನ್ನೂ ಸತ್ಯ ಯಾವುದೇ ಕಾರಣಕ್ಕೂ ಮುನಿಸ್ವಾಮಿ ಅವರ ಮಗಳಿಗೆ ಅನ್ಯಾಯ ಆಗಬಾರದು. ಆಕೆಗೆ ಚಿತ್ರ ಹಿಂಸೆ ನೀಡಿದ ವ್ಯಕ್ತಿ ಯಾರೇ ಆಗಿರಬಹುದು. ಅವರನ್ನು ಮಾತ್ರ ಸುಮ್ಮನೆ ಬಿಡುವುದು ಇಲ್ಲ ಎಂದು ಸತ್ಯ ಹೇಳುತ್ತಾಳೆ .
ಇತ್ತ ಸತ್ಯ ಗುಟ್ಟಾಗಿ ತನಿಖೆ ಶುರು ಮಾಡುತ್ತಾಳೆ. ಯಾರಿಗೂ ಹೇಳದ ಹಾಗೆ ನೋಡಿ ಕೊಳ್ಳುತ್ತಾರೆ. ಮೀಡಿಯಾದವರಿಗೆ ತಿಳಿದರೆ ಎಲ್ಲರಿಗೆ ಕೂಡ ಈ ವಿಚಾರ ತಿಳಿಯುತ್ತದೆ. ಅದಕ್ಕೆ ಯಾರ ಗಮನಕ್ಕೂ ಈ ವಿಚಾರ ಬರುವುದು ಬೇಡ ಎನ್ನುವುದು ಸತ್ಯ ವಾದ. ಇದರ ಕುರಿತಾಗಿ ಮನೆಯಲ್ಲಿ ಕೂಡ ಚರ್ಚೆ ಮಾಡುತ್ತಿರುತ್ತಾಳೆ. ಸತ್ಯಗೆ ತನ್ನ ಅತ್ತೆಯ ಸಪೋರ್ಟ್ ಬಹಳ ದೊಡ್ಡ ಬಲ ಬಂದ ಹಾಗಿರುತ್ತೆ. ಮುನಿಸ್ವಾಮಿ ಮಗಳನ್ನು ರಾಮಚಂದ್ರ ರಾಯರ ಗೆಳೆಯನ ಮಗನೇ ಹಾಳು ಮಾಡಿ ಬಿಸಾಕಿ ಇರುತ್ತಾನೆ.

ಆದರೆ, ಈ ವಿಚಾರ ರಾಮಚಂದ್ರ ರಾಯರ ಗೆಳೆಯನಿಗೆ ತಿಳಿದಿದೆ. ಆದರೆ, ಮಗ ಮಾಡಿದ ಕೆಲಸಕ್ಕೆ ಕೋಪಗೊಂಡ ಅವರು ಆತನ ಕೆನ್ನೆಗೆ ಹೊಡೆಯುತ್ತಾರೆ. "ಈ ವಿಚಾರ ಪೊಲೀಸರಿಗೆ ತಿಳಿದರೆ ಮಾತ್ರ ನಿನ್ನ ಕಥೆ ಅಷ್ಟೇ" ಎಂದು ಹೇಳುತ್ತಾರೆ. ಮುನಿಸ್ವಾಮಿ ಅವರ ಮಗಳಿಗೆ ಸತ್ಯ ಸಾಂತ್ವನ ಹೇಳುತ್ತಾಳೆ. "ಯಾವುದೇ ಕಾರಣಕ್ಕೂ ಕುಗ್ಗಬಾರದು, ನನ್ನನ್ನು ನೀನು ಅಕ್ಕ ಎಂದು ಹೇಳುತ್ತಿಯಾ? ಈ ತಂಗಿಗೆ ಹೀಗೆ ಆಗಿರುವಾಗ ಅಕ್ಕ ಅದು ಹೇಗೆ ಸಹಿಸಿಕೊಂಡು ಇರುತ್ತಾಳೆ" ಎಂದು ಬಹಳ ಬೇಸರದಲ್ಲಿ ಹೇಳುತ್ತಾಳೆ.
ಸತ್ಯ ಮನೆಗೆ ಆಗಮಿಸಿದ ಲಾಯರ್
ಇನ್ನೂ ರೇಪ್ ಕೇಸ್ ಬಗ್ಗೆ ತನಿಖೆ ಶುರು ಮಾಡುತ್ತಾಳೆ. ಮನೆಗೆ ಲಾಯರ್‌ನನ್ನು ಕರೆಸುತ್ತಾರೆ. ಲಾಯರ್‌ನನ್ನು ನೋಡಿದ ಸತ್ಯ ಮಾತ್ರ "ನಮಸ್ತೆ ನೀವು ಬಂದಿದ್ದು ಬಹಳ ಒಳ್ಳೆಯದೇ ಆಯಿತು" ಎಂದಾಗ ಲಾಯರ್ "ನನಗೆ ಬಹಳ ಖುಷಿ ಆಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಲು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಸತ್ಯಗೆ ಮಾತ್ರ ಬಹಳ ಖುಷಿ ಆಗುತ್ತದೆ. ಇತ್ತ ರುಕ್ಕು ದರ್ಶಿನಿ ಹೋಟೆಲ್ ಮಾತ್ರ ಬಹಳ ಪ್ರಚಾರ ಆಗುತ್ತದೆ. ಎಲ್ಲಾ ಯೂಟ್ಯೂಬ್ ನವರು ಹೋಟೆಲ್‌ಗೆ ಬಂದು ತಿಂದು ಅದರ ರಿವ್ಯೂ ವನ್ನು ಅಪ್ಲೋಡ್ ಮಾಡುತ್ತಿದ್ದರು.

ಬಾಲ ನಡೆಸುತ್ತಿರೋ ಹೋಟೆಲ್ ಭಾರಿ ಫೇಮಸ್
ಇದರಿಂದಾಗಿ ಹೆಚ್ಚು ಹೆಚ್ಚಾಗಿ ಜನರು ಬಾಲನ ಹೋಟೆಲ್‌ಗೆ ಬರಲು ಶುರು ಮಾಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಬಹಳ ಖುಷಿ ಪಡುತ್ತಾರೆ. ಬಾಲ ಕಷ್ಟ ಪಟ್ಟು ದುಡಿಮೆ ಮಾಡಿದ್ದಕ್ಕೆ ಇದೀಗ ಒಳ್ಳೆಯ ಸ್ಥಿತಿಗೆ ಬಂದಿದ್ದಾನೆ ಎಂದು ಹೇಳುತ್ತಿರುತ್ತಾರೆ. ರುಕ್ಕು ದರ್ಶನಿ ಹೋಟೆಲ್ ಶುರು ಆದ ದಿನದಿಂದ ಕೂಡ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದೆ. ಇದರಿಂದ ಜನರಿಗೆ ಬಹಳಷ್ಟು ಖುಷಿ ನೀಡುತ್ತಿದೆ ಕೂಡ. ಊಟ ದಲ್ಲು ಹಾಗೆಯೇ ಅಡುಗೆ ಮಾಡುವ ವೇಳೆ ಕೂಡ ಅಷ್ಟೇ ಶುಚಿತ್ವಕ್ಕೆ ಬಾಲ ಬೆಲೆ ನೀಡುತ್ತಾನೆ.
ರುಕ್ಕು ಹೆಸರು ಕೇಳಿ ಉರಿದು ಬಿದ್ದ ದಿವ್ಯಾ
ಇದೀಗ ಬಾಲನ ಹೋಟೆಲ್ ಚೆನ್ನಾಗಿ ನಡೆಯುತ್ತಿದೆ. ಆದರೆ ಇದೆಲ್ಲ ಕೇಳಿದ ದಿವ್ಯಾಗೆ ಬಹಳ ಖುಷಿ ಆಗುತ್ತದೆ. ಆದರೆ ರುಕ್ಕು ದರ್ಶಿನಿ ಎನ್ನುವ ಹೆಸರನ್ನು ಹೇಳಿದರೆ ಮಾತ್ರ ದಿವ್ಯಾ ಬಹಳ ಕೋಪ ಮಾಡಿಕೊಳ್ಳುತ್ತಾಳೆ.


Click it and Unblock the Notifications











