Sathya: ಮಗನಿಗೆ ಲಾಠಿಯಿಂದ ಹೊಡೆದಿದ್ದಕ್ಕೆ ಸತ್ಯ ಕೆನ್ನೆಗೆ ಬಾರಿಸಿದ ಸೀತಾ; ಮುಂದೇನು?

By ಪೂರ್ವ

ಸತ್ಯಗೆ ತನ್ನ ಗಂಡ ಎಂದರೆ ಪ್ರಪಂಚ. ಆತನಿಗೆ ಸ್ವಲ್ಪ ನೋವಾದರೂ ಬಹಳ ಬೇಸರ ಮಾಡಿಕೊಳ್ಳುತ್ತಾರೆ. ಹಿರಿಯ ಅಧಿಕಾರಿಯೊಬ್ಬರು ಕಾರ್ತಿಕ್ ಸರಿಯಾಗಿ ಹೊಡೆದು ಇರುತ್ತಾರೆ. ಇದನ್ನು ನೋಡಿದ ಸತ್ಯ ಆತನಿಗೆ ಮುಲಾಮು ಹಚ್ಚುತ್ತಾರೆ. ಹಾಗೆಯೇ ಸತ್ಯ ಅವಸ್ಥೆ ನೋಡಿದ ಕಾರ್ತಿಕ್‌ಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ. ಇದನ್ನೆಲ್ಲ ನೋಡಿ ಸತ್ಯ ಬಹಳ ಬೇಸರದಿಂದ ಮನೆಗೆ ಬರುತ್ತಾಳೆ. ಸತ್ಯ ಬರುವುದನ್ನೇ ಕಾಯುತ್ತಿದ್ದ ಸೀತಾ ಆಕೆಯನ್ನು ನೋಡಿ ಬಹಳ ಕೋಪಿಸಿಕೊಂಡಿರುತ್ತಾಳೆ.

ಸತ್ಯನನ್ನು ನೋಡಿದ ಸೀತಾ ಆಕೆಯನ್ನು ಮನೆಗೆ ಬರದ ಹಾಗೆ ತಡೆಯುತ್ತಾರೆ. ಸೀತಾ ಬಳಿ ಸತ್ಯ ಏನನ್ನೋ ಹೇಳಲು ಹೊರಡುತ್ತಾಳೆ. ಆದರೆ, ಆ ಮಾತನ್ನು ಕೇಳದ ಸೀತಾ ಮಾತ್ರ ಸತ್ಯ ಕೆನ್ನೆಗೆ ಹೊಡೆಯುತ್ತಾರೆ. ಆದರೆ, ಸತ್ಯಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಹಾಗೆಯೇ ಆಕೆಯ ಕಣ್ಣುಗಳಲ್ಲಿ ನೀರು ತುಂಬಿ ಬರುತ್ತದೆ. ಸೀತಾ ಮತ್ತೆ ಹೇಳುತ್ತಾಳೆ. "ನನ್ನ ಮಗನಿಗೆ ನೀನು ಲಾಠಿಯಲ್ಲಿ ಹೊಡೆದಿದ್ದಿಯಾ? ನಿನಗೆ ನಾನು ಏನು ಹೇಳಬೇಕು. ಗಂಡ ಅನ್ನೋದನ್ನೂ ನೋಡದೆ ಹೊಡೆದೆ ಅಲ್ವಾ . ಅವನಿಗೆ ಏನಾಗಿರಬೇಡ. ಹೇಗಾಗಿರಬೇಡ." ಎನ್ನುತ್ತಾರೆ. ಇದೇ ವೇಳೆ ಕೀರ್ತನಾ ಕೂಡ ಉಪ್ಪು ಖಾರ ಹಾಕಿ ಮಾತನಾಡುತ್ತಾಳೆ.

Sathya Kannada Serial may 13th episode update

ತನ್ನ ತಮ್ಮ ಜೈಲು ವಾಸ ಅನುಭವಿಸುತ್ತಿದ್ದಾನೆ ಎಂದು ತಿಳಿದರೂ ಕೀರ್ತನಾ ಮಾತ್ರ ಏನೂ ಗೊತ್ತಿಲ್ಲದ ಹಾಗೆ ನಡೆದುಕೊಳ್ಳುತ್ತಾರೆ. ಹಾಗೆಯೇ ಸತ್ಯಗೆ ಆಗುತ್ತಿರುವ ಅವಮಾನವನ್ನು ನೋಡಿ ಆಕೆ ಖುಷಿ ಪಡುತ್ತಾಳೆ. ಕಾರ್ತಿಕ್‌ನನ್ನು ಹೊಡೆದಳು ಎನ್ನುವ ಕಾರಣಕ್ಕೆ ಸತ್ಯ ಮೇಲೆ ಕುಟುಂಬದವರಿಗೆ ಬಹಳ ಕೋಪ ಬರುತ್ತದೆ. ಹಾಗೆಯೇ ಆಕೆಯ ಮೇಲೆ ಮುಗಿ ಬೀಳುತ್ತಾರೆ. ಹಾಗೆಯೇ ಸತ್ಯನನ್ನ ಮನೆಯಿಂದ ಸೀತಾ ದಬ್ಬಿ ಬಿಡುತ್ತಾಳೆ.

ಜಾನಕಿ ಮಾತಿಗೆ ಸಿಡಿದ ಸೀತಾ

ಇತ್ತ ಜಾನಕಿ ಸೀತಾಗೆ ಕರೆ ಮಾಡಿ ಹೇಗಿದ್ದಾರೆ ಎಂದೆಲ್ಲ ತಿಳಿದುಕೊಳ್ಳಲು ಟ್ರೈ ಮಾಡುತ್ತಾಳೆ. ಆದರೆ, ಸೀತಾ ಮಾತ್ರ ಜಾನಕಿಗೆ "ನೀವು ಹೇಗೆ ಆಕೆಯನ್ನು ಸಾಕಿ ಬೆಳೆಸಿದ್ದೀರ. ಆಕೆಗೆ ಗಂಡ ಕುಟುಂಬಕ್ಕಿಂತ ಆ ಪೊಲೀಸ್ ಕೆಲಸವೇ ಜಾಸ್ತಿಯಾಗಿದೆ" ಎಂದೆಲ್ಲ ಬಹಳ ಕಟುವಾಗಿ ನಿಂದಿಸುತ್ತಾರೆ. ಗಿರಿಜಮ್ಮ ಕೂಡ ಸೀತಾಗೆ ತಿಳಿ ಹೇಳುವ ಪ್ರಯತ್ನ ಮಾಡಿದಾಗ ಆಕೆಗೆ ನಿಮ್ಮ ಬಾಯಿಯನ್ನು ಮುಚ್ಚಿ ಬಿಡಿ, ದಯವಿಟ್ಟು ಎಂದು ಹೇಳುತ್ತಾರೆ.

Sathya Kannada Serial may 13th episode update

ಗಿರಿಜಮ್ಮನಿಗೆ ಗೌರವ ಕೊಡದ ಸೀತಾ

ಇದನ್ನು ಕೇಳಿದ ಗಿರಿಜಮ್ಮಗೆ ಏನು ಹೇಳಬೇಕು ಎಂದು ತಿಳಿಯದೇ ಆಗುತ್ತದೆ. ಆಕೆಗೆ ಬಹಳ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಸೀತಾ ಜಾನಕಿ ಹಾಗೂ ಗಿರಿಜಾ ಬಳಿ ಸಂಬಂಧ ಕಡಿದು ಹೋಗುವ ಮಾತುಗಳನ್ನು ಆಡುತ್ತಾರೆ. ದಿವ್ಯಾಗೆ ಅವರಿಬ್ಬರೂ ಸೀತಾ ಬಳಿ ಮಾತನಾಡುತ್ತಿರುವುದು ತಿಳಿಯುತ್ತದೆ. ಆದರೆ, ಸತ್ಯಳನ್ನು ಮನೆಯಿಂದ ಹೊರಗೆ ಹಾಕಿದ ಸಂಗತಿ ಮಾತ್ರ ಮನೆ ಮಂದಿಗೆ ತಿಳಿದಿರುವುದಿಲ್ಲ.

ಸತ್ಯಳನ್ನು ಅವಮಾನಿಸಿದ ಸೀತಾ

ಸತ್ಯಗೆ ಎಲ್ಲಾ ಕಡೆ ಅವಮಾನ ಆಗುತ್ತಿದೆ . ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಹೇಗಾದರೂ ಮಾಡಿ ಅದೆಲ್ಲವನ್ನೂ ಸಹಿಸಿಕೊಳ್ಳಬೇಕು. ಸತ್ಯವನ್ನು ಹೇಗಾದರೂ ಮಾಡಿ ಹೊರಗೆ ಬರುವ ಹಾಗೆ ಮಾಡಬೇಕು. ಇಲ್ಲವಾದರೆ ಕಷ್ಟ ಆಗುತ್ತದೆ. ಕಾರ್ತಿಕ್ ಹೀಗೆಯೇ ಕೈದಿ ಹಾಗೆ ಇರುವುದನ್ನು ನೋಡಲು ಸತ್ಯನಿಂದಾ ಸಾಧ್ಯ ಆಗುವುದು ಇಲ್ಲ . ಹೇಗಾದರೂ ಮಾಡಿ ಆತನನ್ನು ಬಿಡುಗಡೆ ಮಾಡಬೇಕು ಎಂದು ಪಣ ತೊಡುತ್ತಾರೆ.

More from Filmibeat

English summary
Sathya Kannada Serial may 13th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X