Sathya: ಕೊನೆಗೂ ಆರೋಪಿಯ ಜಾಡು ಹಿಡಿದು ಹೊರಟ ಸತ್ಯ; ಸಂತ್ರಸ್ತೆ ಉಷಾಗೆ ನ್ಯಾಯ ಸಿಗುತ್ತಾ?
ಸತ್ಯಗೆ ಇದೀಗ ಯಾರು ಮುನ್ ಸ್ವಾಮಿ ಮಗಳನ್ನು ಅತ್ಯಾಚಾರ ಮಾಡಿ ಬೀದಿಯಲ್ಲಿ ಬೇಸಾಡಿ ಹೋಗಿರುವುದು ಯಾರು ಎಂಬುವುದು ತಿಳಿದಿದೆ. ಆದರೆ, ಈ ವಿಚಾರ ಸರಿಯೋ ಅಥವಾ ನಾನು ಏನಾದರೂ ತಪ್ಪು ತಿಳಿದುಕೊಂಡಿದ್ದೇನಾ ಎಂದು ಸತ್ಯ ತಿಳಿದುಕೊಳ್ಳಬೇಕಾಗಿದೆ. ಒಂದು ವೇಳೆ ಸತ್ಯ ಅಂದುಕೊಂಡದ್ದು ನಿಜ ಎಂದಾದರೆ, ಆರೋಪಿಗಳು ಯಾರೇ ಆಗಿರಲಿ ಅವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಒಂದು ಹುಡುಗಿಗೆ ಇಷ್ಟೆಲ್ಲ ಅನ್ಯಾಯ ಆಗಿದೆ ಅಂದ್ಮೇಲೆ ನಾನಂತೂ ಸುಮ್ಮನೆ ಬಿಡುವುದೇ ಇಲ್ಲ ಎಂದು ಸತ್ಯ ಹೇಳುತ್ತಾಳೆ.
ಇತ್ತ ರಾಮಚಂದ್ರ ರಾಯರ ಗೆಳೆಯನ ಮಗನ ಕಾರಿಗೂ, ಹಾಗೆಯೇ ಅತ್ಯಾಚಾರ ಮಾಡಿ ಪರಾರಿ ಆಗುತ್ತಿರುವ ಆರೋಪಿಗಳ ಕಾರು ಒಂದೇ ಆಗಿರುವುದರಿಂದ ಸತ್ಯಗೆ ಅನುಮಾನ ಬಲವಾಗುತ್ತದೆ. ಕಾರ್ತಿಕ್ ಗೆಳೆಯನೇ ಆಗಿದ್ದರೂ, ಆತನೇ ಈ ಕೆಲಸ ಮಾಡಿರಬಹುದು ಎನ್ನುವ ಅನುಮಾನ ಆಕೆಗೆ ಮೂಡುತ್ತದೆ. ಇನ್ನೂ ಮುನಿಸ್ವಾಮಿ ಹಾಗೂ ಇನ್ನೊಬ್ಬ ಕಾನ್‌ಸ್ಟೇಬಲ್ ಬಳಿ ಸತ್ಯ ಉಷಾಳನ್ನು ಕರೆದುಕೊಂಡು ಬರಲು ಹೇಳುತ್ತಾಳೆ.

ಯಾಕೆಂದರೆ, ಸತ್ಯ ಜೊತೆ ಇರುವ ಕಾರ್ ಡೀಟೇಲ್ಸ್ ಹಾಗೆಯೇ ಆರೋಪಿಯ ಫೋಟೋ ಇರುವುದರಿಂದ ಉಷಾ ಇದನ್ನು ನೋಡಿಯಾದರೂ ಕಂಡು ಹಿಡಿಯಬಹುದು ಎಂದುಕೊಂಡು ಆಕೆಯನ್ನು ಕರೆದುಕೊಂಡು ಬರಲು ಹೇಳುತ್ತಾಳೆ. ಸತ್ಯಗೆ ಆ ಕಾರು ಯಾರದ್ದು ಎನ್ನುವ ವಿಚಾರ ಮಾತ್ರ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಉಷಾ ಹೇಳುವ ಪ್ರತಿ ಮಾತಿನ ಮೇಲೆ ಸತ್ಯ ಆರೋಪಿಗಳ ಮೇಲೆ ತೆಗೆದುಕೊಳ್ಳುವ ಆಕ್ಷನ್ ಮೇಲೆ ನಿಂತಿದೆ. ಇತ್ತ ಬಾಲಗೆ ದಿವ್ಯಾ ಮೇಲೆ ಅಸಹ್ಯ ಹುಟ್ಟಿದೆ.
ದಿವ್ಯಾಳನ್ನು ಕಂಡರೆ ಬಾಲಗೆ ಕೋಪ
"ನಾನು ಮನಸಾರೆ ಪ್ರೀತಿ ಮಾಡಿದ ಹುಡುಗಿ ಇಂತಹ ನೀಚ ಮನಸ್ಸು ಉಳ್ಳವಳು ಎಂದು ನನಗೆ ಮೊದಲೇ ತಿಳಿದಿದ್ದರೆ, ಖಂಡಿತವಾಗಿಯೂ ನಾನು ಅವಳನ್ನು ಪ್ರೀತಿ ಮಾಡುತ್ತಿರಲಿಲ್ಲ. ಇವತ್ತು ಸರಿ ಹೋಗುತ್ತಾಳೆ. ನಾಳೆ ಸರಿ ಹೋಗುತ್ತಾರೆ ಎಂದುಕೊಂಡಿದ್ದೆ. ಆದರೆ, ದಿವ್ಯಾ ಯಾವತ್ತೂ ಸರಿ ಹೋಗುವುದು ಇಲ್ಲ. ಆಕೆಯ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದಾಳೆ" ಎಂದು ಬಹಳ ಬೇಸರದಿಂದ ಹೇಳುತ್ತಾನೆ. ನಾನು ಹಿಂದೆಲ್ಲ ಕಳ್ಳತನ ಮಾಡಿ, ಬೇರೆಯವರಿಗೆ ಮೋಸ ಮಾಡಿ ಬದುಕು ಕಟ್ಟಿಕೊಂಡು ಇರುತ್ತಿದ್ದೆ. ಆದರೆ ಇದೀಗ ನಾನು ಬಹಳ ಪ್ರಾಮಾಣಿಕವಾಗಿ ಬದುಕುತ್ತಿದ್ದೇನೆ. ಆದರೆ, ಈಗ ಹೀಗೆ ಆಗುತ್ತಿದೆ ಎಂದು ಮನದಲ್ಲಿ ಇರುವ ನೋವನ್ನು ಹೊರ ಹಾಕುತ್ತಾನೆ.
ಅಳಿಯನ ಮಾತು ಕೇಳಿ ನೊಂದ ಜಾನಕಿ
ಜಾನಕಿಗೆ ಮಗಳು ಮಾಡಿದ ಮನೆ ಹಾಳು ಮಾಡುವ ಕೆಲಸಕ್ಕೆ ಮಾತ್ರ ಬಹಳ ಬೇಸರದಿಂದ ಇರುತ್ತಾಳೆ. ನನ್ನ ಮಗಳಿಂದ ಅಳಿಯಂದಿರು ಬಹಳ ಬೇಸರ ಪಟ್ಟುಕೊಂಡಿದ್ದಾರೆ ಎಂದು ಒಳಗೊಳಗೇ ಕೊರಗುತ್ತಾರೆ. ರುಕ್ಕುಗೆ ತನ್ನ ಬಾವ ಅದೆಷ್ಟು ಕಷ್ಟ ಪಟ್ಟು ಹೋಟೆಲ್ ನಿರ್ವಹಣೆ ಮಾಡುತ್ತಿದ್ದರು. ಆದರೆ ದಿವ್ಯಾ ಒಳಿತನ್ನು ಯಾವತ್ತೂ ಮಾಡುತ್ತಿರಲಿಲ್ಲ. ಅದರ ಜೊತೆ ಕೆಡುಕು ಕೂಡ ಮಾಡುತ್ತಿದ್ದಾಳೆ.

ರುಕ್ಕು ಮೇಲೆ ಕಿಡಿ ಕಾರಿದ ದಿವ್ಯಾ
ಬಾಲ ಮೇಲೆ ದಿವ್ಯಾಗೆ ಬಹಳ ಪ್ರೀತಿ. ಆದರೆ, ರುಕ್ಕು ಕಂಡರೆ ಬಹಳ ಹೊಟ್ಟೆ ಕಿಚ್ಚು. ನನ್ನ ಗಂಡನನ್ನು ನೀನು ಅದು ಹೇಗೆ ಮದುವೆ ಮಾಡಿಕೊಳ್ಳುತ್ತಿಯಾ ನಾನು ನೋಡುತ್ತೇನೆ. ಕಂಡವರ ಗಂಡನನ್ನು ನನ್ನ ಗಂಡ ಎಂದು ಹೇಳುತ್ತಿದ್ದಿಯಾ. ನಿನಗೆ ಇದು ಸರಿ ಅನ್ನಿಸುತ್ತದೆಯೇ ಎಂದು ದಿವ್ಯಾ ಪದೇ ಪದೆ ರುಕ್ಕುವನ್ನು ಪ್ರಶ್ನೆ ಮಾಡುತ್ತಿರುತ್ತಾಳೆ.


Click it and Unblock the Notifications











